ಚಿಕ್ಕಮಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹೋಬಳಿ ಸರ್ಪನಹಳ್ಳಿ ಮೂಲದ ಸುಮೇದ್.ಎಸ್.ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದಲ್ಲಿ ೪ ನೇ ರ್ಯಾಂಕ್ ಪಡೆದು ಜಿಲ್ಲೆಗೆ ಮತ್ತು ಸರ್ಪನಹಳ್ಳಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಅವರು ಸಿ.ಇ.ಟಿ ಪರೀಕ್ಷೆಯಲ್ಲಿ ಶೆ.೯೭.೦೫೬ ಅಂಕಗಳನ್ನು ಪಡೆದು ರಾಜ್ಯಕ್ಕೆ ೪ನೇ ಸ್ಥಾನ ಪಡೆದಿದ್ದಾರೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಸಂಸ್ಥೆ ಉದ್ಯೋಗಿ ಹಾಗೂ ಸರಪನಹಳ್ಳಿ ಗ್ರಾಮದ ಎಸ್.ಶ್ರೀನಿವಾಸ್ ಮತ್ತು ಸ್ವಪ್ನಾ ದಂಪತಿ ಪುತ್ರರಾಗಿ ರುವ ಸುಮೇದ್ ಬಳ್ಳಾರಿಯ ಜಿಂದಾಲ್ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿತ್ತಾ ಬಂದಿದ್ದರು. ಎಸ್.ಶ್ರೀನಿವಾಸ್ ಮತ್ತು ಸ್ವಪ್ನಾ ದಂಪತಿ ಜಿಂದಾಲ್ ಸಂಸ್ಥೆಯಲ್ಲಿ ಇಂಜಿನಯರ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಮೇದ್ ತಾನು ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ದಲ್ಲಿ ರಾಜ್ಯ ವಿಜ್ಞಾನ ಪರಿಷತ್ನಿಂದ ಯುವ ವಿಜ್ಞಾನಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಸಿ.ಬಿ.ಎಸ್.ಇ ೧೨ನೇ ತರಗತಿ ಪರೀಕ್ಷೆಯಲ್ಲಿ ಸುಮೇದ್.ಎಸ್.ಎಸ್ ರವರು ಶೇ.೯೮.೮ ಅಂಕಗಳನ್ನು ಪಡೆದಿದ್ದರು.
ಮುಂಬೈನ ಐ.ಐ.ಟಿ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದು ಬಯಸಿರುವ ಸುಮೇದ್,ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಐಐಟಿ ಮುಂಬೈ ವಿಭಾಗದಲ್ಲಿ ೫ ಟಾಪರ್ಗಳಲ್ಲಿ ಒಬ್ಬರಾಗಿದ್ದಾರೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದಲೂ ಪ್ರಶಸ್ತಿ ಪಡೆದಿರುವ ಸುಮೇದ್ ಹಲವು ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಿಂದ ಗುರಿತಿಸಲ್ಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹಲವು ಗಣ್ಯರು ಹಾಗೂ ಸರ್ಪನಹಳ್ಳಿ ಗ್ರಾಮಸ್ಥರು ಸುಮೇದ್ ಸಾಧನೆಯನ್ನು ಕೊಂಡಾಡಿದ್ದಾರೆ.
Sumed from Lakya Hobli Sarpanahalli, 4th rank in the state in SS engineering department.