ಚಿಕ್ಕಮಗಳೂರು: ಸಹಕಾರಿ ಸಂಘದ ಠೇವಣಿದಾರರು, ಷೇರುದಾರರು ಹಾಗೂ ಗ್ರಾಹಕರ ನಿರಂ ತರ ಬೆಂಬಲದಿಂದ ಪ್ರತಿವರ್ಷವು ಸಂಘ ನಿವ್ವಳ ಲಾಭವನ್ನು ಹೆಚ್ಚಿಸಿಕೊಂಡು ಅಭಿವೃದ್ದಿಪಥದತ್ತ ದಾಪುಹಾಲು ಸಾಧಿಸುತ್ತಿದೆ ಎಂದು ಸಮಾನ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ದೇವರಾಜ್ ಹೇಳಿದರು.
ನಗರದ ಖಾಸಗೀ ಹೋಟೆಲ್ವೊಂದರಲ್ಲಿ ಸಮಾನ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ಮಹಾಸಭೆಯ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಸೂಕ್ತ ಸಮಯದಲ್ಲಿ ಬಳಕೆಯಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿ ವತಿಯಿಂದ ೧೦ ಕೋಟಿ ಹೆಚ್ಚು ಸಾಲ ವಿತರಣೆ ಮಾಡಲಾಗಿದೆ. ಜೊತೆಗೆ ೧೧ ಕೋಟಿ ರೂ. ಠೇವಣಿ ಹೊಂದಿದ್ದು ೨೦೨೨-೨೩ನೇ ಸಾಲಿನಲ್ಲಿ ೩೫.೧೭ ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿ ಸಿದರು.
ನಿವ್ವಳ ಲಾಭದಲ್ಲಿ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೇ.೧೬ ರಷ್ಟು ಡಿವಿಡೆಂಟ್ ನೀಡಲಾಗಿದೆ. ಕಳೆದ ಸಾಲಿಗಿಂತ ಹಣಕಾಸು ವ್ಯವಹಾರದಲ್ಲಿ ಶೇ.೨೦ ವೃದ್ದಿ ಹೊಂದಿದೆ. ಮುಂದಿನ ದಿನಗಳಲ್ಲಿ ೨೫ ಕೋಟಿ ಗೂ ಹೆಚ್ಚು ವ್ಯವಹಾರ ಹಾಗೂ ನಿವ್ವಳ ಲಾಭಾಂಶವನ್ನು ಹೆಚ್ಚಿಸುವ ಗುಂದಿ ಹೊಂದಲಾಗಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವೈ.ವೆಂಕಟೇಶ್ ಮಾತನಾಡಿ ತಾಲ್ಲೂಕಿನ ಬ್ಯಾಗದಹಳ್ಳಿ ಮತ್ತು ಬ್ಯಾರವಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸಂಘದ ವತಿಯಿಂದ ಶಾಲಾಬ್ಯಾಗ್, ಕ್ರೀಡಾವಸ್ತುಗಳು ಮತ್ತು ಪೀಠೋಪರಣಗಳನ್ನು ಒದಗಿಸುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಸಂಘದ ಪ್ರವರ್ತಕ ಹೆಚ್.ಎಂ.ನೀಲಕಂಠಪ್ಪ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಕೆ.ಎನ್.ದೊಡ್ಡೇಗೌಡ, ಬಿ.ಜಿ.ಸೋಮಶೇಖರಪ್ಪ, ಯು.ಎಂ. ಜಯರಾಮೇಗೌಡ, ಬಿ.ಎ.ಬಾಲಕೃಷ್ಣ, ಎಂ.ಎ.ರವಿಕುಮಾರ್, ಶ್ರೀಮತಿ ಕೆ.ವಿ. ಮಮತ ಮತ್ತಿತರರು ಹಾಜರಿದ್ದರು
ಇದೇ ವೇಳೆ ಸರ್ಕಾರಿ ಹುದ್ದೆಯಿಂದ ನಿವೃತ್ತಿಗೊಂಡ ಡಿ.ಆರ್.ಓಂಕಾರಸ್ವಾಮಿ, ವೈ.ಸಿ.ರತ್ನಾಕರ್ ಹಾಗೂ ಕೆ.ರಾಘವೇಂದ್ರ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮವನ್ನು ಸಂಘದ ಪ್ರವರ್ತಕ ಕೆ.ಜಿ.ನೀಲಕಂಠಪ್ಪ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕ ಚೇತನ್ ಜಿ.ನಾಯ್ಕ ವಂದಿಸಿದರು.
35 Lakhs to Samana Patt Soihard Co-operative Society. Net profit