ಚಿಕ್ಕಮಗಳೂರು: ಗೌರಮ್ಮ ಬಸವೇಗೌಡರ ಹೆಣ್ಣುಮಕ್ಕಳ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಬಡ ಹಾಗೂ ಪ್ರತಿಭಾವಂತ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ತಿಳಿಸಿದರು.
ಕೆಂಪನಹಳ್ಳಿ ಬಡಾವಣೆಯಲ್ಲಿ ನಡೆಸುತ್ತಿರುವ, ಅರಳಗುಪ್ಪೆ ಗೌರಮ್ಮ ಬಸವೇಗೌಡರ ಹೆಣ್ಣುಮಕ್ಕಳ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಹ ಬಡ ಹಾಗೂ ಪ್ರತಿಭಾವಂತ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜಿಲ್ಲೆಯ ಆಸುಪಾಸಿನಲ್ಲಿ ಅಭ್ಯಾಸ ಮಾಡುತ್ತಿರುವ ಪಿಯುಸಿ, ಡಿಪ್ಲಮಾ, ಪದವಿ, ತಾಂತ್ರಿಕ, ಸ್ನಾತಕೋತ್ತರ, ನರ್ಸಿಂಗ್ ಮತ್ತು ಇನ್ನಿತರೇ ತರಗತಿಯ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ೧೦೦ ರೂಗಳನ್ನು ಪಾವತಿಸಿ ಖುದ್ದಾಗಿ ಪಡೆಯುವುದು ಅಥವಾ ಅಂಚೆ ಮೂಲಕ ಪಡೆಯುವವರು, ವಾರ್ಡನ್, ಶ್ರೀಮತಿ ಗೌರಮ್ಮ ಬಸವೇಗೌಡರ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ, ಕೆಂಪನಹಳ್ಳಿ ಬಡಾವಣೆ (ರತ್ನಗಿರಿ ಬೋರೆ ಎಕ್ಸ್ಟೆನ್ಶನ್) ಅಂಧರಶಾಲೆ ಹತ್ತಿರ, ಚಿಕ್ಕಮಗಳೂರು, ಮೊ. ನಂ. ೯೯೦೦೪೦೮೯೭೪ ಇವರಿಗೆ ೧೫೦ ರೂಗಳನ್ನು ಮನಿ ಆರ್ಡರ್ ಮಾಡಿ ಅರ್ಜಿಯನ್ನು ಪಡೆಯಬಹುದಾಗಿದೆ, ಅರ್ಜಿ ಪಡೆದು ಸಲ್ಲಿಸಲು ಇದೇ ತಿಂಗಳು ಜೂ. ೩೦ ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದರು.
Application Invitation for Gaurammabasave Gowda Student Hostel Free Admission