ಚಿಕ್ಕಮಗಳೂರು: ಟೆಂಪೊ ಟ್ರಾವೆಲರ್ ಮತ್ತು ಮಿನಿ ಬಸ್ ಸಂಘಕ್ಕೆ ನಗರ ವ್ಯಾಪ್ತಿಯಲ್ಲಿ ಪೌರಯುಕ್ತರಿಗೆ ಸೂಚಿಸಿ ಸೂಕ್ತ ನಿವೇಶನ ನೀಡುವ ಮೂಲಕ ಸಮಸ್ಯೆ ಪರಿಹರಿಸುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ಅವರು ಇಂದು ಚಿಕ್ಕಮಗಳೂರು ತಾಲ್ಲೂಕು ಟೆಂಪೊ ಟ್ರಾವೆಲರ್ಸ್ ಮತ್ತು ಮಿನಿ ಬಸ್ ಚಾಲಕರು ಮಾಲಿಕರ ಸಂಘ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರು ತಿಳಿಸಿರುವಂತೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವುದಾಗಿ ಭರವಸೆ ನೀಡಿದ ಅವರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾಧಕ ಭಾದಕಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳಲಾಗುವುದೆಂದು ಹೇಳಿದರು.
ಬಡವರ ಬದುಕಿಗಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಡವರ ಪರವಾಗಿ ೫ ಗ್ಯಾರಂಟಿಗಳ ಪೈಕಿ ಈಗಾಗಲೆ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ ಈ ನಾಲ್ಕು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದು ಉಳಿದಿರುವ ಯುವನಿಧಿ ಯೋಜನೆಯನ್ನು ಅತಿಶೀಘ್ರದಲ್ಲಿ ಜಾರಿಮಾಡಲಿದ್ದಾರೆ ಎಂದು ತಿಳಿಸಿದರು.
ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಮತ ನೀಡಿ ನನ್ನನು ಶಾಸಕನಾಗಿಸಿರುವ ನಿಮಗೆಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
ಟೆಂಪೊ ಟ್ರಾವಲರ್ಸ್ ಮತ್ತು ಮಿನಿ ಬಸ್ ಚಾಲಕರು, ಮಾಲಿಕರ ಸಂಘದ ಅಧ್ಯಕ್ಷ ಬಿ.ಪಿ ಉಮೇಶ್ ಮಾತನಾಡಿ ನಮ್ಮಗಳ ವಾಹನ ನಿಲುಗಡೆಗೆ ನಗರ ವ್ಯಾಪ್ತಿಯಲ್ಲಿಯೇ ಸೂಕ್ತ ನಿವೇಶನವನ್ನು ಗುರುತಿಸಿ ಶಾಶ್ವತವಾದ ಅನುಕೂಲಕರ ಜಾಗ ನೀಡುವಂತೆ ಮನವಿ ಮಾಡಿದರು.
ತೆರಿಗೆ ಪಾವತಿಸದೆ ಬಿಳಿ ಬೋರ್ಡ್ ವಾಹನಗಳ ಆವಳಿಯಿಂದಾಗಿ ನಮ್ಮ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ನಾವು ೩ ತಿಂಗಳಿಗೊಮ್ಮೆ ತೆರಿಗೆ ಪಾವತಿಸಿ ಪರವಾನಗಿ ಪಡೆದಿದ್ದರು ಕೆಲವು ಅನಾನುಕುವಾಗುತ್ತಿದೆ ಅದ್ದರಿಂದ ಶಾಸಕರಾಗಿರುವ ತಾವು ಈ ನಮ್ಮ ಬಹುಮುಖ್ಯ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಪೊಲೀಸರ ಮೂಲಕ ಬಗೆಹರಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಸಂಘದ ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಸೇರಿದಂತೆ ಟೆಂಪೊ ಟ್ರಾವೆಲರ್ಸ್ ಚಾಲಕರು ಭಾಗವಹಿಸಿದ್ದರು.
Assuring suitable location for Tempo Traveler Association within city limits