ಬೀರೂರು: ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಾಡಿಗೆ ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವಿನ ಮಾರ್ಗ ಮಧ್ಯದಲ್ಲಿ ಎನ್ನಲಾದ ಕೆಲ ಕಿಡಿಗೇಡಿಗಳಿಂದ ರೈಲುಗಾಡಿಗೆ ಕಲ್ಲೆಸೆದಿರುವ ಪರಿಣಾಮ ನೂತನ ರೈಲು ಬೋಗಿಯ ಕಿಟಿಕಿಗಾಜು ಭಾಗಶಃ ಹಾನಿಯಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.
ಬುಧವಾರ ಬೆಳಿಗ್ಗೆ ಬೆಂಗಳೂರು ಮಾರ್ಗದಿಂದ ಸಂಚಾರ ಆರಂಭಿಸಿದ ರೈಲುಗಾಡಿಯು ಅರಸೀಕೆರೆ ನಿಲ್ದಾಣವನ್ನು ದಾಟಿ ಬೀರೂರು ಮಾರ್ಗದಲ್ಲಿ ಬೆಳಗ್ಗೆ ೮-೩೦ರ ಸುಮಾರಿನಲ್ಲಿ ಚಲಿಸುತ್ತಿದ್ದಂತೆ ರೈಲು ಗಾಡಿಗೆ ಕಿಡಿಗೇಡಿಗಳಿಂದ ಕಲ್ಲುಎಸೆದಿರುವ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ದಾವಣಗೆರೆಯ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡ ರೈಲು ಗಾಡಿಯನ್ನು ಪರಿಶೀಲಿಸಲು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಆದರೆ ಕಲ್ಲು ಹೊಡೆದ ನಿರ್ದಿಷ್ಟ ಪ್ರದೇಶದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ರೈಲ್ವೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ, ಕಲ್ಲು ಎಸೆದಿರುವ ಬಗ್ಗೆ ರೈಲ್ವೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡಿದ್ದಾರೆ.
Stone pelting at Vandebharat Express in Birur