ಚಿಕ್ಕಮಗಳೂರು: ಬೆಳೆಗಾರರು ಒತ್ತುವರಿ ಮಾಡಿರುವ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಕ್ಕೆ ಸಂಬಂಧಪಟ್ಟ ಪ್ರಸ್ತಾವವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯವಂತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್) ಅಧ್ಯಕ್ಷ ಡಾ.ಎಚ್.ಟಿ. ಮೋಹನ್ಕುಮಾರ್ ತಿಳಿಸಿದ್ದಾರೆ.
ಕೆಜಿಎಫ್ ಮತ್ತು ಅಂಗಸಂಸ್ಥೆಗಳು ಸಹಯೋಗದಲ್ಲಿ ಮನವಿ ಸಲ್ಲಿಸ ಲಾಯಿತು. ಹಾಸನ, ಚಿಕ್ಕಮಗಳೂರ, ಕೊಡಗು ಜಿಲ್ಲೆಯ ಬೆಳೆಗಾರರು ಇದ್ದರು. ಸಚಿವರಿಗೆ ಒತ್ತುವರಿ ವಿಚಾರ ಮನವರಿಕೆ ಮಾಡಿಕೊಟ್ಟು ಒತ್ತುವರಿ ಮಾಡಿರುವ ಎಲ್ಲ ಬೆಳೆಗಾರರಿಗೂ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಬೇಕು ಎಂದು ಮನವಿ ಮಾಡಲಾಯಿತು.
ಅಧಿವೇಶನದಲ್ಲಿ ಪ್ರಸ್ತಾವ ಮಂಡಿಸಲಾಗುವುದು. ಗುತ್ತಿಗೆ ದರ ಕುರಿತು ನಿಗದಿ ಚರ್ಚಿಸಲಾಗಿದೆ. ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ 30 ವರ್ಷದವರೆಗೆ ನೀಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು ಎಂದು ಅವರು ತಿಳಿಸಿದ್ದಾರೆ.
ಕಾಫಿ ಮಂಡಳಿ ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ್ ಅವರನ್ನೂ ಭೇಟಿ ಮಾಡಲಾಯಿತು. ಅಕಾಲಿಕ ಮಳೆಯಿಂದ ಕಾಫಿ ಹಾನಿ ಕುರಿತು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು ಎಂದು ಮನವಿ ಮಾಡಲಾಯಿತು. ಕಾಫಿ ಬೆಳೆಗಾರರ 10 ಎಚ್ಪಿವರೆಗಿನ ವಿದ್ಯುತ್ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ವಿಚಾರ ಪ್ರಸ್ತಾಪವಾಗಿ 10 ಹೆಕ್ಟೇರ್ವರೆಗಿನಬ ಸಣ್ಣ ಬೆಳೆಗಾರಿಗೆ ಭೂ ಹಿಡುವಳಿ ಪತ್ರದ ಆಧರಿಸಿ ಪ್ರಮಾಣ ಪತ್ರ ಕೊಡಲು ಕಾಫಿ ಮಂಡಳಿಯಿಂದ ಕ್ರಮ ವಹಿಸುವುದಾಗಿ ತಿಳಿಸಿದರು ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Lease encroachment land