ಚಿಕ್ಕಮಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದರು.
ಕೇಂದ್ರಸರ್ಕಾರಕ್ಕೆ ೯ ವರ್ಷ ತುಂಬಿದ ಹಿನ್ನಲೆಯಲ್ಲಿ ಗಾಯತ್ರಿಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ದ್ದರಾಮಯ್ಯ ನೆಪಮಾತ್ರಕ್ಕೆ ಮುಖ್ಯಮಂತ್ರಿ ಎಂಬುದನ್ನು ಬಿಂಬಿಸಲು ನಾನೇ ರಾಜ್ಯಕ್ಕೆ ನಿಜವಾದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲು ಅಕ್ಕಿಗಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಮುಂದಾಗುತ್ತಿದ್ದಾರೆಂದು ತಿಳಿಸಿದರು..
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ತಿಳಿಸಿ,ಮೋಸ, ವಂಚನೆಯಿಂದ ಆಮಿಷ ಒಡ್ಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದನ್ನು ಜನರಿಗೆ ತಿಳಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಳ್ಳಿಗಳಿಗೆ ಮತ್ತು ನಗರಕ್ಕೆ ಹೋಗೋಣವೆಂದರು.
ರಾಜ್ಯ ಸರ್ಕಾರದ ಉಚಿತಕೊಡುಗೆಗಳ ಬ್ರಹ್ಮಾಸ್ತ್ರ ನಮ್ಮ ಕೈಯಲ್ಲಿದೆ. ಜನರಿಗೆ ದ್ರೋಹಬರೆದಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸೋಣವೆಂದು ಕರೆನೀಡಿದ ಅಶೋಕ್, ರಾಜ್ಯದಲ್ಲಿರುವುದು ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯ ಸರ್ಕಾರ ಕ್ಷಣಮಾತ್ರದಲ್ಲಿ ಉಳಿಯುವುದಿಲ್ಲವೆಂದರು ಹೇಳಿದರು.
ಉಚಿತ ವಿದ್ಯುತ್ಗೆ ಅರ್ಜಿಹಾಕುವುದಕ್ಕೆ ಕೇಂದ್ರಸರ್ಕಾರ ಸರ್ವರ್ ಹ್ಯಾಕ್ಮಾಡಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಸರ್ವರ್ ಎಂದರೇನು? ಹ್ಯಾಕ್ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ, ಗೊತ್ತಿರು ವುದೊಂದೆ ಅಮವಾಸ್ಯೆಯಲ್ಲಿ ಮಸಣದಲ್ಲಿ ಕುಳಿತು ಊಟಮಾಡೋದು ಎಂದು ಟೀಕಿಸಿದರು.
ಸಿದ್ಧರಾಮಯ್ಯ ಟಿಪ್ಪುವಿನ ರಾಯಭಾರಿಯಾಗಿದ್ದಾರೆ. ಮತಾಂತರ ನಿಷೇಧಕಾಯ್ದೆ,ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಪಡೆದುಕೊಳ್ಳುತ್ತಾರಂತೆ ಹಾಗೆನಾದರೂ ಆದರೆ ಲವ್ಜಿಹಾದ್ ಹೆಚ್ಚಳವಾಗುತ್ತದೆ. ನಿಮ್ಮ ಮನೆಯಲ್ಲಿರುವ ಗೋವುಗಳು ಕಾಣೆಯಾಗುತ್ತವೆ ಎಂದು ಎಚ್ಚರಿಸಿದರು. ಉಚಿತಕೊಡುಗೆಗಳನ್ನು ಷರತ್ತು ಇಲ್ಲದೆ ಕೊಡುವತನಕ ನಾವ್ಯಾರು ಮನೆಗಳಿಗೆ ಹೋಗದೆ ಪ್ರತಿಭಟನೆಯಲ್ಲಿ ತೊಡಗಿಸಿ ಕೊಳ್ಳೋಣ ವೆಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ,ವಿಧಾನಸಭಾ ಚುನಾವಣೆಯಲ್ಲಿ ವಾತಾವರಣ ಬೇರೆರೀತಿ ಇತ್ತು.ಮೈಮರೆತುಕೂರಬಾರದು.ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲ ಪಕ್ಷ ಗೆಲ್ಲಿಸುವ ಹೊಣೆಹೊರಬೇಕಾಗಿದೆ. ಗ್ರಹಣ ಸೂರ್ಯಚಂದ್ರರಿಗೂ ಬರುತ್ತೆ ಅದು ಶಾಶ್ವತವಾಗಿ ಇರುವುದಿಲ್ಲ. ಬಿಡಲೇಬೇಕು ಹಾಗೆಯೆ ಪಕ್ಷಕ್ಕೂ ಗ್ರಹಣಹಿಡಿದಿದೆ. ಬಿಟ್ಟೆಬಿಡುತ್ತೆ ಎಂದು ತಿಳಿಸುವ ಮೂಲಕ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.
ನಾವೆಲ್ಲ ಕೆಲಸಮಾಡಿ ಸೋತಿದ್ದೇವೆ ಅತಿಯಾದ ಆತ್ಮವಿಶ್ವಾಸ, ಮೈಮರೆವಿನ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಸೋಲುಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಓಟವನ್ನು ಮುಂದುವರೆಸುತ್ತೇವೆ. ಚುನಾವಣೆ ಎಂಬ ಕ್ರಿಕೆಟ್ ಆಟದಲ್ಲಿ ನಾನು ಶತಕಹೊಡೆತು ಪಂದ್ಯಗೆಲ್ಲಿಸಬೇಕಿತ್ತು ಆದರೆ ಗೆಲ್ಲಲಾಗಲಿಲ್ಲ ಆದರೂ ಉತ್ತಮ ಬೌಲಿಂಗ್ ಫಿಲ್ಡಿಂಗ್ಮಾಡಿರುವ ಖುಷಿ ಇದೆ ಎಂದರು.
ಮಾಜಿ ಸಚಿವ ಸೋಮಶೇಖರ್,ಮಾಜಿ ಸಭಾಪತಿ ಬೋಪಯ್ಯ, ಗಿರೀಶ್ಪಟೇಲ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ, ಉಪಾಧ್ಯಕ್ಷ ದೀಪಕ್ದೊಡ್ಡಯ್ಯ, ಪ್ರಧಾನಕಾರ್ಯದರ್ಶಿಗಳಾದ ದೇವರಾಜಶೆಟ್ಟಿ, ಬೆಳವಾಡಿರವೀಂದ್ರ, ಜಿಲ್ಲಾ ವಕ್ತಾರ ಟಿ.ರಾಜಶೇಖರ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್,ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ಡಿ.ಎಸ್.ಸುರೇಶ್ ಇದ್ದರು.
A meeting of BJP workers was held at Gayathrikalyana Mandapam