ಚಿಕ್ಕಮಗಳೂರು: ಜನಸ್ನೇಹಿ ಆಡಳಿತ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಮೂಲಕ ನನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಲೋಟಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿ ನೀಡಿದ ಸನ್ಮಾನ,ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಾಮಾನ್ಯ’ಡಿ’ದರ್ಜೆ ನೌಕರನ ಮಗನಾದ ನನ್ನನ್ನುಕ್ಷೇತ್ರದಜನತೆ ನಾಲ್ಕು ಬಾರಿ ನಗರಸಭೆ ಸದಸ್ಯನನ್ನಾಗಿ,ಅಧ್ಯಕ್ಷನನ್ನಾಗಿ,ಉಪಾಧ್ಯಕ್ಷನನ್ನಾಗಿ, ಸಿಡಿಎ ಸದಸ್ಯನನ್ನಾಗಿ ಮತ್ತು ಶಾಸಕನನ್ನಾಗಿ ಮಾಡಿದ್ದಾರೆ.ರಾಜಕಾರಣದಲ್ಲಿಅಧಿಕಾರ ಶಾಶ್ವತವಲ್ಲಅದುಇರುತ್ತದೆ ಹೋಗುತ್ತದೆ. ಅದರ ನಡುವೆಜನರಋಣತೀರಿಸುವ ನಿಟ್ಟಿನಲ್ಲಿಎಲ್ಲರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡುತ್ತೇನೆಎಂದರು.
ವಿಶ್ವಕರ್ಮ ಸಮುದಾಯದವರು ಮತ್ತುಚಿನ್ನ, ಬೆಳ್ಳಿ ವರ್ತಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳವನ್ನು ತಡೆಗಟ್ಟುವಂತೆ ಮತ್ತು ವಿಶ್ವಕರ್ಮಅಭಿವೃದ್ಧಿ ನಿಗಮಕ್ಕೆ ವಿಶ್ವಕರ್ಮ ಸಾಮಾಜಿಕರಾಜಕೀಯಕ್ರಿಯಾ ಸಮಿತಿಯರಾಜ್ಯ ನಿರ್ದೇಶಕಜಗದೀಶಾಚಾರ್ಅವರನ್ನುಅಧ್ಯಕ್ಷರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಪೊಲೀಸರು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ನೀಡುವ ಕಿರುಕುಳವನ್ನು ನಿಲ್ಲಿಸುವಂತೆ ಪೊಲೀಸ್ ಇಲಾಖೆಗೆ ಒಂದು ತಿಂಗಳ ಗಡುವು ನೀಡಲಾಗಿದೆಎಂದಅವರು, ನಗರಕ್ಕೆರೈಲು ಬರುವ ಮತ್ತು ತೆರಳುವ ವೇಳೆಗೆ ರೈಲ್ವೆ ನಿಲ್ದಾಣಕ್ಕೆಬಸ್ ಬಿಡುವಂತೆರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಡಿಸಿಗೆ ಸೂಚಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆಗಾಯತ್ರಿ ಶಾಂತೇಗೌಡ ಮತ್ತುಜಿಲ್ಲಾಕಾಂಗ್ರೆಸ್ ಮಾಜಿಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಜಗದೀಶಾಚಾರ್ಅವರನ್ನು ವಿಶ್ವಕರ್ಮಅಭಿವೃದ್ಧಿ ನಿಗಮದಅಧ್ಯಕ್ಷರನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದುಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದಕರ್ನಾಟಕರಾಜ್ಯ ವಿಶ್ವಕರ್ಮ ಸಾಮಾಜಿಕರಾಜಕೀಯಕ್ರಿಯಾ ಸಮಿತಿಅಧ್ಯಕ್ಷ ಪುರುಷೋತ್ತಮಾಚಾರ್, ವಿಶ್ವಕರ್ಮ ಸಮುದಾಯವನ್ನು ಗುರುತಿಸಿ ಸೂಕ್ತ ಪ್ರಾತಿನಿಧ್ಯ ನೀಡಬೇಕು.ಅವರುಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು.ವಿಶ್ವಕರ್ಮಅಭಿವೃದ್ಧಿ ನಿಗಮಕ್ಕೆ ಜಗದೀಶಾಚಾರ್ಅವರನ್ನುಅಧ್ಯಕ್ಷರನ್ನಾಗಿ ಮಾಡಬೇಕುಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದಕ್ರಿಯಾ ಸಮಿತಿ ನಿರ್ದೇಶಕಜಗದೀಶಾಚಾರ್,ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಶಾಸಕ ಎಚ್.ಡಿ.ತಮ್ಮಯ್ಯಅವರನ್ನು ಸಮಾರಂಭದಲ್ಲಿ ವಿಶ್ವಕರ್ಮ ಸಾಮಾಜಿಕರಾಜಕೀಯಕ್ರಿಯಾ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ಅರ್ಚಕರ ಸಂಘದರಾಜ್ಯ ನಿರ್ದೇಶಕರತ್ನಾಕರಾಚಾರ್ಯ, ವಿಗ್ರಹ ಶಿಲ್ಪಿ ಜಯಣ್ಣಾಚಾರ್,ಕಾಂಗ್ರೆಸ್ ಮುಖಂಡದಯಾನಂದ ನಾಯ್ಡು, ನಿವೃತ್ತ ಮುಖ್ಯ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್, ಪ್ರಸನ್ನಕುಮಾರ್,ಉಮಾಶಂಕರ್ ಉಪಸ್ಥಿತರಿದ್ದರು.
I will repay the debt of the people of the constituency through development