ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ವಸ್ತಾರೆ ಗೌತಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದ ಜೊತೆಗೆ ಉತ್ತಮ ಫಲಿತಾಂಶ ಬರುವಂತೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಶ್ರಮಿಸಬೇಕೆಂದು ಮಾಜಿ ತಾ.ಪಂ ಅಧ್ಯಕ್ಷ ಡಿ.ಜೆ ಸುರೇಶ್ ಕರೆ ನೀಡಿದರು.
ಅವರು ಗುರುವಾರ ವಸ್ತಾರೆ ಗೌತಮ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಫಿ ಬೆಳೆಗಾರ ಗಿರೀಶ್ ಮಾತನಾಡಿ ಶುದ್ದ ನೀರಿನ ಘಟಕ ಸ್ಥಾಪಿಸಿರುವುದು ಸ್ವಾಗತಾರ್ಹ ಆದರೆ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ ದಾನಿಗಳ ನೆರವಿನಿಂದ ನೀಡಿರುವ ಕೊಡುಗೆಗಳು ಸದಾ ಎಲ್ಲರಿಗೂ ಉಪಯೋಗವಾಗಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ೧೯೮೮-೮೯ನೇ ಸಾಲಿನಿಂದ ಪ್ರಾರಂಭವಾದ ಶಾಲೆ ೨೦೦೭ ರಲ್ಲಿ ಸರ್ಕಾರದ ಅಧೀನ ಅನುದಾನಕ್ಕೆ ಒಳಪಟ್ಟಿದೆ. ೮ ಸರ್ಕಾರಿ ಶಿಕ್ಷಕರು, ೨ ಸಿಬ್ಬಂದಿ ವರ್ಗ ಮಂಜೂರಾಗಿದ್ದು, ಸತತವಾಗಿ ೩೩ ವರ್ಷಗಳನ್ನು ಪೂರೈಸಿದೆ. ಶಾಲೆಯು ಸರಾಸರಿ ಫಲಿತಾಂಶದಲ್ಲಿ ಶೇ.೯೮ ರಷ್ಟು ಬರುತ್ತಿದೆ. ದಾನಿಗಳ ನೆರವಿನಿಂದ ಶಾಲೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುವುದು ಶ್ಲಾಘನೀಯ ಎಂದರು.
ಗೌತಮ ಪ್ರೌಢಶಾಲೆಯ ಅಧ್ಯಕ್ಷ ಜಯಾನಂದ್ ಮಾತನಾಡಿ ಭವ್ಯವಾದ ಸುಸರ್ಜಿತ ಕಟ್ಟಡ ನಿರ್ಮಾಣ ಮಾಡಲು ಅಡಿಪಾಯವನ್ನು ಹಾಕಲು ಕಾರಣಕರ್ತರಾದವರು ಇಂದು ನಮ್ಮ ಜೋತೆ ಇಲ್ಲ, ಅವರ ನೆನಪು ಮಾತ್ರ ಚಿರಸ್ಮರಣೀಯ ಎಂದು ಸ್ಮರಿಸಿದ ಅವರು ೧೯೮೮ರಲ್ಲಿ ಶಾಲೆ ಪ್ರಾರಂಭ ಮಾಡಲು ಸರ್ಕಾರದ ಅನುಮತಿ ದೋರೆತಾಗ ಸುತ್ತ ಮುತ್ತಲು ಒಂದು ಗುಡಿಸಲು ಸಹ ಇರಲಿಲ್ಲ, ಅಂತಹ ಕಾಲದಲ್ಲಿ ಸೋಮೇಗೌಡ ರವರು ತಮ್ಮ ಸ್ವಂತ ವಾಸದ ಮನೆಯನ್ನು ೬ ರಿಂದ ೭ ವರ್ಷಗಳ ಕಾಲ ಶಾಲೆಯನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದರು, ನಂತರ ಪುಟ್ಟೇಗೌಡ್ರು, ವೀರಭದ್ರೇಗೌಡ್ರು ಮತ್ತು ಗಿಡ್ಡೇಗೌಡ ರವರು ಶಾಶ್ವತ ಶಾಲಾ ಕಟ್ಟಡ ನಿರ್ಮಾಣ ಮಾಡಲು ಹಣ ಸಹಾಯ ಮಾಡಿದರು ಎಂದರು.
ಶಿಕ್ಷಕ ಮೊಗಣ್ಣಾಚಾರ್ ಸ್ವಾಗತಿಸಿ ಜಯಶಂಕರ್ ನಿರೂಪಿಸಿ, ಹರೀಶ್ ರಾಜ್ ವಂದಿಸಿದರು.ಈ ಸಂದರ್ಭದಲ್ಲಿ ದಾನಿಗಳಾದ ಎ.ಪಿ.ನಾಗೇಶ್ಗೌಡ್ರು, ಕೇಶವಮೂರ್ತಿ, ಮಧುಸೂದನ್, ಗ್ರಾ.ಪಂ ಅಧ್ಯಕ್ಷೆ ಆಶಾನವೀನ್, ಶಶಿಕಲಾಗಿಡ್ಡೇಗೌಡ, ಹೇಮಲತಸೋಮಶೇಖರ್, ದುರ್ಗೇಗೌಡ, ವಿ.ಪಿ.ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ, ಅರ್ಚಕ ಪರಮೇಶ್, ಭುವನ್, ರಾಮಶೆಟ್ರು, ಲಿಂಗೇಗೌಡ, ಮಂಜುನಾಥ್ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Vastare Gautama High School