ಚಿಕ್ಕಮಗಳೂರುಎಕ್ಸ್ಪ್ರೆಸ್: ಕರ್ನಾಟಕರಾಜ್ಯದ ಎಸ್ಸಿ ಮತ್ತುಎಸ್ಟಿ ಸಮುದಾಯದ ಬಹುವರ್ಷಗಳ ಕನಸಾದ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿರುವ ಕರ್ನಾಟಕರಾಜ್ಯ ಸರ್ಕಾರಕ್ರಮವನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಎಸ್.ಸಿ ಮೋರ್ಚಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹಂಪಯ್ಯ ತಿಳಿಸಿದರು.
ನಗರದ ಪ್ರಸ್ಕ್ಲಬ್ನಲ್ಲಿ ಮಾತನಾಡಿ ಎಸ್ಸಿ ಮೀಸಲಾತಿಯನ್ನು ಶೇ ೧೫ ರಿಂದ ಶೇ ೧೭, ಹಾಗೂ ಎಸ್ಟಿ ಮೀಸಲಾತಿಯನ್ನು ಶೇ ೩ ರಿಂದ ಶೇ ೭ರವರೆಗೆ ಹೆಚ್ಚಿಸಿರುವುದು ಅತ್ಯಂತ ಸ್ವಾಗತಾರ್ಹ. ಈ ಮುಖಾಂತರದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿದ ತಮಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದ ಎಸ್ಸಿ ಮೋರ್ಚಾದ ಪ್ರಮುಖಕಾರ್ಯಕರ್ತರ ಸಮಾವೇಶವನ್ನು ಬುಧವಾರ ನಗರದ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ
ಕಾರ್ಯಕ್ರಮಕ್ಕೆಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿರವರು, ಶಾಸಕರು, ಸಿ.ಟಿ.ರವಿ, ಕೊಳ್ಳೇಗಾಲ ಶಾಸಕರಾದ ಎನ್.ಮಹೇಶ್,ಕುಡಚಿವಿಧಾನಸಭಾಕ್ಚೇತ್ರ ಶಾಸಕರಾದ ಪಿ.ರಾಜೀವ್, ಹೊಸದುರ್ಗಶಾಸಕರಾದಗೂಳಿಹಟ್ಟಿ ಶೇಖರ್ಕರ್ನಾಟಕರಾಜ್ಯ ಸಫಾಯಿಕರ್ಮಚಾರಿ ನಿಗಮ ಮಂಡಳಿಅಧ್ಯಕ್ಷರಾದ ಕೆ.ಪಿ. ವೆಂಕಟೇಶ್ ಜಿಲ್ಲಾಧ್ಯಕ್ಷರಾದ ಹೆಚ್.ಸಿ.ಕಲ್ಮರುಡಪ್ಪ ನಗರಸಭಾಅಧ್ಯಕ್ಷರು ವರಸಿದ್ಧಿ ವೇಣುಗೋಪಾಲ್, ನಗರಾಭಿವೃದ್ಧಿ ಪ್ರಾಧಿಕಾರಅಧ್ಯಕ್ಷರು ಆನಂದ್.ಸಿ ರಾಜ್ಯಕಾರ್ಯಕಾರಿಣಿ ಸದಸ್ಯರು ಎಸ್ಸಿ ಮೋರ್ಚಾ ಲಕ್ಷ್ಮಣ ನಾಯ್ಕ ಮಹೇಶ್ ಈಶ್ವರಹಳ್ಳಿಈ.ಆರ್ಅಧ್ಯಕ್ಷರುಗ್ರಾಮಾಂತರ ಮಂಡಲ, ನಗರ ಮಂಡಲ ಅಧ್ಯಕ್ಷರು ಮಧುಕುಮಾರ್ರಾಜ್ಅರಸ್, ಮತ್ತು ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮಣ್ ನಾಯ್ಕ, ಕೇಶವಮೂರ್ತಿ, ನರಸಿಂಹ ಮೂರ್ತಿ, ಯತೀಶ್, ಮೋಹನ್ ಕುಮಾರ್ ಉಪಸ್ಥಿತರಿದ್ದರು.
SC Morcha Workers Convention