ಚಿಕ್ಕಮಗಳೂರುಎಕ್ಸ್ಪ್ರೆಸ್: ರಾಜಕಾರಣಿಗಳು ಪಠ್ಯ ಪುಸ್ತಕ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ ಶಿಕ್ಷಣ ತಜ್ಞರಿಂದ ಪಠ್ಯ ಪುಸ್ತಕ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಿದಾಗ ವಿದ್ಯಾರ್ಥಿಗಳ ಜೀವನ ಉತ್ತಮವಾಗುತ್ತದೆ ಎಂದು ವಿದಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತಿಳಿಸಿದರು.
ನಗರದ ಜೆವಿಎಸ್ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ದೆ ಏರ್ಪಟಿದೆ ಕಠಿಣ ಪರಿಶ್ರಮದೊಂದಿಗೆ ಮುನ್ನೆಡೆದರೆ ಗುರಿ ಮುಟ್ಟಲು ಸಾದ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಎಲ್ಲಾದರು ಸಾಧನೆ ಮಾಡಬೇಕಾದರೆ ಶಿಕ್ಷಣ ಅತಿಮುಖ್ಯ ಉನ್ನತ ಶಿಕ್ಷಣದಿಂದ ನಾವುಸಹ ಇತರರಿಗೆ ಮಾರ್ಗದರ್ಶಕರಾಗಿ ಸಮಾಜಮುಖಿ ಕೆಲಸ ಮಾಡಬಹುದೆಂದು ತಿಳಿಸಿದರು.
ಶಾಲಾ ಕಾಲೇಜು ದಿನಗಳು ವಿದ್ಯಾರ್ಥಿಗಳಿಗೆ ಅತಿಮುಖ್ಯವಾದ ದಿನಗಳು ಮತ್ತು ಮರೆಯಲಾಗದ ನೆನಪುಗಳು ವಿದ್ಯಾರ್ಥಿ ಜೀವನದಲ್ಲಿಯೆ ಏನನ್ನಾದರು ಸಾಧಿಸಬೇಕೆಂಬ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದೊಂದಿಗೆ ವಿದ್ಯಾಭ್ಯಾಸ ಮಾಡಿದಾಗ ನಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.
ಪ್ರತಿಯೋಬ್ಬರು ಸರ್ಕಾರಿ ಕೆಲಸಕ್ಕೆ ಅವಲಂಭಿತರಾಗದೆ ಸ್ವಂತ ಉದ್ಯೋಗ ಮಾಡಿ ಇತರರಿಗು ಸಹ ಕೆಲಸ ನೀಡುವಂತವರಾಗಬೇಕು, ವಿದ್ಯಾರ್ಥಿ ದೆಸೆಯಲ್ಲಿಯೆ ನಾಯಕತ್ವ ಗುಣ, ದೇಶ ಸೇವೆ ಮತ್ತು ಸಮಾಜಕ್ಕೆ ಮಾದರಿಯಾಗಿ ಹೇಗೆ ಬದುಕಬೇಕು ಎಂಬುವುದನ್ನು ಶಿಕ್ಷಕರು ಮತ್ತು ಪೋಷಕರಿಂದ ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ ಶಿಕ್ಷಣದಿಂದ ಮಾತ್ರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂಬುವುದನ್ನು ಗುರುಗಳು ತಿಳಿದಿದ್ದು, ರಾಜ್ಯದಾದ್ಯಂತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಒಕ್ಕಲಿಗರ ಜನಾಂಗ ಎಲ್ಲಾಕಡೆ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಎಲ್ಲಾ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಜಗತ್ತಿನ ಸವಾಲುಗಳನ್ನು ಎದುರಿಸಲು ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ಸಹ ಶಾಲೆಯಲ್ಲಿ ಹೇಳಿಕೊಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಕರು ರಾಷ್ಟ್ರಕವಿ ಕುವೆಂಪು ಮತ್ತು ಕೆಂಪೇಗೌಡರ ಆದರ್ಶಗಳನ್ನು ತಿಳಿಸಿಕೊಡಬೇಕು, ವಿದ್ಯಾರ್ಥಿಗಳು ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗುವ ಬದಲು ನಿನ್ನ ದುಡಿಮೆಯಲ್ಲಿಯೆ ದೇವರನ್ನು ಕಾಣಬೇಕು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಮಕ್ಕಳನ್ನೇ ಆಸ್ತಿ ಮಾಡಿಕೊಳ್ಳಿ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿದಾಗ ಮುಂದೆ ನಿಮಗೂ ಶಾಲೆಗೂ ಗೌರವ ತರುವಂತೆ ಬೆಳೆಯುತ್ತಾರೆ ಎಂದರು.
ಜಿಲ್ಲಾ ಒಕ್ಕಲಿಗರಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ಮಾತನಾಡಿ ನಮ್ಮ ಸಂಸ್ಥೆ ಹಣವನ್ನು ಗಳಿಸುವ ಉದ್ದೇಶದಿಂದ ಶಾಲೆಯನ್ನು ಪ್ರಾರಂಭಿಸಿಲ್ಲ, ಸೇವಾ ಮನೋಭಾವನೆಯಿಂದ ಶಾಲಾಕಾಲೇಜುಗಳನ್ನು ನಡೆಸುತ್ತಿದ್ದೇವೆ, ಗುರುಗಳು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಘದಿಂದ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಪಠ್ಯದ ಜೋತೆಗೆ ಸಾಮಾನ್ಯ ಜ್ಞಾನ, ಕವಿ ಕಲಾವಿದರ ಸಾಧಕರ ಪುಸ್ತಕಗಳನ್ನು ಅಧ್ಯಾಯನ ಮಾಡಿದಾಗ ನಿಮ್ಮಲ್ಲಿಯೂ ಸಾಧಿಸುವ ಛಲ ಬರುತ್ತದೆ ಎಂದರು. ಮನುಷ್ಯ ಹುಟ್ಟುತ್ತಾ ವಿಶ್ವ ಮಾನವನಾಗಿರುತ್ತಾನೆ ಬೆಳೆಯುತ್ತ ಅಲ್ಪ ಮಾನವರಾಗಬಾರದು ಅಹಂಕಾರ ಬಿಟ್ಟು ಯಾವುದೇ ಜಾತಿ ಬೇಧ ಮರೆತು ಎಲ್ಲರೊಂದಿಗೆ ಬೆರೆತು ಆದರ್ಶ ವ್ಯಕ್ತಿಗಳಾಗಿ ಸಮಾಜಸೇವೆ ಕೆಲಸಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಆಧುನಿಕ ಕಾಲಕ್ಕೆ ತಕ್ಕಂತೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತು ಡಿಜಿಟಲ್ ಲ್ಯಾಬ್ನ ಜೋತೆಗೆ ಉತ್ತಮ ಗ್ರಂಥಾಲಯವನ್ನು ನೀಡಲಾಗಿದೆ ಪ್ರತಿವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ನೂರಕ್ಕೆ ನೂರು ಫಲಿತಾಂಶ ಬರುತ್ತಿದ್ದು ಜಿಲ್ಲೆ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲಾ ಮಕ್ಕಳು ಭಾಗವಹಿಸಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಮಾಡುತ್ತೇವೆ, ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯದ ಎಲ್ಲಾ ಭಾಗದಲ್ಲೂ ವೈದ್ಯರು ಮತ್ತು ಇಂಜಿನಿಯರ್ಗಳಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎನ್.ಲಕ್ಷ್ಮಣ್ಗೌಡ, ಶಾಲಾ ಸಹ ಕಾರ್ಯದರ್ಶಿ ಕೆ.ಕೆ.ಮನುಕುಮಾರ್, ಪಿ.ಯು ಕಾಲೇಜಿನ ಸಹ ಕಾರ್ಯದರ್ಶಿ ಯು.ಪಿ.ಮನುಕುಮಾರ್, ಸಂಘದ ನಿರ್ಧೇಶಕರಾದ ಶ್ಯಾಮ್, ಸುಜಿತ್, ವಿಕ್ರಾಂತ್, ಮಲ್ಲೇಶ್, ದಿನೇಶ್, ಪೃಥ್ವಿರಾಜ್, ಕಳವಾಸೆ ರವಿ, ಎಸ್.ಎಸ್.ವೆಂಕಟೇಶ್, ಗಂಗೇಗೌಡ, ನಾಗರತ್ನ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸವಿತಾರಮೇಶ್, ಸದಸ್ಯರಾದ ಪಿ.ಯು ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್, ಸಿ.ಇ.ಓ ಕುಳ್ಳೇಗೌಡ, ವ್ಯವಸ್ಥಾಪಕರಾದ ರಾಜು ಉಪಸ್ಥಿತರಿದ್ದರು,
Politicians should not interfere with text books