ಚಿಕ್ಕಮಗಳೂರು: ನಗರದ ಅಬ್ಲೇಜ್ ಮೋಟಾರ್ ಸ್ಪೋರ್ಟ್ಸ್ ಮತ್ತು ವಮ್ಸಿ ಮೆರ್ಲಾ ಮೋಟಾರ್ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ಇದೇ ತಿಂಗಳ ೨೭ ರಂದು ರಾಷ್ಟ್ರೀಯ ಮಟ್ಟದ ಡರ್ಟ್ ಪ್ರಿಕ್ಸ್ ಕಾರು ರ್ಯಾಲಿಯನ್ನು ಏರ್ಪಡಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಗೌತಮ್ ಆ.೨೬ ರಂದು ಬೆಳಗ್ಗೆ ೮ ರಿಂದ ಸಂಜೆವರೆಗೆ ಸ್ಪರ್ಧಾ ವಾಹನಗಳ ತಪಾಸಣೆ, ನೊಂದಣಿ ಪ್ರಕ್ರಿಯೆಗಳು ನಡೆಯಲಿವೆ. ಮರುದಿನ ಆ.೨೭ ರಂದು ಮುಗಳವಳ್ಳಿ ಸಮೀಪದ ಮೈದಾನದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಡರ್ಟ್ ಪ್ರಿಕ್ಸ್ ಸ್ಪರ್ಧೆ ನಾಲ್ಕು ಚಕ್ರ ವಾಹನಗಳ ರಾಷ್ಟ್ರಮಟ್ಟದ ಸ್ಪರ್ಧೆ ಆಗಿದ್ದು ಪ್ರತಿ ಕಾರು ನೆಲದಲ್ಲಿ ಎರಡು ಲ್ಯಾಪ್ಗಳವರೆಗೆ ಓಡುತ್ತದೆ ಮತ್ತು ಮೈದಾನದಲ್ಲಿ ವೇಗವಾಗಿ ಸಮಯ ಕಳೆದ ಕಾರನ್ನು ವಿಜೇತ ಕಾರು ಎಂದು ಪರಿಗಣಿಸಲಾಗುತ್ತದೆ. ಒಂದು ಕಾರು ಒಂದು ಬಾರಿ ಓಡಲು ಅವಕಾಶ ಇರುತ್ತದೆ. ಕಾರುಗಳ ಸಿ.ಸಿ ಗಳ ಆಧಾರದ ಮೇಲೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದು ಹೇಳಿದರು.
ಸುಮಾರು ೧.೪೫ ಕಿ.ಮೀ ಮುಚ್ಚಲ್ಪಟ್ಟ ಪ್ರತಿ ಚಾಲಕ ಎರಡು ಲ್ಯಾಪ್ಗಳನ್ನು ಹೊಂದಿರುವ ಸರ್ಕ್ಯೂಟ್ ಇದ್ದು, ಸುಮಾರು ೧೭ ವಿಭಾಗಗಳನ್ನು ಹೊಂದಿರುವುದಾಗಿ ತಿಳಿಸಿದ ಅವರು ಈಗಾಗಲೇ ೧೬೦ ಸ್ಪರ್ಧಿಗಳು ನೊಂದಾವಣೆ ಮಾಡಿಕೊಂಡಿದ್ದು ಭಾರತದಾದ್ಯಂತ ೧೦೦ಕ್ಕೂ ಹೆಚ್ಚು ಕಾರುಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಈಗಾಗಲೇ ವಿವಿದೆಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಖ್ಯಾತರಾಗಿರುವ ತಮಿಳುನಾಡು, ಗೋವಾ, ಕೇರಳ, ಹೈದರಾಬಾದ್, ಮೇಘಾಲಯ, ದೆಹಲಿ ಸೇರಿದಂತೆ ವಿವಿಧ ಕಡೆಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೋಟರ್ ಸ್ಪೋರ್ಟ್ಸ್ ಪಂದ್ಯಾವಳಿಯನ್ನು ಉತ್ತೇಜಿಸಲು ನಡೆಯುತ್ತಿರುವ ಈ ಪಂದ್ಯಾವಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಸಹಕರಿಸಬೇಕೆಂದು ವಿನಂತಿಸಿದ ಅವರು ಈ ಪಂದ್ಯಾವಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ಲೇಟ್ ಮೋಟಾರ್ ಸ್ಪೋರ್ಟ್ಸ್ಕ್ಲಬ್ನ ವ್ಯವಸ್ಥಾಪಕ ಶರಣ್, ಕುಶಾಲ್, ಯಧುಕುಮಾರ್ ಉಪಸ್ಥಿತರಿದ್ದರು.
National level dirt prix car rally on August 27