ಚಿಕ್ಕಮಗಳೂರುಎಕ್ಸ್ಪ್ರೆಸ್: ೫೪ ಲಕ್ಷ ರೂ ವೆಚ್ಚದ ವಿಶೇಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಸಿ.ಟಿ.ರವಿ ನೆರೆವೇರಿಸಿದರು.
ನಗರದ ದಂಟರಮುಕ್ಕಿ ವಾರ್ಡ್ನಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಈ ವಾರ್ಡ್ನ ಕುಡಿಯುವ ನೀರಿನ ಅಮೃತ್ ಯೋಜನೆ ಕಾಮಗಾರಿ ಬಹುತೇಕ ಮುಕ್ತಾಯದಲ್ಲಿದ್ದು, ಇಡೀ ನಗರದ ಅಮೃತ್ ಯೋಜನೆ ಕಾರ್ಯ ಈ ತಿಂಗಳ ಅಂತ್ಯದೊಳಗಾಗಿ ಮುಕ್ತಾಯಗೊಳಿಸಿ, ಯುಜಿಡಿ ಕಾಮಗಾರಿಯನ್ನು ಮೇ ತಿಂಗಳ ಒಳಗಾಗಿ ಮುಕ್ತಾಯಗೊಳಿಸುವ ನಿರ್ಣಯವನ್ನು ಮಾಡಲಾಗಿದೆ ಎಂದರು.
ಚಿಕ್ಕಮಗಳೂರು ನಗರ ವ್ಯಾಪ್ತಿಯ ಅಮೃತ್ ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಯೋಜನೆ ಪೂರ್ಣಗೊಳ್ಳಲಿದ್ದು, ಎರಡು ಕೆಲಸದ ಸಮಯದಲ್ಲಿ ಹಗೆಯಲಾದ ರಸ್ತೆಗಳ ಮರು ಡಾಂಬರೀಕರಣ, ಮತ್ತು ಸಿಮೆಂಟ್ ರಸ್ತೆಗೆ ವಿಶೇಷ ಅನುದಾನವನ್ನು ತರಲಾಗಿದೆ, ನಗರದ ದಶ ದಿಕ್ಕುಗಳಲ್ಲಿ ಅಭಿವೃದ್ಧಿ ಕಾರ್ಯ ವೇಗಗತಿಯಲ್ಲಿ ನಡೆಯುತ್ತಿದೆ, ಚಿಕ್ಕಮಗಳೂರು ನಗರದಲ್ಲಿ ೩೨೦ ಕಿ.ಮೀ ರಸ್ತೆ ಇದ್ದು ಎಲ್ಲಾ ರಸ್ತೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ್ಸ್ವಾಮಿ, ನಗರಸಭೆ ಸದಸ್ಯರಾದ ಗುರುಮಲ್ಲಪ್ಪ, ಮೋಹನ್, ಮಧುಕುಮಾರ್ ರಾಜ್ ಅರಸ್, ಸತೀಶ್, ನಗರಸಭೆ ಆಯುಕ್ತ ಬಸವರಾಜ್, ಇಂಜಿನಿಯರ್ ಚಂದನ್ ಮತ್ತಿತರರು ಉಪಸ್ತಿತರಿದ್ದರು.
Development work in ten directions of the city