ಚಿಕ್ಕಮಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ ೨೦೦೦ ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ೨೦೨೩-೨೪ನೇ ಸಾಲಿನಿಂದ ಜಾರಿಗೆ ತರಲಾಗಿದೆ ಕುಟುಂಬದ ಯಜಮಾನಿ ಇದರ ಸದ್ದುಪಯೋಗ ಪಡೆದ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ತಿಳಿಸಿದ್ದಾರೆ.
ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ವಿತರಿಸುವ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರೂಪಾಯಿ ೨೦೦೦ ಗಳನ್ನು ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರರವರು ಚಾಲನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ೧೪೨ ಗ್ರಾಮ ಒನ್ ಕೇಂದ್ರಗಳು, ೨೨೬ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಪ್ರಾರಂಭಿಸಿರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ೨೯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ಸೇವಾ ಕೇಂದ್ರಗಳಲ್ಲಿ ನೊಂದವಾಣಿ ಮಾಡಿಕೊಳ್ಳಬಹುದಾಗಿದೆ.
ಒಟ್ಟು ಜಿಲ್ಲೆಯಲ್ಲಿ ೩೯೭ ಸೇವಾ ಕೇಂದ್ರಗಳನ್ನು ಈ ಯೋಜನೆಯ ನೊಂದವಣಿಗಾಗಿ ತೆರೆಯಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಸರ್ಕಾರದಿಂದ ನೇಮಕಗೊಂಡ ಸ್ವಯಂ ಸೇವಕ ಪ್ರಜಾ ಪ್ರತಿನಿಧಿಗಳ ಮೂಲಕವು ಸಹ ಕುಟುಂಬದ ಯಜಮಾನಿಯು ಉಚಿತವಾಗಿ ಈ ಯೋಜನೆಗೆ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ನಗರ ಪ್ರದೇಶದಲ್ಲಿ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ೧೦ ಕೇಂದ್ರಗಳು, ಜಿಲ್ಲೆಯ ಪ್ರತಿ ಪುರಸಭೆಗಳ ವ್ಯಾಪ್ತಿಯಲ್ಲಿ ೦೩ ಕೇಂದ್ರಗಳು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೦೨ ಕೇಂದ್ರಗಳು, ಜಿಲ್ಲೆಯ ನಗರ ಪ್ರದೇಶದಲ್ಲಿ ಒಟ್ಟು ೨೯ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದಲ್ಲಿ ೧೪೨ ಗ್ರಾಮ ಒನ್ ಕೇಂದ್ರಗಳಲ್ಲಿ ಮತ್ತು ಪ್ರತಿ ಗ್ರಾಮ ಪಂಚಾಯಿತಿಯಲ್ಲಿನ ೨೨೬ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಒಟ್ಟು ೩೯೭ ಕೇಂದ್ರಗಳನ್ನು ಸ್ಥಾಪಿಸಿದ್ದು, ಅರ್ಹ ಫಲಾನುಭವಿಗಳು ನೊಂದಣಿ ಮಾಡಿಕೊಳ್ಳಬಹುದಾಗಿದೆ.
ಗೃಹ ಲಕ್ಷ್ಮಿ ಯೋಜನೆಯಡಿ ನೋಂದಾಯಿಸಲು ಬೇಕಾದ ದಾಖಲಾತಿಗಳು, ಪಡಿತರ ಚೀಟಿ ಸಂಖ್ಯೆ(ಅಂತ್ಯೋದಯ ಕಾರ್ಡ್, ಬಿ.ಪಿ.ಎಲ್.ಎ.ಪಿ.ಎಲ್), ಯಜಮಾನಿಯ ಹಾಗೂ ಯಜಮಾನಿ ಪತಿಯ ಆಧಾರ್ ಕಾಡ್ ಸಂಖ್ಯೆ, ಆಧಾರ್ ಕಾಡ್ ಲಿಂಕ್ ಆಗಿರುವ ಮೊಬೈಲ್(ಓ.ಟಿ.ಪಿ/ ಇಏಙಅ ನೀಡುವುದು), ಯಜಮಾನಿಯ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಪ್ರತಿ/ಫಲಾನುಭವಿಯು ಇಚ್ಚಿಸುವ ಪರ್ಯಾಯ ಬ್ಯಾಂಕ್ ಖಾತೆಯ ಪ್ರತಿ ನೀಡಬೇಕಾಗಿದೆ.
ಗೃಹ ಲಕ್ಷ್ಮಿ ಯೋಜನೆ ಕುರಿತು ಹೆಚ್ಚಿನ ವಿವರ ಅವಶ್ಯವಿದ್ದಲ್ಲಿ ರಾಜ್ಯ ಸರ್ಕಾರದ ಸಹಾಯವಾಣಿ ಸಂಖ್ಯೆ ೧೯೦೨ ಕ್ಕೆ ಬೆಳಿಗ್ಗೆ ೯-೦೦ ರಿಂದ ಸಂಜೆ ೬-೦೦ ಗಂಟೆಯವರೆಗೆ ಕರೆ ಮಾಡಬಹುದು ಹಾಗೂ ಸಹಾಯವಾಣಿ ೮೧೪೭೫೦೦೫೦೦ ಕ್ಕೆ ಎಸ್ ಎಮ್ ಎಸ್ ಮೂಲಕ ಸಂದೇಶ ಕಳುಹಿಸಿ ಪಡಿತರ ಚೀಟಿಯ ಆರ್.ಡಿ.ಸಂಖ್ಯೆ ನೀಡುವ ಮೂಲಕ ತಮ್ಮ ನೊಂದಣಿಯ ಸೇವಾ ಕೇಂದ್ರ, ದಿನಾಂಕ, ಸಮಯದ ವಿವರ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಛೇರಿ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ ಸಭೆಯಲ್ಲಿ ಸ್ಥಾಪಿತವಾದ ಸಹಾಯವಾಣಿ ಸಂಪರ್ಕಿಸಬಹುದಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಕಛೇರಿ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಸ್ಥಾಪಿತವಾದ ಸಹಾಯವಾಣಿ ಮೂಲಕ ಮಾಹಿತಿ ಪಡೆಯಬಹುದಾಗಿದೆ.
Request to get facility of Grilahakshmi Yojana