ಚಿಕ್ಕಮಗಳೂರು: -ಅಂತರಾಷ್ಟ್ರೀಯ ಬ್ಯೂಟಿಷಿಯನ್ ದಿನಾಚರಣೆ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯೂಟಿಷಿಯನ್ ಅಸೋಷಿಯೇಷನ್ನ ಜಿಲ್ಲಾಧ್ಯಕ್ಷೆ ಅಪರ್ಣವಿನೋದ್ ತಿಳಿಸಿದರು.
ಅವರು ಇಂದು ಜೀವನ್ ಸಂಧ್ಯಾ ವೃದ್ಧಾಶ್ರಮದಲ್ಲಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃದ್ಧರ ಹೇರ್ಕಟ್ ಮಾಡುವ ಮೂಲಕ ಅಂತರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಿದರು.
ಮೃದ್ಧಾಶ್ರಮದಲ್ಲಿರುವ ವೃದ್ದರಿಗೆ ಹೆಡ್ ಮಸಾಜ್, ಕೈಕಾಲು ನೋವಿಗೆ ಔಷಧ, ಮಹಿಳೆಯರಿಗೆ ಮೆಹಂದಿ ಹಾಕುವುದು, ಉಗುರು ಬಣ್ಣ ಹಾಕುವುದು ಸೇರಿದಂತೆ ವೃದ್ಧರಲ್ಲಿ ನಾವು ಒಂಟಿ ಎಂಬ ಭಾವನೆ ಬರವಾರದು ಎಂದು ನಮ್ಮ ಜೀವನದ ಸ್ಪಲ್ಪ ಭಾಗವನ್ನು ವಿನಿಯೋಗಿಸುತ್ತಿದ್ದೇವೆ ಎಂದರು.
ಸಂಘದ ಕಾರ್ಯದರ್ಶಿ ಸಂಗೀತಾಕಾಮತ್ ಮಾತನಾಡಿ ಈ ವೃದ್ಧರ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ ಆದರೆ ತಮ್ಮ ತಂದೆ ತಾಯಿಯನ್ನು ಈ ಆಶ್ರಮದಲ್ಲಿ ಬಿಟ್ಟಿದ್ದಾರೆ ಎಂದು ವಿಷಾಧಿಸಿದರು.ತಂದೆ-ತಾಯಿಯನ್ನು ಎಲ್ಲರು ಸಮನಾಗಿ ನೋಡಿಕೊಳ್ಳಬೇಕೆಂದು ಮನವಿ ಮಾಡಿದ ಅವರು ಇಂದು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತೇವೆ ಬ್ಯೂಟಿ ಪಾರ್ಲರ್ ಕುರಿತು ಅವರಿಗೆ ಜಾಗೃತಿ ಮೂಡಿಸುತ್ತೇವೆ . ಯುವತಿಯರಿಗೆ ಬ್ಯೂಟಿಷಿಯನ್ ತರಬೇತಿ ನೀಡಲು ಸಹ ಬದ್ದವಾಗಿದ್ದೇವೆ ಎಂದು ತಿಳಿಸಿದರು.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ಸಂಘದ ವತಿಯಿಂದ ನೆರವು ನೀಡಲು ನಿರ್ಧರಿಸಲಾಗಿದೆ ಎಂದ ಅವರು ಈ ರೀತಿಯ ತೊಂದರೆಯಲ್ಲಿರುವ ಮಹಿಳೆಯರು ತಮ್ಮ ಸಂಘವನ್ನು ಸಂಪರ್ಕಿಸಿದರೆ ಅಸೋಷಿಯೇಷನ್ ಇತಿಮಿತಿಯಲ್ಲಿ ಸೌಲಭ್ಯ ನೀಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಕೀರ್ತಿರಾಜ್, ಪದ್ಮ, ಜಂಟಿ ಕಾರ್ಯದರ್ಶಿ ಕವಿತಾನಾಯಕ್, ವಿನೋದ್ ಕುಮಾರ್. ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.
Celebrating International Beautician Day on Jeevan Sandhya