ಚಿಕ್ಕಮಗಳೂರು: ಜಿಲ್ಲೆಯ ಭೂಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಕಡೂರು ಹಿಂದಿನ ತಹಸೀಲ್ದಾರ್ ಜೆ.ಉಮೇಶ್ರವರನ್ನು ನಿನ್ನೆ ಬಂಧಿಸಲಾಗಿದೆ.
ಮೃತ ವ್ಯಕ್ತಿ ಹೆಸರಿಗೆ ಹಾಗೂ ಕಾನೂನುಬಾಹಿರವಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿದ ಆರೋಪದ ಮೇಲೆ ಇವರ ವಿರುದ್ಧ ದೋ?ರೋಪಣೆ ಪಟ್ಟಿ ಸಲ್ಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಜೊತೆಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ರವರ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಈತ ಮಂಡಿ ಊರಿ ಕುಳಿತು ಲಜ್ಜೆಗೇಡಿತನ ಪ್ರದರ್ಶಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.
ಆರೋಪವನ್ನು ಎದುರಿಸುತ್ತಿರುವ ಈತನಿಗೆ ಬಡ್ತಿ ನೀಡಿರುವುದನ್ನು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು, ಸರ್ಕಾರ ಬದಲಾಗುತ್ತಿದ್ದಂತೆ ಈತನ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ.
ಈ ಮಧ್ಯೆ ಸಾವಿರಾರು ಎಕರೆ ಭೂಮಿ ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣದಲ್ಲಿ ಈ ವ್ಯಕ್ತಿಯ ಹೆಸರು ಸೇರಿಕೊಂಡಿದ್ದು ಎಮ್ಮೆದೊಡ್ಡಿ ಮೀಸಲು ಅರಣ್ಯ ಪ್ರದೇಶದ ಭೂಮಿಯನ್ನು ೮ ಜನರಿಗೆ ಪರಭಾರೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದರೆನ್ನಲಾಗಿದೆ.
ಈ ಬಗ್ಗೆ ಕಡೂರು ಠಾಣೆಯಲ್ಲಿ ಉಮೇಶ್ ಸಹಿತ ಮೂವರ ವಿರುದ್ಧ ಕೇಸು ದಾಖಲಿಸಲಾಗಿತ್ತು ಈಗ ಬಡ್ತಿ ಹೊಂದಿ ಕಾರವಾರ ಸೀಬರ್ಡ್ ನೌಕ ನೆಲೆಯಲ್ಲಿ ಭೂಸ್ವಾಧೀನಾಧಿಕಾರಿಯಾಗಿರುವ ಉಮೇಶ್ ಜೈಲು ಸೇರಿದ್ದಾನೆ.
Former Tehsildar J. Umesh of Kadur arrested