ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರದ ವಾರ್ಡ್ ನಂ.೧೦ ರ ಉಂಡೇದಾಸರಹಳ್ಳಿಯಲ್ಲಿದ್ದ ಅಂಬೇಡ್ಕರ್ ಭವನದ ಸುತ್ತಲೂ ಕಾಂಪೌಂಡ್ ಹಾಗೂ ಗೇಟ್ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಂಕುಸ್ಥಾಪನೆ ನೆರೆವೇರಿಸಿದರು.
ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಹಲವು ವರ್ಷಗಳಿಂದ ಕಾಂಪೌಂಡ್ ಹಾಗೂ ಗೇಟ್ ಇಲ್ಲದೆ ಹಾಗೆ ಉಳಿದಿದ್ದ ಅಂಬೇಡ್ಕರ್ ಭವನದ ಉಪಯೋಗದ ದೃಷ್ಟಿಯ ಹಿನ್ನಲೆಯಲ್ಲಿ ಇಂದು ಅಂಬೇಡ್ಕರ್ ಭವನದ ಸುತ್ತಲು ಸ್ವಚ್ಚಗೊಳಿಸಿ ಅದರ ಸುತ್ತಲು ಸುಸರ್ಜಿತವಾದ ಕಾಂಪೌಂಡ್ ಹಾಗೂ ಗೇಟ್ ನಿರ್ಮಾಣ ೧೧.೫೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರಸಭೆ ವತಿಯಿಂದ ಅಂಗನವಾಡಿಗಳಿಗೂ ಕಾಂಪೌಂಡ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರ ಜತೆಗೆ ಸ್ವಚ್ಚತೆಗೆ ಆದ್ಯತೆ ನೀಡಿದಂತಾಗುತ್ತದೆ, ಡಿ.೧೭ ರಿಂದ ಜನರ ಬಳಿಗೆ ನಗರಸಭೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರಸಭೆ ಅಧಿಕಾರಿಗಳು ಪ್ರತಿ ವಾರ್ಡ್ಗಳಿಗೆ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ಸ್ಥಳಿಯ ನಗರಸಭಾ ಸದಸ್ಯರಾದ ರೂಪಕುಮಾರ್, ನಗರಸಭೆ ಆಯುಕ್ತರಾದ ಬಸವರಾಜ್, ಇಂಜಿನಿಯರ್ ರಶ್ಮಿ ಸ್ಥಳಿಯರಾದ ಸಂಜು, ಪ್ರಮೋದ್, ಸಂತೋಷ್ ಜೈನ್, ಮತ್ತಿತರರು ಉಪಸ್ಥಿತರಿದ್ದರು.
Foundation stone for construction of compound