ಚಿಕ್ಕಮಗಳೂರು: ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೃಷ್ಣಮೂರ್ತಿ, ನಾಗೇಶ್ ಮತ್ತು ವರ್ಗಾವಣೆಗೊಂಡ ಶಂಕರ್, ಗೋಪಿ ಅವರಿಗೆ ನಗರಸಭೆ ವತಿಯಿಂದ ಬೀಳ್ಕೋಡುಗೆ ನೀಡಲಾಯಿತು
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ನೌಕರಿ ಸೇರಿದ ಪ್ರತಿಯೊಬ್ಬರಿಗೂ ನಿವೃತ್ತಿ ದಿನವನ್ನು ನಿಗದಿ ಮಾಡಲಾಗಿರುತ್ತದೆ, ತಮ್ಮ ವೃತ್ತಿ ದಿನಗಳಲ್ಲಿ ಮಾಡಿದ ಕೆಲಸ ಕಾರ್ಯಗಳು ನಮಗೆ ಹೆಸರು ತಂದುಕೊಡುತ್ತದೆ, ನಗರಸಭೆಯ ಹಲವು ಕೆಲಸಗಳನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ನಾಗಭೂಷಣ್, ಕೃಷ್ಣಮೂರ್ತಿ ರವರು ಕಳೆದ ೩೦ ವರ್ಷಗಳಿಂದ ಪರಿಚಯ ಇದ್ದವರು ಅವರ ಮುಂದಿನ ಜೀವನ ಸುಖಕರವಾಗಿರಲೆಂದು ತಿಳಿಸಿದರು.
ನಗರಸಭೆ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಶಂಕರ್ ಮತ್ತು ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಗೋಪಿ ಅವರು ಹೆಚ್ಚಿನ ಸೇವೆಯನ್ನು ನೀಡುವ ಮೂಲಕ ಇನ್ನೂ ಉನ್ನತ ಸ್ಥಾನವನ್ನೇರಲಿ ಹಾಗೂ ಒಳ್ಳೆಯ ಹೆಸರನ್ನು ಗಳಿಸುವಂತಾಗಲೆಂದು ಶುಭ ಹಾರೈಸಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ಸರ್ಕಾರಿ ಕೆಲಸ ನಿರ್ವಹಿಸುವವರಿಗೆ ವರ್ಗಾವಣೆ ಮತ್ತು ನಿವೃತ್ತಿ ಎನ್ನುವುದು ಸಹಜ ಪ್ರಕ್ರಿಯೇ, ೩೫-೪೦ ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಜನ ಪ್ರತಿನಿಧಿಗಳು ಇಂತಹ ಪೌರ ಕಾರ್ಮಿಕ ನಮ್ಮ ನಡುವೆ ಇರಬೇಕೆಂದು ಬಯಸುವಂತಹ ವ್ಯಕ್ತಿತ್ವವನ್ನು ಹೊಂದಿದವರು ಕೃಷ್ಣಮೂರ್ತಿ ಮತ್ತು ನಾಗಭೂಷಣ್ ರವರು ಎಂದರು.
ನಿವೃತ್ತಿ ಹೊಂದಿದ ಪ್ರತಿಯೋಬ್ಬರು ಮಾನಸಿಕ ಚಿಂತೆಗೊಳಗಾಗದೆ ತಮ್ಮ ಮುಂದಿನ ಜೀವನವನ್ನು ಆರೋಗ್ಯಕರವಾಗಿ ಉತ್ತಮರೀತಿಯಲ್ಲಿ ಜೀವಿಸಬೇಕು, ಕಳೆದ ೨೫ ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಶಂಕರ್ ಮತ್ತು ಬಡ್ತಿಯನ್ನು ಪಡೆದು ವರ್ಗಾವಣೆಗೊಂಡ ಗೋಪಿ ರವರು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಒಳ್ಳೆಯ ಹೆಸರನ್ನು ಗಳಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ಸದಸ್ಯರಾದ ಶಾದಾಬ್ ಅಲಂ ಖಾನ್, ಪರಮೇಶ್ ರಾಜ್ ಅರಸ್, ನಾಗರಾಜ್, ಅಣ್ಣಯ್ಯ, ಶ್ರೀನಿವಾಸ್ ಉಪಸ್ಥಿತರಿದ್ದರು.
Government employees are lucky to get retirement and transfer without wanting to