ಜೀವನದ ಸೋಲು,ಗೆಲುವು ದಾಟಿ ಯಶಸ್ಸು ಸಾಧಿಸುವ ಪ್ರೇರಣೆಯನ್ನು ಕ್ರೀಡೆಗಳು ಕಲಿಸುತ್ತವೆ.ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ
ಪ್ರತಿಯೊಬ್ಬರೂ ತಮ್ಮ ದೇಹ ಹಾಗೂ ಮನಸ್ಸನ್ನು ಸದೃಢಗೊಳಿಸಬಹುದು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ,ಜಿಲ್ಲಾ ಪಂಚಾಯತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಇಂದು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವ್ರಪ್ರಥಮವಾಗಿ ಸಕಾ೯ರ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿದೆ.ರಾಜ್ಯದ ದೇಸೀ ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಾದ ಕಬ್ಬಡಿ,ಕೊಕ್ಕೊ,, ಕುಸ್ತಿ , ಎತ್ತಿನ ಬಂಡಿಯಂತಹ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು.ಕ್ರೀಡೆಯಲ್ಲಿ ಸೋಲು ಗೆಲುವು ಸಹಜ,ಸ್ಪಧಾ೯ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಿ, ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀತಿ೯ ತರಬೇಕು ಎಂದ ಅವರು ಶಿವಾಜಿ ಮಹಾರಾಜ ಮರಾಠ ಸಾಮಾಜ್ಯ ನಿಮಾ೯ಣಕ್ಕೆ ಬಳಸಿದ್ದು ಆಟವನ್ನೆ, ಆ ಆಟದ ಮೂಲಕ ಗೆಲ್ಲುವ ವಿಶ್ವಾಸವನ್ನು ಮೂಡಿಸಿದ ಆ ಮೂಲಕ ಆಟಗಾರರನ್ನೆ ಸೈನಿಕರನ್ನಾಗಿ ತಯಾರಿಸಿ,ಆ ಸೈನ್ಯದ ಮೂಲಕ ಬೃಹತ್ ಮೆಾಗಲ್ ಸಾಮ್ರಾಜ್ಯವನ್ನು ನೆಲ ಕಚ್ಚಿಸಿ ಮರಾಠ ಸಾಮ್ರಾಜ್ಯದ ಸ್ಥಾಪನೆಗೆ ಕಾರಣನಾದ.,ಅದು ಆಟದ ಮೂಲಕ ಸಾಧ್ಯವಾಗಿದ್ದು, ಆಟದ ಮೂಲಕ ಮನಸ್ಸು ಕಟ್ಟೊಣ,ನಾಡು ಕಟ್ಟೊಣ ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿ ಜಿ. ಪ್ರಭು ಮಾತನಾಡಿ ಕ್ರೀಡೆಗಳು ಮನಸ್ಸಿಗೆ ಮುದ ನೀಡುವ ಅಥವಾ ದೈಹಿಕ ಶಕ್ತಿಯನ್ನು ವೃದ್ದಿಸುವ ಸಾಧನವಲ್ಲ,,ಗ್ರಾಮೀಣ ಕ್ರೀಡೆಗಳು 02. ಉದ್ದೇಶವನ್ನು ಪೂರೈಕೆ ಮಾಡುತ್ತವೆ . ಒಂದು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕ ನೆಲೆಯಲ್ಲೂ ತುಂಬಾ ಪ್ರಮುಖವಾಗುತ್ತವೆ. ಕ್ರೀಡೆ ವ್ಯಕ್ತಿಗೆ ಶಿಸ್ತನ್ನು ಕಲಿಸುತ್ತದೆಯಲ್ಲದೆ ಸಂಯಮ ಕ್ರಿಯಾಶೀಲತೆ, ಸಕಾರಾತ್ಮಕ ಚಿಂತನೆಯ ಜೊತೆಗೆ ಆರೋಗ್ಯ ಹಾಗೂ ಪರಿಶ್ರಮದ ಮಹತ್ವವನ್ನು ಕಲಿಸುತ್ತದೆ.ಗ್ರಾಮೀಣ ಮಟ್ಟದ ಕ್ರೀಡಾ ಕೂಟಕ್ಕೆ ಅದರದೇ ಆದ ಮಹತ್ವವಿದೆ, ಅದು ಸಾಮಾಜಿಕವಾಗಿ ,ಸಾವ೯ತ್ರಿಕವಾಗಿ ಒಂದು ತಂಡವಾಗಿ ರೂಪಿಸುತ್ತದೆ.ಸಾಮೂಹಿಕವಾಗಿ ಕ್ರೀಡೆಗಳು ರಾಷ್ಟ್ರಪ್ರೇಮ,ದೇಶ ಭಕ್ತಿ ಮೂಡಿಸಲು ಕಾರಣವಾಗುತ್ತದೆಯಲ್ಲದೆ ಸದಾ ನಮ್ಮನ್ನು ಜಾಗೃತರನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಕಾಯ೯ಕ್ರಮದಲ್ಲಿ ಸಫಾಯಿ ಕಮ೯ಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಹಿಂದುಳಿದ ವಗ೯ಗಳ ಕಲ್ಯಾಣ,ಇಲಾಖೆ ಉಪನಿದೇ೯ಶಕ ಸೋಮಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿದೇ೯ಶಕಿ ಮಂಜುಳ ಹುಲ್ಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
District level rural sports event