ಚಿಕ್ಕಮಗಳೂರು: ಛತ್ರಪತಿ ಸಾಹು ಮಹಾರಾಜರು ನೀಡಿದ ಮೀಸಲಾತಿಯಿಂದಾಗಿ ಕೆಳ ವರ್ಗದವರ ಬದುಕು ಬದಲಾಗಿದೆ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಹೇಳಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮೀಸಲಾತಿ ಯ ಜನಕ ಛತ್ರಪತಿ ಸಾಹು ಮಹಾರಾಜರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಕೆಳ ವರ್ಗದ ಜನರ ಬದುಕು ಮೇಲ್ವರ್ಗದವರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಸಾಮಾಜಿಕ ಪಿಡುಗುಗಳಿಂದ ಅಸಹ ನೀಯವಾಗಿತ್ತು ಎಂದರು.
ಬರೋಡ ಸಂಸ್ಥಾನದ ಮಹಾರಾಜ ಛತ್ರಪತಿ ಸಾಹು ಮಹಾರಾಜರು ದೇಶದಲ್ಲೇ ಮೊದಲ ಬಾರಿಗೆ ಕೆಳ ವರ್ಗದ ಜನರಿಗಾಗಿ ಮೀಸಲಾತಿ ಯನ್ನು ಜಾರಿಗೆ ತಂದರು. ದೇವದಾಸಿ ಪದ್ಧತಿಯ ನಿರ್ಮೂಲನೆ ಸೇರಿದಂತೆ ಅನೇಕ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡರು. ಅವುಗಳ ಫಲವಾಗಿ ಕೆಳ ವರ್ಗದ ಜನ ಶಿಕ್ಷಣವಂತರಾಗಲು ಹಕ್ಕುಗಳನ್ನು ಪಡೆದು ಕೊಳ್ಳಲು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವಾಯಿತು ಎಂದು ತಿಳಿಸಿದರು.
ಪಕ್ಷದ ಮುಖಂಡ ಪಿ.ವಿ.ತಂಬನ್ ಮಾತನಾಡಿ, ಸಾಹು ಮಹಾರಾಜರು ಮೀಸಲಾತಿ ನೀಡದಿದ್ದಲ್ಲಿ ಕೆಳವರ್ಗದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಬರೋಡ ಸಂಸ್ಥಾನದ ಮಹಾರಾಜ ಸಾಹು ಮಹಾರಾಜರು ೧೯೦೨ರ ಜುಲೈ ೨೬ರಂದು ಮೀಸಲಾತಿಯನ್ನು ಜಾರಿಗೆ ತಂದರು. ಅದರ ಪ್ರೇರಣೆ ಯಿಂದ ನಂತರ ಮೈಸೂರು ಸಂಸ್ಥಾನದಲ್ಲಿ ನಾಡಪ್ರಭು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು ಎಂದರು.
ಸಾಹು ಮಹಾರಾಜರು ಒಂದೊಮ್ಮೆ ಮೀಸಲಾತಿಯನ್ನು ಜಾರಿಗೆ ತರದಿ ದ್ದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರೂ ಸಹ ಓದಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು, ಒಂದು ಎರಡು ತಲೆಮಾರಿನ ಹಿಂದೆ ಕೆಳ ವರ್ಗದ ಜನರಿಗೆ ಶಿಕ್ಷಣ ದೊರಕಿತೆಂದರೆ ಅದು ಸಾಹು ಮಹಾರಾಜ ರ ಕೊಡುಗೆ ಎಂದರು.
ಬಿ.ಎಸ್.ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್ ಮಾತನಾಡಿದರು. ಜನ್ಮದಿನದ ಅಂಗವಾಗಿ ಸಾಹು ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಬಿಎಸ್ಪಿ ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳ, ಮಾಜಿ ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ, ಗಿರೀಶ್, ಸಿದ್ದಯ್ಯ ಉಪ ಸ್ಥಿತರಿದ್ದರು.
Birthday of Chhatrapati Sahu Maharaj