ಚಿಕ್ಕಮಗಳೂರು: ಬ್ರಾಹ್ಮಣ ಮಹಾಸಭಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಬೆಂಗಳೂರಿನ ಕಲಾ ಗಂಗೋತ್ರಿ ರಂಗತಂಡದಿಂದ ಭಾನುವಾರ ನಡೆದ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ ನೋಡುಗರನ್ನು ಮಂತ್ರಮುಗ್ದಗೊಳಿಸಿತು.
ಮೈಸೂರು ಮಲ್ಲಿಗೆಯ ಒಲವಿನ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕಿನ ಮೂರು ಹಂತಗಳನ್ನು, ವೃದ್ಧಾಪ್ಯ ಕಾಲದಲ್ಲಿ, ಜೀವನದಲ್ಲಿ ಪ್ರೇಮಕವಿ ಅನುಭವಿಸಿದ ನೋವು, ಹತಾಶೆ, ನಿರಾಶೆ, ಕಿತ್ತು ತಿನ್ನುವ ಬಡತನ, ಅವರು ಪಟ್ಟ ಪರಿಶ್ರಮವನ್ನು ಚಲನಚಿತ್ರ ಮತ್ತು ಧಾರಾವಾಹಿಗಳ ಕಲಾವಿದರು ಮನೋಜ್ಞ ಅಭಿನಯದ ಮೂಲಕ ನೋಡುಗರೆದುರು ಸಮರ್ಥವಾಗಿ ತೆರೆದಿಟ್ಟರು.
ಆರಂಭದಲ್ಲಿ ಪ್ರೇಮಕವಿಯ ಒಲವಿನ ಕವನಗಳನ್ನು ಶೃಂಗಾರಗೀತೆಗಳನ್ನು ನೋಡಿ ಆನಂದಿಸಿದ ಪ್ರೇಕ್ಷಕರು. ನಂತರ ವೃದ್ಧಾಪ್ಯದಲ್ಲಿ ಒಲವಿನ ಕವಿ ಅನುಭವಿಸಿದ ಬಡ ತನ, ಪಟ್ಟ ಪರಿಶ್ರಮ, ನೋವು, ನಿರಾಶೆ, ಹತಾಶೆಗಳನ್ನು. ಕಂಡು ಕಣ್ಣಂಚಿನಲ್ಲಿ ನೀರನ್ನು ತುಂಬಿಕೊಂಡರು.
ಬಳೆಗಾರ ಚೆನ್ನಯ್ಯನಾಗಿ ಪ್ರದೀಪ್ ನಾಡಿಗ್, ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಪಾತ್ರದಲ್ಲಿ ಸಿದ್ದಾರ್ಥ ಭಟ್ ಮತ್ತು ಕಲಾ ಗಂಗೋತ್ರಿ ಕಿಟ್ಟಿ ಹಾಗೂ ಕವಿಯ ಪತ್ನಿ ಯ ಪಾತ್ರದಲ್ಲಿ ಡಾ. ಎಂ.ಎಸ್.ವಿದ್ಯಾ ಪರಕಾಯ ಪ್ರವೇಶ ಮಾಡಿದವರಂತೆ ಅದ್ಭುತ ಅಭಿನಯ ನೀಡಿದರು.
ಬಳೆಗಾರ ಚೆನ್ನಯ್ಯನ ಪಾತ್ರದೊಂದಿಗೆ ಇಡೀ ನಾಟಕವನ್ನು. ಮುನ್ನಡೆಸಿದ ನಿರ್ದೇ ಶನ ಬಳೆಗಾರನ ಮಾತಿನಲ್ಲಿ ಮೈಸೂರು ಮಲ್ಲಿಗೆ ಕವಿಯ ಕಾಲದ ಹಾಗೂ ಇಂ ದಿನ ಬದಲಾವಣೆಗಳು, ಆಧುನಿಕತೆಯ ವೈಪರಿತ್ಯಗಳ ವಿಡಂಬನೆ, ಕಲಾಮಂದಿರ ದಲ್ಲಿ ನಗೆಯ ಬುಗ್ಗೆಗಳನ್ನು ಎಬ್ಬಿಸುವುದರ ಜೊತೆಗೆ ನೋಡುಗರನ್ನು ಚಿಂತನೆಗೆ ಹಚ್ಚಿತು. ಚಲನಚಿತ್ರ ಹಾಗೂ ಧಾರಾವಾಹಿಗಳ. ೩೦ ಕ್ಕೂ ಹೆಚ್ಚು ರಂಗಕರ್ಮಿಗಳು ಮೈ ಸೂರು ಮಲ್ಲಿಗೆಯ ಒಲವಿನ ಕವಿಯ ಕಾಲದ ಗತವೈಭವವನ್ನು ತೆರೆಯ ಮೇಲೆ ತೆರೆದಿಟ್ಟರು.
ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ್ ಜೋಶಿ, ಪದಾಧಿಕಾರಿಗಳಾದ ಸುಮಾಪ್ರಸಾದ್, ಗೋಪಾಲಕೃಷ್ಣ, ವಿನೀತ್ಕುಮಾರ್, ಎಸ್.ಶಾಂತಕುಮಾರಿ, ಸಾಂ ಸ್ಕೃತಿಕ ಸಂಘದ ಉಪಾಧ್ಯಕ್ಷ ಆನಂದ್ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ, ಖಜಾಂಚಿ ರಣಜಿತ್ ಸಿಂಗ್, ಶಂಕರನಾರಾಯಣ ಭಟ್, ಬೆಳ ವಾಡಿ ಮಂಜುನಾಥ್ ಉಪಸ್ಥಿತರಿದ್ದರು.
Mysore Jasmine Drama