ಚಿಕ್ಕಮಗಳೂರು: ಕಡೂರು ತಾಲ್ಲೂಕು ಚೌಳಹಿರಿಯೂರು ಹೆಚ್.ಪಿ ಮಲ್ಲಿಕಾರ್ಜುನ ರಂಗ ಕಲಾವಿದರ ತಂಡದ ವತಿಯಿಂದ ಜೂ.೨೫ ರಂದು ಸಂಜೆ ೬ ಗಂಟೆಗೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಕಿವುಡ ಮಾಡಿದ ಕಿತಾಪತಿ ಎಂಬ ಹಾಸ್ಯಭರಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗ ಕಲಾವಿದ ಹೆಚ್.ಪಿ ಮಲ್ಲಿಕಾರ್ಜುನ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ವೃತ್ತಿ ರಂಗಭೂಮಿ ಅಳಿವಿನ ಅಂಚಿನಲ್ಲಿದ್ದು ಪುನಃಶ್ಚೇತನ ನೀಡಲು ಟಿಕೆಟ್ ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಎಚ್.ಪಿ. ಮಲ್ಲಿಕಾರ್ಜುನ ಸುಮಾರು ೩೫ವರ್ಷಗಳಿಂದ ಉತ್ತರ ಕರ್ನಾಟಕದ ನಾಟಕ ಕಂಪನಿಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಎಲ್ಲಾ ಹೆಸರಾಂತ ಜಾತ್ರೆಗಳಲ್ಲಿ ಮತ್ತು ಬೆಳಾಗಾವಿಯಲ್ಲಿ ನೆಡೆದ ವಿಶ್ವ ಕನ್ನಡ ಸಮ್ಮೇಳನ, ಕಿತ್ತೂರು ಉತ್ಸವ, ಹಂಪಿ ಉತ್ಸವ, ಐಯ್ಯನಗುಡಿ ಉತ್ಸವ, ಧಾರವಾಡ ಜಂಬುಸಾವಾರಿ ಇಂತಹ ಉತ್ಸವಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.
ಸಾಣೇಹಳ್ಳಿ ಶಿವಸಂಚಾರದ ಕಲಾವಿದರಾಗಿ ಸೇವೆ ಸಲ್ಲಿಸಿ ಚೌಳಹಿರಿಯೂರುನಲ್ಲಿ ಮೈತ್ರಿ ನಾಟಕ ಸಂಘದ ಮೂಲಕ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿದ್ದಾರೆ ಮತ್ತು ಚೌಳಹಿರಿಯೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಗದುಗಿನ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ೧೯೩೭ರಲ್ಲಿ ಪಂಚಾಕ್ಷರ ಗವಾಯಿಗಳು, ಪುಟ್ಟರಾಜ ಗವಾಯಿಗಳು ಸಂಚಾಲಕತ್ವದಲ್ಲಿ ಮಠದ ಅಂಧ ಅನಾಥ ಅಂಗವಿಕಲ ಮಕ್ಕಳ ಸಂಗೀತ ಹಾಗು ವಿದ್ಯಾಭ್ಯಾಸದ ಖರ್ಚು ವೆಚ್ಚ ನಿಭಾಯಿಸುವುದಕ್ಕಾಗಿ ಪ್ರಾರಂಭ ಮಾಡಿದ್ದು. ಈ ಸಂಘಧ ಕಲಾವಿದರು ಕಿವುಡ ಮಾಡಿದ ಕಿತಾಪತಿ ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಲಿದ್ದು, ಟಿಕೆಟ್ಗಳನ್ನು ಖರೀದಿಸುವ ಮೂಲಕ ನಗರದ ರಂಗಪ್ರೇಮಿಗಳು ಪ್ರೋತ್ಸಹಿಸಬೇಕಾಗಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಕಲಾವಿದರಾದ ಕಾರ್ತಿಕ್, ಚಂದ್ರಮೂರ್ತಿ ಇದ್ದರು.
Comedy drama