ಚಿಕ್ಕಮಗಳೂರು: ಸರ್ಕಾರ ಜಿಲ್ಲಾಡಳಿತದ ಮುಖಾಂತರ ಸಮಾಜವನ್ನು ಗುರುತಿಸಿರುವುದು ಖುಷಿ ತಂದಿದೆ ಹಾಗೂ ಪರೋಕ್ಷವಾಗಿ ಇಂತಹ ಜಯಂತಿಗಳ ಆಚರಣೆಯಿಂದ ಸಮಾಜದ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ವಿಶ್ವನಾಥ್ ಸಂಕಲ್ಪ ಅಭಿಪ್ರಾಯಸಿದರು
ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘಟನೆಗೆ ಒತ್ತುಕೊಟ್ಟು ಜಯಂತಿಗಳಲ್ಲಿ ಭಾಗವಹಿಸುವ ಬಗ್ಗೆ ಸಮಾಜದ ಬಂಧುಗಳು ಹೆಚ್ಚು ಒಲವು ತೋರಬೇಕಾಗಿ ತಿಳಿಸಿದರು.
ಶ್ರದ್ದೆಯಿಂದ, ಪ್ರೇಮದಿಂದ, ಅತಿಯಾಸೆ ಇಲ್ಲದೆ, ಪ್ರಾಮಾಣಿಕವಾಗಿ ಮಾಡುವ ಮೂಲಕ ಭಗವಂತನ ಸೇವೆಯ ಮಟ್ಟಕ್ಕೆ ಕೊಂಡೋಯ್ದು ಕಾಯಕದಿಂದಲೂ ಕೈಲಾಸ ಕಾಣಬಹುದೆಂಬ ಕರ್ಮ ಸಿದ್ದಾಂತಕ್ಕೆ ಹೊಸದೊಂದು ರೂಪ ನೀಡಿದ ಮಹನೀಯರುಗಳೇ ವಚನಕಾರರು ಎಂದು ಹೇಳಿದರು.
ಸರ್ಕಾರದಿಂದ ಆಚರಿಸುತ್ತಿರುವ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗುತ್ತಿರುವುದು ಆಧುನಿಕ ಸಮಾಜದ ದುರಂತವಾಗಿದೆ ಎಂದರು.
ಇದು ಭಾರತೀಯ ಸಮಾಜದಲ್ಲಿ ಬಿಟ್ಟು ಬಿಡದೆ ಅಂಟಿಕೊಂಡಿರುವ ಜಾತಿವ್ಯವಸ್ಥೆಯು ಆಧುನಿಕ ಸ್ಪರ್ಶ ಪಡೆದು ತನ್ನ ಮಜುಲುಗಳನ್ನು ಬದಲಿಸಿಕೊಳ್ಳಲು ಸಹಕಾರವಾಗುವಂತೆ ಮಾಡಿದೆ. ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಪಸ್ವರವಿದ್ದರೂ, ಜಯಂತಿಗಳು ಕೇವಲ ಶಿ?ಚಾರವಾಗಿ, ನೆಪತ್ಯಕ್ಕೆ ಸರಿಯಾದೆ, ಸಮಾಜದ ಜನಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಮುಂದಿನ ಪೀಳಿಗೆ ಸಾಮಾಜಿಕ ಸಮಸ್ಯೆಗಳಿಂದ ಮುಕ್ತಾರಾಗಿ ಜೀವಿಸಲು ಮಾಡಬಹುದಾದ ಪರಿಹಾರ ಕ್ರಮಗಳ ಚಿಂತನ ಮಂತನ ಸಭೆಗಳಾಗಬೇಕು, ಆಗ ಮಾತ್ರ ಜಯಂತಿಯ ಮೂಲ ಆಶಯ ನೆರವೇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವೀಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ ರಮೇಶ್ ರವರು ಸರ್ಕಾರ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವ ಹಿನ್ನೆಲೆಯನ್ನು ವಿವರಿಸಿದರು ಮತ್ತು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸವಿತಾ ಸಮಾಜದ ಮುಖಂಡರುಗಳನ್ನು ಹಾಗೂ ಸಮಾಜದ ಬಾಂಧವರನ್ನು ಅಭಿನಂದಿಸಿದರು
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜೆ ಸತ್ಯನಾರಾಯಣ, ಜಿಲ್ಲಾ ಖಜಾಂಚಿ ಎಂ ರಾಘವೇಂದ್ರ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸಿ ಮಾಧವ, ಮೆಹಬೂಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಟಿಪಿ, ಜಿಲ್ಲಾ ಮಹಿಳಾ ಪ್ರತಿನಿಧಿ ರಶ್ಮಿ, ಸದಸ್ಯರಾದ ಸಂದೇಶ್, ಸಹ ಸಂಘಟನಾ ಕಾರ್ಯದರ್ಶಿ ನಟರಾಜ್, ಚಂದ್ರಶೇಖರ್, ಸಂಪತ್ ಕುಮಾರ್, ಸೇರಿದಂತೆ ಅನೇಕರು ಭಾಗವಹಿಸಿದ್ದರು, ಶಿಕ್ಷಕ ಸುರೇಂದ್ರ ನಾಯಕ್ ರವರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.
Shivsharan Shri Hadapada Appanna Jayanti