ಚಿಕ್ಕಮಗಳೂರು: ಮಹಿಳೆ ಆರ್ಥಿಕವಾಗಿ ಸ್ವಾಲಂಭಿಯಾದರೇ, ಕುಟುಂಬ ಸ್ವಾವಲಂಭಿಯಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪುಷ್ಟಗಿರಿ ಗ್ರಾಮೀ ಣಾಭಿವೃದ್ದಿ ಸ್ವ-ಸಹಾಯ ಸಂಘಗಳನ್ನು ರಚಿಸಲಾಗಿದೆ ಎಂದು ಹಳೇ ಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾ ಚಾರ್ಯ ಮಹಾಸ್ವಾಮೀಜಿ ಹೇಳಿದರು.
ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀಗುರು ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆಯೋಜಿಸಿದ್ದ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸ್ವ-ಸಹಾಯ ಸಂಘಗಳ ಸಮಾವೇಶ ಹಾಗೂ ಸಹಾಯಧನ ವಿತರಣೆ ಮತ್ತು ನೂತನ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಘಗಳಲ್ಲಿ ಯಾವುದೇ, ಜಾತಿ, ಧರ್ಮ ವನ್ನು ನೋಡದೆ ಎಲ್ಲಾ ಮಹಿಳೆಯರಿಗೂ ಅವಕಾಶವನ್ನು ನೀಡಲಾಗಿದೆ. ಸಂಘದಿಂದ ದೊರೆಯುವ ಸಹಾಯಧನವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸುವಂತೆ ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಇದುವರೆಗೂ ೧೮೦೦ಕ್ಕೂ ಹೆಚ್ಚು ಪುಷ್ಪಗಿರಿ ಸ್ವ-ಸಹಾಯ ಸಂಘ ಗಳನ್ನು ತೆರೆಯಲಾಗಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಂಘ ಗಳನ್ನು ತೆರೆಯಲಾಗಿದ್ದು, ಸಂಘಗಳ ಉನ್ನತಿಗೆ ಶ್ರಮಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲೆಯಲ್ಲಿ ಕಳೆದ ೪೦ವರ್ಷಗಳ ಹಿಂದೆ ಸಿದ್ಧರಾಮೇಶ್ವರ ಜಯಂತ್ಯೋತ್ಸವ ನಡೆಸಲಾಗಿತ್ತು. ಎಲ್ಲರ ಸಹಕಾರ ಪಡೆದು ೨೦೨೪ರಲ್ಲಿ ಚಿಕ್ಕಮಗಳೂರು ನಗರದಲ್ಲಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ ನಡೆಸ ಲಾಗುವುದು ಎಂದ ಅವರು, ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಸರ್ಕಾರಗಳು ಮಾಡಲಾಗದ ಕೆಲಸ ಕಾರ್ಯಗಳನ್ನು ಮಠ ಮಂದಿರಗಳು ಮಾಡುತ್ತಿವೆ. ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದು, ಮಠಮಾನ್ಯಗಳ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸ ನಮ್ಮ ಕೈಯಲ್ಲಿದೆ ಎಂದು ಅಭಿ ಪ್ರಾಯಿಸಿದರು.
ನಿವೃತ್ತ ಆರ್ಟಿಓ ಅಧಿಕಾರಿ ಶಿವರಾಮೇಗೌಡ, ಶ್ರೀಮಠದ ಆಡಳಿತಾಧಿ ಕಾರಿ ಕಿಟ್ಟಪ್ಪ ಮಾತನಾಡಿದರು. ಶ್ರೀಗುರು ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಹಾಗೂ ವಕೀಲ ಬಿ.ಆರ್.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂತನ ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಸನ್ಮಾನಿ ಸಲಾಯಿತು. ಸ್ವ-ಸಹಾಯ ಸಂಘಗಳಿಗೆ ಸಹಾಯಧನ ಚೆಕ್ ವಿತರಿಸಲಾ ಯಿತು. ಹಾಗೂ ಸಮಾಜ ಸೇವೆಯಲ್ಲಿ ನಿರತರಾಗಿರುವ ೧೦ ಮಂದಿ ಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರನ್ನು ಪೂರ್ಣಕುಂಬ ಸ್ವಾಗತದೊಂದಿಗೆ ಬರಮಾಡಿ ಕೊಳ್ಳಲಾಯಿತು. ಗುತ್ತಿಗೆದಾರ ನವೀನ್ಕುಮಾರ್ ಮತ್ತು ಜಿ.ಪಂ. ಮಾಜಿ ಅಧ್ಯಕ್ಷ ವಿಜಯಕುಮಾರ್ ಮಠಕ್ಕೆ ದೇಣಿಗೆ ಚೆಕ್ ನೀಡಿದರು. ಪುಷ್ಪಗಿರಿ ಕಲಾತಂದ ಚಂದನ್ ಮತ್ತು ರೂಪ ಅವರು ವಚನ ಗಾಯನ ಪ್ರಸ್ತುಸ್ಥಿ ಪರಿಸಿದರು.
ಕಾರ್ಯಕ್ರಮದಲ್ಲಿ ಎಂ.ಸಿ.ಶಿವಾನಂದ ಸ್ವಾಮಿ, ರವೀಶ್ ಬಸಪ್ಪ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಓಂಕಾರಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಬಾಲಚಂದ್ರ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಶಶಿ ಗಂಧರ್ವ, ಚಂದ್ರಪ್ಪ, ಲೋಹಿತ್ಕುಮಾರ್, ಚನ್ನಪ್ಪ ಕತ್ತಿಗೆ ಸೇರಿದಂತೆ ಅನೇಕರು ಇದ್ದರು.
Sri Pushpagiri Rural Development Self Help Societies Conference