ಚಿಕ್ಕಮಗಳೂರುಎಕ್ಸ್ಪ್ರೆಸ್: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೋತೆಗೆ ಕ್ರೀಡಾಭ್ಯಾಸವನ್ನು ಮಾಡಿದಾಗ ಹೆಚ್ಚಿನ ಆತ್ಮವಿಶ್ವಾಸ ಹೊಂದಿ ಗುರಿ ಮುಟ್ಟಬಹುದೆಂದು ಸಮಾಜ ಸೇವಕಿ ಪಲ್ಲವಿ ಸಿ.ಟಿ.ರವಿ ತಿಳಿಸಿದರು.
ಗುರುವಾರ ನಗರದ ಒಕ್ಕಲಿಗರ ಸಮುದಾಯದ ಭವನದಲ್ಲಿ ಜೆ.ವಿ.ಎಸ್ ಶಾಲೆಯ ಕ್ರೀಡಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಗೌರವ ಹೊಂದಬಹುದು ವಿದ್ಯಾರ್ಥಿಗಳು ಜೀವನದಲ್ಲಿ ಯಾವುದಾದರು ಕ್ಷೇತ್ರದಲ್ಲಿ ಸಾದಿಸಿ ಶಾಲೆ, ಪೋಷಕರು ಮತ್ತು ದೇಶಕ್ಕೆ ಗೌರವ ಬರುವ ರೀತಿಯಲ್ಲಿ ನೆಡೆದುಕೊಳ್ಳಬೇಕೆಂದರು.
ಪೋಷಕರು ಮಕ್ಕಳ ಆಸಕ್ತಿಯ ಮೇರೆಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡಬೇಕು ಕ್ರೀಡೆಯಿಂದ ವಿದ್ಯಾರ್ಥಿಗಳು ಆರೋಗ್ಯವಂತರಾಗಿ ಇರಬಹುದು ಎಂದರು.ಗ್ರಾಮೀಣ ಭಾಗದಲ್ಲಿ ಹುಟ್ಟಿದ ಹಲವಾರು ಪ್ರತಿಭೆಗಳು ಕ್ರೀಡೆಯಿಂದ ನಮ್ಮ ಜಿಲ್ಲೆಗೆ ಮತ್ತು ದೇಶಕ್ಕೆ ಗೌರವ ತಂದಿದ್ದಾರೆ ನೀವುಗಳು ಸಹ ಕ್ರೀಡೆಯಲ್ಲಿ ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಅಧಿಕಾರಿ ಎಸ್.ಆರ್.ಮಂಜುನಾಥ್ ಮಾತನಾಡಿ ಜೆ.ವಿ.ಎಸ್ ಶಾಲೆ ನಗರದ ಮದ್ಯಭಾಗದಲ್ಲಿದು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಎಸ್.ಎಸ್.ಎಲ್.ಸಿ ಯಲ್ಲಿ ಶೇ ೧೦೦ ರಷ್ಟು ಫಲಿತಾಂಶ ಬರುತ್ತಿದೆ ಎಂದರು.
ಗ್ರಾಮೀಣ ಭಾಗದ ಹಿಮದಾಸ್ ಎಂಬ ಹುಡುಗಿ ಕ್ರೀಡೆಯಲ್ಲಿ ಸಾಧನೆ ಮಾಡಿ ಇಂದು ಅಂತರಾಷ್ಟ್ರೀಯ ಕ್ರೀಡಾಪಟು ಆಗಿದ್ದಾರೆ ವಿದ್ಯಾರ್ಥಿಗಳು ಟಿ.ವಿ ಮೋಬೈಲ್ ಗಳನ್ನು ದೂರವಿಟ್ಟು ಪುಸ್ತಕವನ್ನು ಹತ್ತಿರ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು ಎಸ್.ಎಸ್.ಎಲ್.ಸಿ ಪರೀಕ್ಷೆ ಹತ್ತಿರವಾಗುತ್ತಿದೆ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಗುರಿಯನ್ನು ತಲುಪುವಂತೆ ತಿಳಿಸಿದರು.
ಲೇಖಕರಾದ ಅರ್ಜುನ್ ದೇವಲಕೆರೆ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಭ್ಯಾಸ ಮಾಡುವುದು ಸಹ ಅತಿಮುಖ್ಯ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳು ಇವೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ಪ್ರಥಮ ಆಧ್ಯತೆ ನೀಡಿ ಅವಕಾಶ ಮಾಡಿಕೊಡುತ್ತಾರೆ, ತಾವು ಸಾಧಿಸುವ ಗುರಿ ಹೊಂದಿರಬೇಕು ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ಮಾತನಾಡಿ ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಜೋತೆಗೆ ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಿ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ವೇದಿಕೆ ಕಲ್ಪಿಸಿ ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎನ್.ಲಕ್ಷ್ಮಣ್ಗೌಡ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಶಾಲಾ ಸಹಕಾರ್ಯದರ್ಶಿ ಕೆ.ಕೆ.ಮನುಕುಮಾರ್, ಕಾಲೇಜು ಸಹಕಾರ್ಯದರ್ಶಿ ಯು.ಪಿ.ಮನುಕುಮಾರ್, ನಿರ್ದೇಶಕರುಗಳಾದ ಹೆಚ್.ಎಂ.ಶ್ಯಾಮ್, ಎಂ.ಎಸ್.ವಿಕ್ರಾಂತ್, ಟಿ.ಡಿ.ಮಲ್ಲೇಶ್, ಜಿ.ಹೆಚ್.ದಿನೇಶ್, ಕೆ.ವಿ.ರವಿಕುಮಾರ್, ಗಂಗೇಗೌಡ, ಸುರೇಂದ್ರ ಪಿ.ಯು ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್, ಸಿ.ಇ.ಓ ಕುಳ್ಳೇಗೌಡ, ವ್ಯವಸ್ಥಾಪಕರಾದ ರಾಜು ಉಪಸ್ಥಿತರಿದ್ದರು, ದೈಹಿಕ ಶಿಕ್ಷಕ ಶಂಕರೇಗೌಡ ಸ್ವಾಗತಿಸಿ, ಪ್ರಮೀಳಾ ವಂದಿಸಿದರು
Sports can give you more confidence