ಚಿಕ್ಕಮಗಳೂರು: ಹೋಂಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ ೧೧ಬಿಯನ್ನು ತೆಗೆದುಕೊಂಡು ಹೋಂಸ್ಟೇ ಪರವಾನಗಿಯನ್ನು ನವೀಕರಿಸಿಕೊಡಬೇಕು ಎಂದು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ ಹೋಂಸ್ಟೇ ಕಟ್ಟಡಗಳಿಗೆ ಪಂಚಾ ಯತಿ ವತಿಯಿದ ತೆರಿಗೆ ಇಡೀ ಜಿಲ್ಲೆಯಲ್ಲಿ ಎಲ್ಲಾ ಹೋಂಸ್ಟೇ ಕಟ್ಟಡಗಳಿಗೆ ಏಕರೂಪ ತೆರಿಗೆಯಾಗಿ ವಿಧಿಸಬೇಕು, ಪರವಾನಗಿಯ ನವೀಕರಣದ ವಿಧಾನವನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.
ಹೋಂಸ್ಟೇಗಳಿಗೆ ಮೂಲ ಸೌಕರ್ಯಗಳಾದ ಉತ್ತಮ ರಸ್ತೆಗಳು, ತಡೆರಹಿತ ವಿದ್ಯುಚ್ಚಕ್ತಿ ಹಾಗೂ ನೀರಿನ ಸರಬರಾಜು ಒದಗಿಸಬೇಕು. ವ್ಯವಸಾಯೇತರ ಚಟುವಟಿಕೆ ಎಂದು ಪರಿಗಣಿಸಿ ಮತ್ತು ಹೋಂಸ್ಟೇಗಳನ್ನು ಅನ್ಯಕ್ರಾಂತ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಲಕ್ಜುರಿ ಟಾಕ್ಸ್ನಿಂದ ವಿನಾಯಿತಿ ಮತ್ತು ವಿದ್ಯುಚ್ಚಕ್ತಿ ಬಿಲ್ಲನ್ನು ಗೃಹಬಳಿಕೆ ದರದಲ್ಲಿ ಕಟ್ಟಬೇಕೆಂದು ಯೋಜನೆ ಯುನ್ನು ರೂಪಿಸಲಾಗಿರುತ್ತದೆ. ಆದ್ದರಿಂದ ಸರ್ಕಾರದ ಸುತ್ತೋಲೆಯ ಪ್ರಕಾರ ಹೋಂಸ್ಟೇ ಘಟಕವನ್ನು ವ್ಯವಸಾ ಯೇತರ ಚಟುವಟಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಈ ಸುತ್ತೋಲೆಗಳ ಪ್ರಕಾರ ಹೋಂಸ್ಟೇ ಮಾಲೀಕರು ಅನೇಕ ವರ್ಷಗಳಿಂದ ನಡೆಸುತ್ತಿದ್ದು ಸದರಿ ಪರವಾನಗಿ ಗಳು ಈಗಾಗಲೇ ನಾಲ್ಕು ಬಾರಿ ನವೀಕರಣವಾಗಿತ್ತದೆ. ಆದರೆ ಕೆಲವು ಹೋಂಸ್ಟೇಗಳ ಪರವಾನಗಿ ನವೀಕರಣಕ್ಕೆ ಸಲ್ಲಿಸಿದ್ದು ಜಿಲ್ಲಾಧಿಕಾರಿ ಕಚೇರಿಯು ಪರವಾನಗಿಗಳಣ್ನು ನವೀಕರಿಸಬೇಕಾದರೆ ಹೋಂಸ್ಟೇ ಜಾಗವನ್ನು ಕಡ್ಡಾಯ ವಾಗಿ ಅನ್ಯಕ್ರಾಂತ ಮಾಡಬೇಕು ಸೂಚಿಸಿರುವ ಪರಿಣಾಮ ಸಮಸ್ಯೆಯಾಗಿದೆ ಎಂದರು.
ಆದ್ದರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದೇನೆಂದರೆ ಹೋಂಸ್ಟೇ ಕಟ್ಟಡಗಳ ಪರವಾನಗಿಯನ್ನು ಹಿಂದಿನ ಪದ್ಧತಿಯ ಪ್ರಕಾರ ಮಾಲೀಕರಿಂದ ನಮೂನೆ ೧೧ಬಿಯನ್ನು ತೆಗೆದುಕೊಂಡು ಪರವಾನಗಿಯನ್ನು ನವೀಕರಿಸಿಕೊಡ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲಲಿ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ.ಪ್ರವೀಣ್, ಕಾರ್ಯದರ್ಶಿ ಅನ್ಸರ್ ಜೋಹುರ್, ಮುಖ್ಯಸ್ಥರಾದ ಹೊಲದಗದ್ದೆ ಗಿರೀಶ್, ಅಕ್ಷತ ಪ್ರಸನ್ನ, ಔರಂಗ್, ಸಚ್ಚಿನ್ರಾಜ್, ವರುಣ್, ವೇಣು, ಸಂದೇಶಗೌಡ, ಯು.ಪಿ.ಮನು, ತೇಜಸ್, ಜಗದೀಶ್ ಮತ್ತಿತರರು ಹಾಜರಿದ್ದರು.
District Homestay Association appeal to District Collector KN Ramesh