ಚಿಕ್ಕಮಗಳೂರುಎಕ್ಸ್ಪ್ರೆಸ್: ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ೨೭ ಕೋಟಿ ರೂ ಅನುದಾನವನ್ನು ನೀಡಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ತೇಗೂರಿನ ಡಾ. ಅಬ್ದುಲ್ ಕಲಾಂ ವಸತಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಜನ ವಿಕಾಸ ಕಾರ್ಯಕ್ರಮ ಯೋಜನೆಯಡಿ ಅಲ್ಪ ಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜು ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ೨೭ ಕೋಟಿ ರೂ ಅನುದಾನವನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಜಿಲ್ಲೆಗೆ ಇಷ್ಟೋಂದು ಅನುದಾನ ಬಂದಿರುವುದು ಇತಿಹಾಸದಲ್ಲೇ ಮೊದಲುಬಾರಿಯಾಗಿದ್ದು, ಎಪಿಜೆ ಅಬ್ದುಲ್ ಕಲಾಂ ಹಾಸ್ಟೆಲ್ ದುರಸ್ಥಿಕಾರ್ಯ ಮತ್ತು ಪಿಯು ಕಾಲೇಜು ನಿರ್ಮಾಣದ ಭೂಮಿ ಪೂಜೆ ಇಂದು ನೆರೆವೇರಿಸಲಾಗಿದೆ ಎಂದು ತಿಳಿಸಿದರು.
ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಇಡೀ ದೇಶದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ, ಬೇಲೂರು ರಸ್ತೆಯಲ್ಲಿ ೧೨ ಕೋಟಿ ರೂ ವೆಚ್ಚದ ವಸತಿನಿಲಯದ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ, ಅಲ್ಪ ಸಂಖ್ಯಾತರು ದೇಶದ ಮುಖ್ಯವಾಹಿನಿಯ ಒಂದು ಭಾಗವಾಗಿದ್ದು, ಅವರ ಬದುಕಿನಲ್ಲಿ ಬದಲಾವಣೆ ತರುವುದರ ಜತೆಗೆ ಆತ್ಮ ನಿರ್ಬರ ಕನಸ್ಸಾಗಬೇಕೆಂಬುದು ಪ್ರದಾನ ಮಂತ್ರಿಗಳ ಕನಸ್ಸಾಗಿದೆ, ೧೪೦ ಕೋಟಿ ಭಾರತೀಯರನ್ನು ಶಿಕ್ಷಣದ ಮೂಲಕ ಸ್ವಾವಲಂಭಿಗಳನ್ನಾಗಿ ಮಾಡುವ ಉದ್ದೇಶದಿಂದ, ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಲಾಗಿದೆ ಎಂದರು.
ಗುಣಮಟ್ಟದಲ್ಲಿ ಯಾವುದೆ ಕೊರತೆಯಾಗದಂತೆ ಕೆಲಸ ಮಾಡಲಾಗುವುದು, ಹಲವು ವರ್ಷಗಳ ಪ್ರಯತ್ನದ ನಂತರ ಮೆಡಿಕಲ್ ಕಾಲೇಜಿನ ತರಗತಿ ಪ್ರಾರಂಭವಾಗಲಿದೆ, ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ೬೩೦ ಕೋಟಿ ರೂಗಳು ಮಂಜೂರಾಗಿದ್ದು, ಕ್ರಿಕೇಟ್, ಫುಟ್ಬಾಲ್ ಸ್ಟೇಡಿಯಂ ಮತ್ತು ನೂತನ ವಿಶ್ವ ವಿದ್ಯಾಲಯ ೧೫ ದಿನದಲ್ಲಿ ಮಂಜೂರಾಗಲಿದ್ದು, ಜಿಲ್ಲೆಯು ಮುಂದಿನ ದಿನಗಳಲ್ಲಿ ವಿದ್ಯಾನಗರವಾಗಿ ಬದಲಾಗುವ ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಅಭಿವೃದ್ಧಿ ಎಂಬುದು ನಿಂತ ನೀರಾಗದೆ ನಿರಂತರವಾಗಿ ಹರಿಯುವ ಗಂಗೆಯಾಗಬೇಕು, ಅಭಿವೃದ್ಧಿ ಪಥದಲ್ಲಿ ಭಾರತ ಜಗತ್ತಿನ ಪ್ರಥಮ ರಾಷ್ಟ್ರವಾಗಬೇಕು, ಭಾರತೀಯರು ವಿಶ್ವ ಒಂದು ಕುಟುಂಬ ಎಂದು ವಿಶ್ವದ ಜನರ ಬಗ್ಗೆ ಆಲೋಚನೆ ಮಾಡುವವರು ನಾವು, ಸಾಂಸ್ಕೃತಿಕ ಹಿನ್ನಲೆ ಹೊಂದಿರುವ ದೇಶ ನಮ್ಮದು, ಜಿ೨೦ ರಾಷ್ಟ್ರದ ಅಧ್ಯಕ್ಷತೆಯು ಭಾರತದ ಹೆಗಲಿಗೆ ದೋರೆತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರ, ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ್, ಸದಸ್ಯ ಮಹೇಶ್, ಜಿಲ್ಲಾ ಆರೋಗ್ಯ ರಕ್ಷಾಸಮಿತಿ ಸದಸ್ಯ ಸಿದ್ಧಿಕ್, ನಗರಸಭೆ ನಾಮನಿರ್ದೇಶಿತ ಸದಸ್ಯ ರಾಬರ್ಟ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ, ಶರಣಬಸಪ್ಪ, ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಅಮೃತ ಮಹೋತ್ಸವದ ಆಚರಣೆ ಮತ್ತು ಕಟ್ಟಡ ಉದ್ಘಾಟನೆ ಸಮಾರಂಭವು ಬುಧವಾರ ಬ್ಯಾಂಕಿನ ಆವರಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್ ತಿಳಿಸಿದರು.
27 crore grant