ಚಿಕ್ಕಮಗಳೂರು: ನಿಸರ್ಗದ ಅನುಕರಣೆಯನ್ನು ಕಲಾವಿದನು, ಸಾಹಿತಿಯು ಹಾಗೂ ಸಂಗೀತಗಾರರು ಲಲಿತ ಕಲೆಗಳ ಮುಖಾಂತರ ಹಿಂದಿನಿಂದಲು ತನ್ನದೆ ಆದ ಪ್ರಕಾರಗಳ ಮುಖಾಂತರ ಮಾಡುತ್ತಾ ಬಂದಿರುತ್ತಾನೆ, ಈ ತರಹದ ಪ್ರಯತ್ನ ನಮ್ಮ ಜಿಲ್ಲೆಯ ಯುವ ಕಲಾವಿದರು ಕ್ಯಾನ್ವಾಸ್ ಹಾಗೂ ಬಣ್ಣಗಳ ಮುಖಾಂತರ ಅಭಿವ್ಯಕ್ತಿಪಡಿಸಿದ್ದಾರೆ.
ನಗರದ ಶಾಂತಿ ನಿಕೇತನ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಈ ಬಾರಿ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಹತ್ತು ದಿನಗಳ ಜಿಲ್ಲೆಯ ಮಾನ್ಸೂನ್ ಸೋಬಗನ್ನು ಮಾನ್ಸೂನ್ ಕರ್ಸ್ ಶಿರ್ಷಿಕೆಯಡಿಯಲ್ಲಿ ಕಲಾವಿದ ಹೆಚ್.ಎಂ.ಹರ್ಷ ರವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿತ್ತು, ಅದರಲ್ಲಿ ಜಿಲ್ಲೆಯ ಪ್ರಾಕೃತಿಕ ವೈಭವವನ್ನು ೧೬ ಯುವ ಕಲಾವಿದರು ೬೦ಕ್ಕೂ ಹೆಚ್ಚು ಚಿತ್ರಗಳನ್ನು ವರ್ಣಗಳಲ್ಲಿ ಸೆರೆ ಹಿಡಿದಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಯುವ ಕಲಾವಿದರು ರಚಿಸಿರುವ ಚಿತ್ತರಗಳಲ್ಲಿ ಮಲೆನಾಡಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಅರಳುವ ವಿಶೇಷವಾದ ಹೂಗಳ ಚಿತ್ರಗಳನ್ನು ಕಲಾವಿದರು ವರ್ಣ ರಂಜಿತವಾಗಿ ರಚಿಸಿದ್ದಾರೆ, ಈ ಹೂಗಳ ವಿಶೇಷವೇನೆಂದರೆ ಇವುಗಳು ಪ್ರಕೃತಿಯ ತೋಟಗಳಲ್ಲಿ ಬೆಳೆಯುವ ಸಾಮಾನ್ಯ ಹೂಗಳಾಗಿದ್ದು, ಅವುಗಳನ್ನು ನಮ್ಮಲ್ಲಿ ಕಳೆ ಎಂದು ಕರೆಯುವುದುಂಟು, ಆದರೆ ನಗರ ಪ್ರದೇಶದಲ್ಲಿ ಅವುಗಳನ್ನು ಪ್ರತ್ಯೇಕಿಸಿ ಹೂ ದಾನಿಯಲ್ಲಿ ಅಲಂಕಾರಿಕವಾಗಿ ಬೆಳೆಸಿ ಸಂತೋಷ ಪಡುವುದನ್ನು ನಾವು ಕಾಣುತ್ತೇವೆ,
ಅವುಗಳನ್ನು ನಮ್ಮ ಕಲಾವಿದರು ಕ್ಯಾನ್ವರ್ಸ್ನ ಮೇಲೆ ತುಂಬಾ ಆಕರ್ಷಕವಾಗಿ ಚಿತ್ರಿಸಿ, ಅವುಗಳನ್ನು ಮನೆ ಹಾಗೂ ಕಛೇರಿಯ ಗೋಡೆಗಳಲ್ಲಿ ಅಲಂಕರಿಸುವ ರೀತಿಯಲ್ಲಿ ವರ್ಣಮಯವಾಗಿ ಚಿತ್ರಿಸಿ ಆ ಹೂಗಳಿಗೆ ವರ್ಣಗಳಲ್ಲಿ ಮಾಂತ್ರಿಕ ಸ್ಪರ್ಶ ನೀಡಿರುವುದು ನೊಡುಗರ ಗಮನ ಸೆಳೆಯುತ್ತಿದೆ, ನಮ್ಮ ಜಿಲ್ಲೆಯಲ್ಲಿ ಸ್ವರ್ಗದ ದೃಶ್ಯ ವೈಭವದ ಛಾಪನ್ನು ಮೂಡಿಸುವ ಹೆಬ್ಬೆ ಜಲಪಾತದ ದೃಶ್ಯ ಕಾವ್ಯವನ್ನಾಗಿಸಿದ ನಿತೇಶ್ ರವರು ಸಿರಿ ಮನೆ ಜಲಪಾತ ಹಾಗೂ ದುಮ್ಮಿಕ್ಕಿ ಹರಿಯುವ, ಕಲ್ಲುಗಳ ಸಂದಿಯಲ್ಲಿ ಸಾಗುವ ರೀತಿಯನ್ನು, ರಮಣೀಯ ದೃಷ್ಯದ ಸೌಂದರ್ಯಾನುಭೂತಿಯನ್ನು, ನಿಶ್ಚಿತಗೌಡ ರವರು ಮಾಡಿದ್ದಾರೆ,
ಗಾಳಿ ಕೆರೆಯ ಗಿರಿ ಶಿಖರಗಳ ತಣ್ಣನೆಯ ತಂಗಾಳಿಯ ಅನುಭವವನ್ನು ಐಶ್ವರ್ಯ ರವರು ತಮ್ಮ ಕೈ ಚಳಕದಲ್ಲಿ ತೊರಿಸಿದ್ದಾರೆ, ಭದ್ರ ಹಿನ್ನೀರಿನ ದೃಶ್ಯ ವೈಭವವನ್ನು ಸಿಂಚನ ಕಶ್ಯಪ್ ಹಾಗೂ ರಾಕೇಶ್ ರವರು ವರ್ಣ ಮಯವಾಗಿ ವಿನೂತನ ಶೈಲಿಯಲ್ಲಿ ಸೃಜನಾತ್ಮಕವಾಗಿ ಸೆರೆ ಹಿಡಿಸಿದ್ದಾರೆ, ಕುದುರೆ ಮುಖ ನಿಸರ್ಗ ಚಿತ್ರಣವನ್ನು ವಿಭಿನ್ನ ದೃಷ್ಟಿಯಲ್ಲಿ ಗ್ರೀಷ್ಮ ಮತ್ತು ಗಾನವಿ ಚಿತ್ರಿಸಿದ್ದಾರೆ, ನಮ್ಮಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ ನೀಲ ಕುರುವಂಜಿ ಸೃಷ್ಟಿಸಿದ ರೋಮಾಂಚನಕಾರಿ ಅನುಭವವನ್ನು ಚಿತ್ರಗಳಲ್ಲಿ ಪೆಟ್ರೆಶಿಯ ರಚಿಸಿದ್ದಾರೆ,
ಹಿರೆಕೊಳಲೆ ಕೆರೆಯ ವಿಹಂಗಮ ನೋಟವನ್ನು ಸಂಜಯ್ ರಚಿಸಿದ್ದಾರೆ, ಪ್ರಕೃತಿಯ ಮದ್ಯದಲ್ಲಿ ಇರುವ ಅಯ್ಯನಕೆರೆ ದೃಶ್ಯವನ್ನು ಸಿದ್ಧಾರ್ಥ್ ರಚಿಸಿದ್ದಾರೆ, ಯಶ್ವಂತ್ ಆಚಾರ್ಯ ಭದ್ರ ಹಿನ್ನೀರಿನ ಮುಸ್ಸಂಜೆಯ ಚಿತ್ರಣವನ್ನು ರಚಿಸಿದ್ದಾರೆ, ಚಾರ್ಮುಡಿ ಘಾಟ್ನಲ್ಲಿ ಮಳೆಗಾಲದಲ್ಲಿ ಜರಿಗಳ ಜಲಪಾತಗಳ ನಿಸರ್ಗದ ಸೃಷ್ಟಿಯ ವೈಭವ ಮತ್ತೆ-ಮತ್ತೆ ಚಾರ್ಮುಡಿಗೆ ಹೋಗಬೇಕೆನಿಸುತ್ತದೆ, ನಿಶಬ್ದವಾದ ಕಾನನದಲ್ಲಿ ದುಮ್ಮಿಕ್ಕಿ ಹರಿಯುವ ಹನುಮನ ಗುಡಿಯ ಜಲಪಾತದ ಚಿತ್ರಣವನ್ನು ರಾಜೇಶ್ ಮಾಡಿದ್ದಾರೆ, ಕಾಫಿ ಎಲೆಗಳ ಚಿತ್ರಣ ಹಾಗೂ ಝರಿ ಜಲಪಾತ ಮತ್ತು ಕಾಫಿ ಹೂಗಳ ದೃಶ್ಯವನ್ನು ಸ್ವಾಮಿ, ಮಧುರ ಆಚಾರ್ಯ ಪೆನ್ಸಿಲ್ನಲ್ಲಿ ರಚಿಸಿರುವುದು ನೋಡುಗರಿಗೆ ಕ್ಷಣಕಾಲ ದೃಶ್ಯಾನುಭವ ಉಂಟುಮಾಡುತ್ತದೆ.
ಚಿತ್ರ ಕಲಾವಿದನ ತಲ್ಲಿನತೆ, ಕೈ ಚಳಕ, ವರ್ಣತಂತ್ರಗಾರಿಕೆ, ಆಯ್ಕೆ ಮಾಡಿಕೊಂಡ ವಸ್ತು ವಿಷಯಗಳಿಗೆ ಸಲ್ಲಿಸಿದ ಪ್ರಾಮಾಣಿಕ ಪ್ರಯತ್ನ ಕಲಾಸ್ವಾದಕರು ಅವುಗಳನ್ನು ನೋಡಿ ಆಸ್ವಾದಿಸಿದರೆ, ತಮ್ಮ ಕಛೇರಿ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಕೊಂಡೊಯ್ದಲ್ಲಿ ಮಾತ್ರ ಕಲಾವಿದರ ಈ ಪರಿಶ್ರಮ ಸಾರ್ಥಕವೆನಿಸುತ್ತದೆ, ಆದುದ್ದರಿಂದ ಈ ತಿಂಗಳ ೩೦ರ ವರೆಗೆ ನಗರದ ಶಾಂತಿ ನಿಕೇತನ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ವಿಶೇಷ ಚಿತ್ರಕಲಾ ಪ್ರದರ್ಶನ ಕಲಾಸಕ್ತರನ್ನು ನಿರೀಕ್ಷಿಸುತ್ತದೆ.
ಈ ಬಾರಿ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಕಲಾವಿದ ಹರ್ಷ ರವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರ ನಿಹಕ್ಕೂ ವಿದ್ಯಾರ್ಥಿಗಳಿಗೆ ಅದ್ಬುತವಾದ ಕಲಿಕಾ ಅನುಭವವನ್ನು ನೀಡಿದೆ, ಮುಂದಿನ ದಿನಗಳಲ್ಲಿ ಪ್ರವಾಸೋದ್ಯನ,ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತದ ಸಹಯೋಗ ಸಿಕ್ಕೆ ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತು ದೇವಾಲಯಗಳನ್ನು ಕ್ಯಾನ್ವರ್ಸ್ನಲ್ಲಿ ಚಿತ್ರಿಸಿ ದಾಖಲಿಸಬೇಕೆಂಬ ಆಸೆ ಇದೆ, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಗಳಲ್ಲಿ ಕಲಾಕೃತಿಗಳನ್ನು ನೀಡುವ ಮತ್ತು ಪಡೆಯುವ ಸಂಸ್ಕೃತಿ ನಮ್ಮಲ್ಲಿ ಆರಂಭವಾದರೆ ಕಲಾವಿದರಿಗು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ, ವಿಶ್ವಕರ್ಮ ಆಚಾರ್ಯ ಪ್ರಾಚಾರ್ಯರು ಹಾಗೂ ಚಿತ್ರ ಶಿಲ್ಪ ಕಲಾವಿದರು.
Monsoon Color Painting Exhibition by the young artists of the district