ಚಿಕ್ಕಮಗಳೂರುಎಕ್ಸ್ಪ್ರೆಸ್: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮುದ್ರಣ ಮಾಧ್ಯಮವನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಬಸವ ಮಂದಿರದ ಡಾ|ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಿಸಿದರು.
ಮಂಗಳವಾರ ನಗರದ ಡಾ|ಬಿ.ಆರ್.ಅಂಬೇಡ್ಕರ್ದಲ್ಲಿ ಅಕ್ಷರ ತೋರಣ ದಿನಪತ್ರಿಕೆ ದಶಮಾನೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಪತ್ರಿಕೆ ಕಟ್ಟಿ ಬೆಳೆಸಬೇಕಾದರೇ ಅಲ್ಲಿ ಒಬ್ಬ ವ್ಯಕ್ತಿ ಶ್ರಮದಿಂದ ಸಾಧ್ಯವಿಲ್ಲ. ಸಮೂಹ ಶ್ರಮವನ್ನು ಬಯಸು ತ್ತದೆ. ಅಕ್ಷರ ತೋರಣ ದಿನಪತ್ರಿಕೆ ಯಶಸ್ವಿ ೧೦ ವರ್ಷಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ, ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭಾ ಹಾರೈಸಿದರು.
ಇಂದಿನ ಆಧುನಿಕ ಯುಗದಲ್ಲಿ ಮುದ್ರಣ ಮಾಧ್ಯಮದಲ್ಲಿ ಪತ್ರಿಕೆಗಳನ್ನು ತರುವುದು ಸುಲಭದ ಮಾತಲ್ಲ, ಸವಾಲಿನ ಕೆಲಸ. ಮುದ್ರಣ ಮಾಧ್ಯಮ ಹಿನ್ನಡೆ ಸಾಧಿಸುತ್ತಿದೆಯೋ ಎಂಬ ಬಗ್ಗೆ ಗಂಭೀರವಾಗಿ ಯೋ ಜನೆ ಮಾಡಬೇಕಿದೆ. ಸಾಪ್ತಾಹಿಕ ಪುರಾವಣೆ ಪುಟಗಳನ್ನು ಕಡಿಮೆ ಮಾಡಿ ಕ್ಯೂಆರ್ ಕೋಡ್ ಇಟ್ಟು ಆಸ ಕ್ತರು ಓದುವಂತೆ ಮಾಡುತ್ತಿದೆ. ಒಂದು ರೀತಿ ಅಂತರ್ಜಾಲದಲ್ಲಿ ಒಗ್ಗುವಂತೆ ಮಾಡಲಾಗುತ್ತಿದೆ ಎಂದರು.
ಮುದ್ರಣ ಮಾಧ್ಯಮ ಮುನ್ನಡೆಸಲು ಓದುಗರು ಮತ್ತು ಜಾಹೀರಾತು ಬೇಕು. ಸುದ್ದಿ, ವಿಶ್ಲೇಷಣೆ, ಸಾಹಿತ್ಯವನ್ನು ಸೃಜನಶೀಲವಾಗಿ ಓದುಗರಿಗೆ ಮುಟ್ಟಿಸುವ ಕಲಾತ್ಮಕತೆ ಗೊತ್ತಿರುವ ತಂಡ ಜೊತೆಗಿರಬೇಕು. ಹಾಗೀದ್ದಾಗ ಮಾತ್ರ ಮುದ್ರಣ ಮಾದ್ಯಮ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಲಿದೆ ಎಂದು ತಿಳಿಸಿ ದರು.
ಮಾಧ್ಯಮ ಸಂವಿಧಾನದ ನಾಲ್ಕನೇ ಆಧಾರಸ್ತಂಭವಾಗಿದ್ದು, ಆಧುನಿಕ ಯುಗದಲ್ಲಿ ಅವಸರದ ಪತ್ರಿಕೋ ದ್ಯಮ ನಡೆಯತ್ತಿದೆ. ಅವರಸದ ಪತ್ರಿಕೋದ್ಯಮಕ್ಕೆ ಅವಕಾಶ ನೀಡದೆ ಆರೋಗ್ಯಕರವಾದ ಸುದ್ದಿಗಳನ್ನು ನೀಡುತ್ತಾ ಪತ್ರಿಕೆ ಇನಷ್ಟು ಬೆಳೆಯಲಿ ಎಂದು ಆಶಿಸಿದರು.
ಜೆಡಿಎಸ್ ಮುಖಂಡ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ಸುಲಭದ ಮಾತಲ್ಲ, ಅಂತರರ್ಜಾಲ ಪರಿಣಾಮದಿಂದ ಪತ್ರಿಕೆ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿ ಮೆಯಾಗುತ್ತಿದೆ. ಇದರ ನಡುವೆ ಅಕ್ಷರ ತೋರಣ ಪತ್ರಿಕೆ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ. ಪತ್ರಿಕೆ ಇನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಅಕ್ಷರ ತೋರಣ ಪತ್ರಕೆ ಸಂಪಾದಕ ಪಿ.ರಾಜೇಶ್ ಪತ್ರಿಕೆಯನ್ನು ಅತ್ಯಂತ ಬದ್ಧತೆ, ಶ್ರದ್ಧೆಯಿಂದ ಕಟ್ಟಿ ಬೆಳೆಸಿದ್ದಾರೆ. ಮುದ್ರಣ ಮಾಧ್ಯಮ ಪತ್ರಿಕೆಯನ್ನು ಕಟ್ಟಿ ಬೆಳೆಸುವುದು ಸವಾಲಿನ ಕೆಲಸವಾಗಿದ್ದು, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕುಗ್ಗದೆ. ೧೦ವರ್ಷಗಳ ಕಾಲ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಪತ್ರಿಕೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಾ ಕೋರಿದರು.
ಸಿಪಿಐ ಮುಖಂಡ ಅಮ್ಜದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್, ಸಾಹಿತಿ ಬಿ.ತಿಪ್ಪೇರುದ್ರಪ್ಪ, ದರ್ಪಣ ಪತ್ರಕೆ ಸಂಪಾದಕ ಪ್ರಸನ್ನಗೌಡಹಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಅಕ್ಷರ ತೋರಣ ಪತ್ರಿಕೆ ಸಂಪಾದಕ ಪಿ.ರಾಜೇಶ್, ಸಹ ಸಂಪಾದಕ ಪ್ರವೀಣ್ ಸೇರಿದಂತೆ ಅನೇಕರು ಇದ್ದರು. ಶಹಬುದ್ದೀನ್ ಸ್ವಾಗತಿಸಿ ವಂದಿಸಿದರು.
Aksara toraṇa