ಚಿಕ್ಕಮಗಳೂರುಎಕ್ಸ್ಪ್ರೆಸ್: ಹಿರೇಮಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಪಕ್ಷಾತೀತವಾಗಿ ಜನರ ಪ್ರೀತಿ ವಿಶ್ವಾಸವನ್ನು ಶಾಸಕ ಸಿ.ಟಿ.ರವಿ ಪಡೆದಿದ್ದಾರೆಂದು ಬಿಜೆಪಿ ಮುಖಂಡ ರೇವುನಾಥ್ ತಿಳಿಸಿದರು.
ಹಿರೇಮಗಳೂರಿನ ಸ್ಮಶಾಣದ ಜಾಗವನ್ನು ಪರಿಶೀಲಿಸಿ ಮಾತನಾಡಿ, ಹಿರೇಮಗಳೂರು ಸ್ಮಶಾಣವನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಸಿ.ಟಿ.ರವಿ ಅವರಿಗೆ ೨ ವರ್ಷದ ಹಿಂದೆ ಮನವಿ ಸಲ್ಲಿಸಲಾಗಿತ್ತು, ಆ ಮನವಿಗೆ ಸ್ಪಂದಿಸಿ ಹಿರೇಮಗಳೂರು ಸ್ಮಶಾಣದಲ್ಲಿ ಬೋರ್ವೆಲ್, ಶೆಡ್, ರಸ್ತೆ, ಕಾಂಪೌಂಡ್ ಮತ್ತು ವಿದ್ಯುತ್ ಕಂಬಗಳನ್ನು ನಿರ್ಮಿಸಲು ೨೩ ಲಕ್ಷ ರೂ ಬಿಡುಗಡೆ ಮಾಡಿದ್ದಾರೆ, ಜತೆಗೆ ಗ್ರಾಮಕ್ಕೆ ಅಂಬೇಡ್ಕರ್ ವೃತ್ತ, ಚಥುಸ್ಪದ ರಸ್ತೆ, ದೇವಾಲಯದ ಅಭಿವೃದ್ಧಿ, ಯಾತ್ರಿನಿವಾಸ್ ನಿರ್ಮಿಸಿ, ಹಿರೇಮಗಳೂರಿನ ಜನರ ಪ್ರೀತಿ, ವಿಶ್ವಾಸ ಪಡೆದಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಕೇಶವಮೂರ್ತಿ, ನಂದನ್ಕುಮಾರ್, ಉಮೇಶ್, ಅರುಣ್ಕುಮಾರ್, ರವಿಕುಮಾರ್, ಕಾಂತರಾಜ್ ಉಪಸ್ಥಿತರಿದ್ದರು.
Hiremagaluru Cemetery