ಚಿಕ್ಕಮಗಳೂರು: ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು, ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಸರಾಯರ ಶಿಷ್ಯರಾದ ಕನಕದಾಸರು ವ್ಯಾಕರಣ, ತರ್ಕ , ಮೀಮಾಂಸೆ ಸಾಹಿತ್ಯವನ್ನು ಅಭ್ಯಸಿಸಿ ೫ ಮಹಾನ್ ಕಾವ್ಯಗಳನ್ನು ರಚಿಸಿದ್ದಾರೆ. ರಾಮಧಾನ್ಯಚರಿತವು ಬಹಳ ಪ್ತಸ್ತುತವಾಗಿದ್ದು, ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಈ ಕಾವ್ಯ ೧೫೬ ಪದ್ಯಗಳನ್ನು ಒಳಗೊಂಡಿದ್ದು, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಕೃತಿ ಎಂದರು.
೧೫-೧೬ನೇ ಶತಮಾನದಲ್ಲಿಯೇ ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎನ್ನುವ ಐಕ್ಯತೆಯ ಸಂದೇಶ ಸಾರಿದ್ದು, ಪ್ರಸ್ತುತ ಅದನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ ಎಂದರು.ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯ ಮಾರ್ಗ ಒಂದೇ ಸಾಕು ಎನ್ನುವುದಕ್ಕೆ ಉಡುಪಿ ಮಠದಲ್ಲಿ ಕನಕನ ಕಿಂಡಿಯಲ್ಲಿ ಕೃಷ್ಙ ಅವರಿಗೆ ಒಲಿದ ಘಟನೆಯೇ ಸಾಕ್ಷಿ ಎಂದು ಅವರು ಹೇಳಿದರು.
ಗಳಿಸಿದ್ದರಲ್ಲಿ ಪರರಿಗಾಗಿ ಮೀಸಲಿಡಬೇಕು, ಜಾತಿಯ ಮೂಲವನ್ನು ಪ್ರಶ್ನೆ ಮಾಡುವ ಮೂಲಕ ಸಮಾಜದಿಂದ ಜಾತಿವ್ಯವಸ್ಥೆಯನ್ಬು ಕಿತ್ತುಹಾಕಬೇಕು ಮತ್ತು ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ, ಮನುಷ್ಯ ತನ್ನ ಕರ್ತವ್ಯ ಮಾಡಬೇಕು ಎನ್ನುವ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕೆ.ಪಿ ವೆಂಕಟೇಶ್, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಬೆಂಗಳೂರು, ಶ್ರೀ ವರಸಿದ್ಧಿ ವೇಣುಗೋಪಾಲ್ ಮಾನ್ಯ ಅಧ್ಯಕ್ಷರು, ನಗರಸಭೆ, ಚಿಕ್ಕಮಗಳೂರು, ಚಿಕ್ಕಮಗಳೂರು ಡಿವೈಎಸ್ಪಿ ಪುರುಷೋತ್ತಮ್ ಹಾಗೂ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.
Kanakadasa is a great contribution to the field of literature