ಚಿಕ್ಕಮಗಳೂರು: ಜೈನ್ ಸಂಘ ಮಹಿಳಾ ಮಂಡಲದ ನೂತನ ಅಧ್ಯಕ್ಷೆರಾಗಿ ಸಪ್ನಾ ಛಾಜೆಡ್, ಕಾರ್ಯದರ್ಶಿಯಾಗಿ ಊರ್ಮಿಳಾ ಜೈನ್, ಖಜಾಂಚಿಯಾಗಿ ಅನುಪಮಾ ಲೂನಾವತ್ ಆಯ್ಕೆ ಶ್ರೀ ಜೈನ ಸಂಘ ಮಹಿಳಾ ಮಂಡಳದ ಮಾಜಿ ಅಧ್ಯಕ್ಷೆ ನರಿತಾ ಗಾದಿಯಾ ಅಧಿಕಾರ ಹಸ್ತಾಂತರಿಸಿ ಮಾತನಾಡಿ ಜೈನ್ ಮಹಿಳಾ ಸಂಘ ಸಂಘಟನೆಯ ಜತೆಗೆ ಸಮಾಜ ಸೇವೆ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾಜ ಸೇವೆ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಬೇಕು, ನಿಮ್ಮೆಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಲಹೆ ಸಹಕಾರ ನೀಡುತ್ತೇನೆ ಎಂದರು.
ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಖಿವೇಸರ ಅವರು ನೂತನ ಅಧ್ಯಕ್ಷರಿಗೆ ಅಭಿನಂದನೆಯನ್ನು ತಿಳಿಸಿ ಮಾತನಾಡಿದ ಅವರು ನಿರ್ಗಮಿತ ಅಧ್ಯಕ್ಷರ ಕಾರ್ಯಗಳನ್ನು ಶ್ಲಾಘಿಸಿದರು ಹಾಗೂ ಮಹಿಳೆಯರ ಪ್ರಗತಿಗೆ ಶ್ರಮಿಸಲು ಸದಾ ಸಿದ್ಧವಾಗಿದ್ದು, ನೀವು ಸಹ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಜೈನ್ ಸಂಘ ಮಹಿಳಾ ಮಂಡಲದ ನೂತನ ಅಧ್ಯಕ್ಷೆರಾಗಿ ಸಪ್ನಾ ಛಾಜೆಡ್ ಅಧಿಕಾರ ಸ್ವೀಕರಿಸಿ ಮಾತನಾಡಿ ಮಹಿಳೆಯರು ಸಂಘ ಸಂಸ್ಥೆಗಳ ಮುಖಾಂತರ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ, ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ ನನ್ನ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಎಲ್ಲಾ ಸದಸ್ಯರ ಸಲಹೆ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಜೈನ್ ಸಂಘ ಮಹಿಳಾ ಮಂಡಲದ ಸಹಕಾರ್ಯದರ್ಶಿ ಗೀತಾ ಸಿಪಾಣಿ, ಉಪಾಧ್ಯಕ್ಷರಾಗಿ ಪೂರ್ಣಿಮಾ ಜೈನ್, ಕಾರ್ಯಕಾರಿಣಿ ಸದಸ್ಯರುಗಳಾದ ಆಶಾ, ದೀಪಿಕಾ, ಕವಿತಾ, ಬಿಜಲ್, ಮಮತಾ, ನೀತು, ಚಾನ್ದಿನಿ, ನಿಕಿತಾ, ಪಿಂಕಲ್, ಪೂಜಾ, ನೀತು, ಶೋಭಾ, ಪಿಂಕಿ, ವಿಜೇತ ಉಪ ಕಾರ್ಯಕಾರಿ ಸದಸ್ಯರುಗಳಾದ ಶಾಂತಾ, ಆರತಿ, ಅನಿತಾ, ಕವಿತಾ, ಅಜು, ಗೀತಾ, ಕರುಣಾ, ನಿರ್ಮಲಾ, ಸುನೀತಾ, ಬಿಂದಿಯಾ ಉಪಸ್ಥಿತರಿದ್ದರು.
Sapnachaz elected as President of Shri Jain Sangh Mahila Mandal