ಚಿಕ್ಕಮಗಳೂರು : ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು ಆನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಅರಣ್ಯ ಅಧಿಕಾರಿಗಳು ಕೊಟ್ಟ ಎಚ್ಚರಿಕೆಯನ್ನ ಕಾಫಿ ತೋಟದ ಮಾಲೀಕರು ಪಾಲಿಸದ ಹಿನ್ನೆಲೆ ಆಸ್ಪತ್ರೆಗೆ ಹೋಗ್ತಿದ್ದ ಅಮಾಯಕ ಬಲಿಯಾಗಿದ್ದಾನೆ.
ಕಾಫಿನಾಡ ಮೂಡಿಗೆರೆ ತಾಲೂಕಿನಲ್ಲಿದ್ದ ಆನೆ ಹಾವಳಿ ಇದೀಗ ಎಲ್ಲಾ ಭಾಗಕ್ಕೂ ವಿಸ್ತರಿಸಿದೆ. ಆನೆಗಳ ಗುಂಪು ಇದ್ದಾಗ ಅದನ್ನ ಓಡಿಸೋದು ಬಿಟ್ಟು ಎಚ್ಚರಿಕೆ ಕೊಡೋದು ಅರಣ್ಯ ಅಧಿಕಾರಿಗಳ ಕೆಲಸವಾ ಎಂದು ಸ್ಥಳಿಯರು ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದದಲ್ಲಿ ಆನೆ ದಾಳಿ, ಆನೆ ಹಾವಳಿ, ಆನೆ ಹಿಂಡಿನ ಓಡಾಟ ಹೊಸತೇನೂ ಅಲ್ಲ. ನಿತ್ಯವೂ ಜಿಲ್ಲೆಯ ಒಂದಲ್ಲ ಒಂದು ಭಾಗದಲ್ಲಿ ನಿತ್ಯ ಆನೆ ಹಾವಳಿ ಇದ್ದದ್ದೆ. ಆನೆ ದಾಳಿಗೆ ಪ್ರಾಣ ಕಳೆದುಕೊಂಡವರು ಹತ್ತಾರು ಜನ. ಕಳೆದ 2 ವರ್ಷದಲ್ಲಿ 7ಕ್ಕೂ ಹೆಚ್ಚು ಜನ ಆನೆ ದಾಳಿಗೆ ಬಲಿಯಾಗಿರುವ ನಿದೇರ್ಶನವಿದೆ.ಇಂದು ಕೂಡ ಆನೆ ದಾಳಿಗೆ ಚಿಕ್ಕಮಗಳೂರು ತಾಲೂಕಿನ ಕಂಚುಕಲ್ ಗ್ರಾಮದ 60 ವರ್ಷದ ಕಿನ್ನಿ ಎಂಬ ವೃದ್ಧ ಸಾವನ್ನಪ್ಪಿದ್ದಾರೆ.
ಆರೋಗ್ಯ ಸರಿ ಇಲ್ಲ ಅಂತ ಆಸ್ಪತ್ರೆಗೆ ಹೋಗೋಕೆಂದು ಕಾಲು ದಾರಿಯಲ್ಲಿ ಮುಖ್ಯ ರಸ್ತೆಗೆ ಹೋಗ್ತಿದ್ದ ವ್ಯಕ್ತಿ ಮೇಲೆ ಕಾಡಾನೆಗಳ ದಾಳಿ ಮಾಡಿ ಸ್ಥಳದಲ್ಲೇ ತುಳಿದು ಹಾಕಿದೆ. ಆತನನ್ನ ತುಳಿದ ಬಳಿಕ ಆನೆ ಕೂಡ ಸ್ಥಳದಲ್ಲೇ ನಿಂತಿತ್ತು. ಸ್ಥಳಿಯರು ಏನೇ ಕೂಗಾಗಿ, ಪಟಾಕಿ ಸಿಡಿಸಿದರು ಆನೆ ಜಾಗ ಬಿಟ್ಟು ಕದಲಿಲ್ಲ. ಬಳಿಕ 32 ಜನ ಅರಣ್ಯಾಧಿಕಾರಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟು ಆನೆಯನ್ನ ಓಡಿಸಿ ಮೃತದೇಹವನ್ನ ಹೊರತಂದಿದ್ದಾರೆ.
ಏಳು ಕಾಡಾಣೆಗಳು ಮರಿ ಜೊತೆ ಇದ್ದ ಕಾರಣ ಪಟಾಕಿ ಸಿಡಿಸಿದ್ದರಿಂದ ಗಾಬರಿಗೊಂಡು ಹೊರಹೋಗಿಲ್ಲ. ಇಂದು ಬೆಳಗ್ಗೆ ದಾರಿಯಲ್ಲಿ ಸಿಕ್ಕ ವ್ಯಕ್ತಿಯನ್ನ ತುಳಿದ ಸಾಯಿಸಿವೆ. ಆದರೆ, ಎರಡು ದಿನಗಳ ಹಿಂದೆಯೇ ಆನೆಯನ್ನ ಹಿಂಡನ್ನ ಕಂಡ ಅಧಿಕಾರಿಗಳು ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ಅದು ಎಲ್ಲರಿಗೂ ಗೊತ್ತು. ಆನೆ ಇದ್ದಾಗ ಓಡಿಸೋದು ಅರಣ್ಯ ಅಧಿಕಾರಿಗಳ ಕೆಲಸ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧ ಮೃತನ ಸಂಬಂಧಿಸುರೇಶ್ ಅಸಮಾಧಾನ ಹೊರಹಾಕಿದ್ದಾರೆ.
ಮರಿಗಳ ಜೊತೆ ಹಿಂಡು ಆನೆಗಳು ಇದ್ದಾಗ ಪಟಾಕಿ ಸಿಡಿಸಿ, ಗುಂಡು ಹಾರಿಸಿದರೆ ಆನೆಗಳು ಗಾಬರಿಯಾಗುತ್ತೆ ಅನ್ನೋದು ಪ್ರತಿಯೊಬ್ಬ ಮಲೆನಾಡಿಗೂ ಗೊತ್ತು. ಅದ ಹೇಳೋಕೆ ಅರಣ್ಯ ಅಧಿಕಾರಿಗಳೇ ಬೇಕಾ ಅನ್ನೋದು ಸ್ಥಳಿಯರ ಪ್ರಶ್ನೆ. ಆನೆಗಳ ಗುಂಪು ಇದೆ ಎಂದು ತಿಳಿದಾಗ ಅಧಿಕಾರಿಗಳೇ ಓಡಿಸಿದ್ರೆ ಇಂದು ಈ ಅಮಾಯಕ ಜೀವ ಸಾಯ್ತಿರ್ಲಿಲ್ಲ. ಈ ಸಾವಿಗೆ ಪರೋಕ್ಷವಾಗಿ ಅರಣ್ಯ ಇಲಾಖೆ ಕೂಡ ಕಾರಣ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಆನೆ ಹಾವಳಿಯಿಂದ ಕಂಗೆಟ್ಟಿರೋ ಮಲೆನಾಡ ಕುಗ್ರಾಮದ ಜನ ನಿತ್ಯ ಆತಂಕದಲ್ಲೇ ಬದುಕುತ್ತಿದ್ದಾರೆ. ಕಳೆದ 2 ವರ್ಷದಲ್ಲಿ ಸುಮಾರು ಏಳಕ್ಕೂ ಹೆಚ್ಚು ಜನ ಆನೆ ದಾಳಿಗೆ ಉಸಿರು ಚೆಲ್ಲಿದ್ದಾರೆ. ಆನೆ ದಾಳಿ, ಸರ್ಕಾರ-ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಂಗೆಟ್ಟ ಹಳ್ಳಿಗರು ಶಾಸಕರ ಮೇಲೆ ಹಲ್ಲೆ ಮಾಡಿದ್ದರು. ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಮೇಲೆ ದಾಳಿ ಮಾಡಿ ದ್ವಂಸ ಮಾಡಿದ್ದರು. ಆದರೂ ಮೂಡಿಗೆರೆಯಲ್ಲಿ ಆನೆ ಹಾವಳಿ ಇನ್ನೂ ನಿಂತಿಲ್ಲ. ಇದೀಗ ಆನೆ ದಾಳಿ ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ಪಕ್ಕದ ಆಲ್ದೂರು ಸುತ್ತಮುತ್ತ ಶುರುವಾಗಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು.
Innocent lives lost in forest attack in the hills