ಚಿಕ್ಕಮಗಳೂರು: ಬಿಜೆಪಿ ನೇತೃತ್ವದ ನಗರಸಭಾ ಆಡಳಿತವು ಮುಂದಿನ ಹತ್ತು ತಿಂಗಳ ಕಾಲ ಮಾತ್ರ ಅಧಿಕಾರವನ್ನು ಪೂರೈಸಲಿದ್ದು ಉಳಿದ ಅವಧಿಗೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಭವಿಷ್ಯ ನುಡಿದರು
ರಾಮೇಶ್ವನಗರದಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಗರಸಭಾ ಆಡಳಿತ ಮಂಡಳಿಯ ಅಧಿಕಾರವನ್ನು ಹಿಡಿಯಲು ಯಾವುದೇ ಆಪರೇಷನ್ ಹಸ್ತವಿಲ್ಲದೇ, ಅಡ್ಡದಾರಿಯು ಹಿಡಿ ಯದೇ ಸಂಖ್ಯೆಬಲ ಹೆಚ್ಚುಗೊಂಡಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ ಎಂದರು.
ಮುಂದಿನ ಹತ್ತು ತಿಂಗಳು ಅವಧಿಗಳು ಮಾತ್ರ ಬಿಜೆಪಿ ಆಡಳಿತ ಮುಂದುವರೆಸಲಿದೆ. ತದನಂತರ ಕಾಂಗ್ರೆಸ್ ತೆಕ್ಕೆಗೆ ಧಾವಿಸಲಿದೆ ಎಂದ ಅವರು ಪ್ರಸ್ತುತ ಆಡಳಿತ ಮಂಡಳಿಯು ಸಾರ್ವಜನಿಕ ಪೂರಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಖುದ್ದಾಗಿ ಸೂಕ್ತ ಆದೇಶ ನೀಡುವ ಮೂಲಕ ಅವರಿಂದಾದ ತಪ್ಪುಗಳನ್ನು ಅವರಿಂದಲೇ ತಿದ್ದುವಂತಹ ಕೆಲಸ ಮಾಡಿಸಲಾಗುವುದು ಎಂದರು.
ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಹಲವಾರು ಸಂಘ-ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿ ಸುತ್ತಿದ್ದು ನಗರಸಭಾ ಆಡಳಿತ ಮಂಡಳಿಯ ಸೂಕ್ತವಾಗಿ ಸ್ಪಂದಿಸರುವುದನ್ನು ಕಂಡಲ್ಲಿ ನಗರದ ವಿವಿಧ ಸಂಘ- ಸಂಸ್ಥೆಗಳನ್ನು ಹಾಗೂ ಆಡಳಿತ ಮಂಡಳಿಯ ಸಭೆ ನಡೆಸಿ ಚರ್ಚಿಸುವ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂ ದಾಗಲಾಗುವುದು ಎಂದರು.
BJP has only ten months in the municipal council