ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೊಸ ಕೈಗಾರಿಕೆಯನ್ನು ಪ್ರಾರಂಭಿಸಲು ಹಾಗೂ ಕೈಗಾರಿಕೋದ್ಯಮಗಳಿಗೆ ಉತ್ತಮ ಸ್ಪಂದನೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆ ಹಾಗೂ PಒಇಉP ಯೋಜನಾ ಬಗ್ಗೆ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳ ಸ್ಥಾಪನೆ ಮಾಡುವ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಏಕ ಗವಾಕ್ಷಿ ಯೋಜನೆಯಲ್ಲಿ ಭೂಸ್ವಾಧೀನ, ಅಲ್ಲಿನ ಮೂಲಭೂತ ಸೌಕಾರ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ಅವರ ಬೇಡಿಕೆಗೆ ಅನುಗುಣವಾಗಿ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರುಗಳನ್ನೊಳಗೊಂಡು ಸಮಿತಿಗಳನ್ನು ರಚಿಸಿ ಮೇಲು ಉಸ್ತುವಾರಿಯನ್ನು ಸಹ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಪ್ರದೇಶಾಭಿವೃದ್ಧಿಗೆ ಭೂಮಿ ಗುರುತಿಸುವ ಕಾರ್ಯ ಭರದಿಂದ ಸಾಗಿದ್ದು, ಸ್ಪೈಸ್ ಪಾರ್ಕ್ ಅಭಿವೃದ್ಧಿ, ಹಲಸಿನ ಕ್ಲಸ್ಟರ್ ಅಭಿವೃದ್ಧಿ ಪಡಿಸಲು ಈಗಾಗಲೇ ಕಡೂರು ತಾಲ್ಲೂಕು ಸಖರಾಯ ಪಟ್ಟಣ ಹೋಬಳಿ ಸರ್ವೆ ನಂ. ೪೦೫ ರಲ್ಲಿ ಭೂಮಿ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದ ಅವರು ಕಡೂರು ತಾಲ್ಲೂಕಿಗೆ ನಗದಿಯಾತ್ ಕಾವಲ್ನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಿಸಲಾಗಿದ್ದು.
ಹೊಸ ಕೈಗಾರಿಕೆಗಳ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಏSಈಅ ಮತ್ತು ಬ್ಯಾಂಕ್ಗಳು ಒSಒಇ ಘಟಕಗಳನ್ನು ಆದ್ಯತಾ ವಲಯವೆಂದು ಗುರುತಿಸಿ ಸಾಲ ಸೌಲಭ್ಯವನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು ೦೮ ಘಟಕಗಳು ಡಾ. ಸರೋಜಿನಿ ಮಹಿಷಿಗೆ ವರದಿಗೆ ಒಳಪಟ್ಟಿದ್ದು, ಸದರಿ ಘಟಕಗಳು ಂಃಅ ಹುದ್ದೆಗಳಲ್ಲಿ ಶೇ ೭೦ ರಷ್ಟು ಹಾಗೂ ಡಿ ಗ್ರೂಪ್ನಲ್ಲಿ ಶೇ ೧೦೦ ರಷ್ಟು ಒಟ್ಟಾರೆ ಶೇ ೯೭ ರಷ್ಟು ಕನ್ನಡಿಗರಿಗೆ ಒದಗಿಸಲಾಗಿದೆ ಎಂದು ಹೇಳಿದರು.
PಒಇಉP ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ತರಬೇತಿ ಮತ್ತು ಸಾಲ ಸೌಲಭ್ಯ ತ್ವರಿತವಾಗಿ ನೀಡಲು ಸಂಬಂಧಪಟ್ಟ ಬ್ಯಾಂಕುಗಳು ಸ್ಪಂಧಿಸಿ ಕೆಲಸ ಮಾಡುವಂತೆ ತಿಳಿಸಿ ಅವರು ನಿಗಧಿತ ಅವಧಿಯಲ್ಲಿ ಗುರಿ ಸಾಧಿಸಲು ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರ, ಜಂಟಿ ನಿರ್ದೇಶಕರಾದ ಸಿದ್ದರಾಜು ಅವರು ಸ್ವಾಗತಿಸಿ ಜಿಲ್ಲೆ ಕೈಗಾರಿಕೆ ಸಂಬಂಧಿಸಿದಂತಹ ಮಾಹಿತಿಯನ್ನು ಸಭೆಗೆ ತಿಳಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಏSಈಅ ಮತ್ತು ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Good response for industrialists to start industries