ಚಿಕ್ಕಮಗಳೂರು: ಗಂಗಾವತಿಯಲ್ಲಿ (ಕೊಪ್ಪಳ)ದಲ್ಲಿ ನಡೆದ ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲಾಟ್ಲೀಗ್ನಲ್ಲಿ ಚಿಕ್ಕಮಗಳೂರಿನ ಬಾಲಕಿಯರು ಚಾಂಪಿಯನ್ ಆಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿವೇಕಾನಂದ ಫಿಟ್ನೆಸ್ ಅಕಾಡೆಮಿ ವಿದ್ಯಾರ್ಥಿನಿಯರು ಭಾಗವಹಿಸಿ ಒಟ್ಟು ೯ ಚಿನ್ನ, ೫ ಬೆಳ್ಳಿ ಮತ್ತು ೪ ಕಂಚಿನ ಪದಕವನ್ನು ಗೆದ್ದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ, ಚಿನ್ನದ ಪದಕ ಪಡೆದವರು ಎಚ್.ಎಸ್.ಧನುಶ್ರೀ, ಹಾಸಿನಿ, ಡಿ.ಎಸ್.ಶೋಭಾ, ಎ.ಎಸ್.ಥೋಶಿನಿ, ವಿ.ಇನುಗೌಡ, ಸಫಾಇರಾಮ್, ಎನ್.ಚಾರಿತ್ಯ, ರಿಯಾನ್ನಾ ಲೆವಿಸ್, ರೋಚಿತಾ.
ಬೆಳ್ಳಿ ಪದಕ ಪಡೆದವರು ವಿ.ಎಸ್.ನೇಹಾ, ಪ್ರೀತಿ.ಸಿ.ಕೆ, ಕೆ.ಆರ್.ವೈಷ್ಣವಿ, ಚಂದನ ಅನನ್ಯಶ್ರೀ, ಅಲ್ವಿನಾ, ಕಂಚಿನ ಪದಕ ಪಡೆದವರು ಹಿಬಾ ಇರಾಮ್, ಪಿ.ಸಾನಿಕಾ, ಪೂರ್ವಿಕಾ.ಜೆ.ಅರ್ಸ್ ಎಸ್.ಸ್ನೇಹಾನಾಯ್ಕ್, ವೆನಿಶಾಗೌಡ ರವರಿಗೆ ದೋರೆತಿದ್ದು.
ತರಬೇತುದಾರರಾದ ಯಶ್ವಂತ್.ಬಿ.ಆರ್, ನಂದಕುಮಾರ್ ಮತ್ತು ಗಿರೀಶ್.ಟಿ.ಎಸ್ ರವರು ತರಬೇತಿಯನ್ನು ನೀಡಿದ್ದು ಇವರಿಗೆ ವಿವೇಕಾನಂದ ಫಿಟ್ನೆಸ್ ಅಕಾಡೆಮಿ ವತಿಯಿಂದ ಹಾಗೂ ಪೋಷಕರಿಂದ ಅಭಿನಂದಿಸಲಾಯಿತು.
The girls of Chikmagalur became champions