ಚಿಕ್ಕಮಗಳೂರು: ಸಮಾಜದ ಹಾಗೂ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಶ್ರೀ ಕೃಷ್ಣನ ಭಗವದ್ಗೀತೆಯೇ ಉತ್ತಮ ದಾರಿದೀಪವಾಗಿದೆ ಎಂದು ತಹಶೀಲ್ದಾರ್ ಸುಮಂತ್ ಹೇಳಿದ್ದಾರೆ.
ಕಲಾಮಂದಿರದಲ್ಲಿ ಬುಧವಾರ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನ್ಯಾಯಯುತವಾಗಿ ಮಾಡುವುದರ ಮೂಲಕ ಶ್ರೀ ಕೃಷ್ಣನ ಸಂದೇಶಗಳನ್ನು ಪಾಲಿಸಬೇಕು ಸಮಾಜದ ಎಲ್ಲ ವಲಯಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯ ಸಮ್ಮತ ತೀರ್ಮಾನಗಳನ್ನು ಹಾಗೂ ಸೂಕ್ಷ್ಮ ಪ್ರಜ್ಞೆಯನ್ನು ಆಳವಡಿಸಿಕೊಂಡು ತಮ್ಮ ತಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಸಾಹಿತಿ ಹೆಚ್.ಎಂ. ನಾಗರಾಜರಾವ್ ಉಪನ್ಯಾಸ ನೀಡಿ ಮಾತನಾಡುತ್ತಿದ್ದ ಅವರು ಈ ನೆಲದಲ್ಲಿ ಶ್ರೀ ಕೃಷ್ಣನಿಗೆ ವಿಶೇಷವಾದ ಸ್ಥಾನ ನೀಡಿದ್ದೇವೆ. ಭರತ ಖಂಡದಿಂದ ಹಿಡಿದು ಇಂದಿನವರಿಗೂ ಶ್ರೀ ಕೃಷ್ಣ ಸಂದೇಶಗಳು ಆದರ್ಶಗಳು ಹಾಗೂ ಶ್ರೀ ಕೃಷ್ಣ ಪ್ರಜ್ಞಾವಂತಿಕೆ ಇಂದು ಎಲ್ಲ ರಂಗದಲ್ಲಿ ಕಾಣಬಹುದಾಗಿದೆ ಎಂದರು.
ಭಾರತದ ವ್ಯಕ್ತಿತ್ವ ವಿಕಾಶನಕ್ಕೆ ಶ್ರೀ ಕೃಷ್ಣ ಸಂದೇಶ ಹಾಗೂ ಸಮಾಜಮುಖಿ ಕಾರ್ಯಗಳು ಹಾಗೂ ನಾಶವಾಗದಿರುವ ವಿಚಾರಗಳನ್ನು ಹಿಂದೆಯು ಹಾಗೂ ಮುಂದು ಕೂಡ ಪ್ರಚಲಿತವಾಗಿದೆ. ಶ್ರೀ ಕೃಷ್ಣನು ಈ ನೆಲದ ಮೊದಲ ಪರಿಸರ ಪ್ರೇಮಿ, ಸಾಂಸ್ಕೃತಿ ಹಾಗೂ ಸ್ತ್ರೀ ಪರ ಮತ್ತು ಧರ್ಮ ರಕ್ಷಣೆಗೆ ಸದಾ ಅವರ ನೆನಪುವಾದ ನುಡಿ ಇಂದಿಗೂ ಪ್ರೇರಪಣೆಯಾಗಿದ್ದಾರೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕೃಷ್ಣನು ಒಂದು ಸಮುದಾಯಕ್ಕೆ ಸೀಮಿತ ವಾದವರಲ್ಲ ಸರ್ವ ಜನಾಂಗಕ್ಕೂ ಸರ್ವ ವಿಚಾರಗಳಲ್ಲಿ ಶ್ರೀ ಕೃಷ್ಣನನ್ನು ಕಾಣಬಹುದು ಅವರ ತತ್ವಗಳು ಸಂದೇಶಗಳು ಎಂದಿಗೂ ಪ್ರಸ್ತುತ ಎಂದರು.
ಯಾದವ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಜಿ.ಕೆ. ಬಸವರಾಜ್ ಹಳ್ಳಿಕಾರ್ ಸಂಘದ ಶ್ರೀನಿವಾಸ್, ಸೋಮಶೇಖರ್ ಮತ್ತಿತರ ಸಮುದಾಯದ ಮುಖಂಡರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ. ರಮೇಶ್ ಸ್ವಾಗತಿಸಿ ವಂದಿಸಿದರು.
Shri Krishna Jayanti celebrations held at Kalamandir on Wednesday