ಚಿಕ್ಕಮಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದ ಕುಮಾರಿ ಸೌಜನ್ಯ ಪ್ರಕರಣವನ್ನು ಸುಪ್ರೀಂಕೋರ್ಟ್ ಮೂಲಕ ಸಮಗ್ರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗೀರಸ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಕುರಿತು ನ್ಯಾಯದಾನಕ್ಕಾಗಿ ನಡೆಯುತ್ತಿರುವ ಚಳುವಳಿಯು ಸರ್ಕಾರದ ಉದಾಸೀನ ಹಿತಾಶಕ್ತಿ ರಾಜಕಾರಣದಿಂದ ಸಮಾಜದಲ್ಲಿ ಒಂದು ದೊಡ್ಡ ಕಂದಕವನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು.
ಘಟನೆಯ ಪ್ರತಿ ಹಂತವು ಭಾರತದ ಪ್ರಜಾಪ್ರಭುತ್ವ ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸುತ್ತಿದೆ ಜಾತಿ ಮತ್ತು ಪೊಳ್ಳು ಸಿದ್ಧಾಂತದ ಆಧಾರದಲ್ಲಿ ಬಿರುಕು ಹೆಚ್ಚಾಗುತ್ತಿದೆ .ಕರಾವಳಿ ಜಿಲ್ಲೆಗಳ ನೈಜ ಹಿಂದುತ್ವದ ಮತ್ತು ಪೊಳ್ಳು ಹಿಂದುತ್ವವಾದದ ಘ?ಣೆ ಹೆಚ್ಚಾಗುತ್ತಿದೆ ಎಡಪಂಥೀಯ ಚಳುವಳಿಗಾರರು ಮತ್ತು ಮಹಿಳೆಯರು ಸರ್ಕಾರದ ಮತ್ತು ಧಾರ್ಮಿಕ ಸಂಸ್ಥೆಗಳ ವಿರುದ್ಧ ಬೀದಿಗಿಳಿದಿರುವುದು ಸೂಕ್ಷ್ಮವಾಗಿ ಗಮನಿಸುವ ಅಂಶವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ತನ್ನ ನೈಜ ಕಾಳಜಿಯನ್ನು ಪ್ರದರ್ಶಿಸಿ ಸುಪ್ರೀಂ ಕೋರ್ಟ್ ನ ನೇತೃತ್ವದಲ್ಲಿ ಪಾರದರ್ಶಕ ತನಿಖೆಗೆ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಈ ಪ್ರಕರಣವು ರಾಜ್ಯ ಸರ್ಕಾರವನ್ನು ಗಟ್ಟಿಯಾಗಿ ಸುತ್ತಿಕೊಳ್ಳಲಿದೆ ಎಂದರು.
ಭಾರತದ ಪಾರಂಪರಿಕ ವ್ಯವಸ್ಥೆಯು ರಾಜ ಮನೆತನಗಳು ಪ್ರಜೆಗಳಿಗೆ ಹಾಗೂ ರಾಜ್ಯಕ್ಕೆ ದ್ರೋಹ ಎಸಗಿದೆ ತಮ್ಮ ಮಕ್ಕಳನ್ನೇ ನೇಣಿಗೇರಿಸಿದ ಅಥವಾ ಕೊಲ್ಲಿಸಿದ ಉದಾಹರಣೆ ನಮ್ಮ ಮುಂದಿದೆ ಎಂಬುದನ್ನು ಆಪಾದನೆಗಳಾಗುತ್ತಿರುವ ಧಾರ್ಮಿಕ ವ್ಯವಸ್ಥೆಗಳು ಮತ್ತು ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸೌಜನ್ಯಳ ತಾಯಿಯು ನೇರವಾಗಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರ ಮುಂದೆ ತನ್ನ ಅರ್ಥನಾದವನ್ನು ಮಂಡಿಸುವ ವ್ಯವಸ್ಥೆಯನ್ನು ಅವರಿಗೆ ಬೆಂಗಾವಲಾಗಿರುವ ಹೋರಾಟಗಾರರು ಒದಗಿಸಿ ಕೊಡಲಿ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಖಂಡಿತ ಸೌಜನ್ಯಳ ತಾಯಿಗೆ ನ್ಯಾಯ ದೊರಕಲಾರದು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಸರ್ಕಾರಗಳು ತನಿಖೆಗಳಿದರೆ ಮತ್ತೆ ನಿರಪರಾಧಿ ಸಂತೋ? ರಾವ್ನನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸಿ ಈ ಕೇಸ್ ಅನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರವನ್ನು ನಡೆಸುವ ಸಾಧ್ಯತೆ ಇದೆ ಎಂದರು.
ಈ ಉದ್ದೇಶಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ಏರುತ್ತಿರುವುದು ಕಂಡುಬರುತ್ತಿವೆ. ಹಿತಾಸಕ್ತಿಗಳ ಮತ್ತು ರಾಜಕೀಯ ಪಕ್ಷಗಳ ಈ ನಡೆಯನ್ನು ಹೋರಾಟಗಾರರು ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಅಂದಿನ ಅಧಿಕಾರಿಗಳನ್ನು ಸಿಐಡಿ ಮತ್ತು ಸಿಬಿಐ ಕೇಸಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅವರು ನಿವೃತ್ತಿಯಲ್ಲಿರಲಿ ಅಥವಾ ಬೇರೆ ಕಡೆ ಸೇವೆಯಲ್ಲಿರಲಿ ಇವರ ಮೇಲೆ ಮಂಪರು ಪರೀಕ್ಷೆಯಂತಹ ಸತ್ಯ ಹೊರಡಿಸುವ ಪ್ರಯೋಗಗಳನ್ನು ಕೈಗೊಂಡಾಗ ಮಾತ್ರ ಈ ಕೇಸಿನ ಅಸಲಿಯತ್ತು ಹೊರಬರಲಿದೆ ಎಂದರು.
Save democracy forum demands re-investigation of courtesy case