ಚಿಕ್ಕಮಗಳೂರು: ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಸಾಕ್ಷಿ ನಾಶಪಡಿಸಿರುವ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಮಂಪರು ಪರೀಕ್ಷೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಮಾಡಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಬಿಕ್ಕೆಮನೆ ನೇಚರ್ ಕನ್ಸರ್ವೇ?ನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರ್ಗೌಡ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿ?ಯ ತಿಳಿಸಿ ಈ ಸಂಬಂಧ ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು ಮಾನವ ಹಕ್ಕುಗಳ ಆಯೋಗಕ್ಕೆ ಈ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಜವಾಬ್ದಾರಿ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸೌಜನ್ಯಳ ಕೊಲೆಯಾಗಿ ೧೧ ವ? ಕಳೆದರೂ ದೈವದ ನಾಡಿನಲ್ಲಿ ದೆವ್ವಗಳ ವೈಭವವೇ ನಡೆದಿರುವುದು ಅತ್ಯಂತ ದುರಂತ. ಸಾಕ್ಷಿ ನಾಶದ ಮುಖಾಂತರ ಪೊಲೀಸ್ ಮತ್ತು ಸಿಐಡಿ, ಸಿಬಿಐ ಕೋರ್ಟಿಗೆ ಮುಖಭಂಗವಾಗಿದೆ ಎಂದು ಆರೋಪಿಸಿದರು.
ಸೌಜನ್ಯಳ ಕುಟುಂಬ ಬಡವರೆಂಬ ಒಂದೇ ಕಾರಣಕ್ಕೆ ನ್ಯಾಯವನ್ನು ನೀಡಬೇಕಾದ ಪೊಲೀಸ್ ಮತ್ತು ವೈದ್ಯಕೀಯ ಪರೀಕ್ಷೆಗಳು ಸಂಪೂರ್ಣ ಒತ್ತಡಕ್ಕೆ ಬಲಿಯಾಗಿ ಕಾನೂನಿಗೆ ಬೇಕಾದ ಸಾಕ್ಷಿ ಆಧಾರಗಳನ್ನು ಮೂಲದಲ್ಲೇ ನಾಶ ಮಾಡಿರುವುದು ಸಿಬಿಐ ಕೋರ್ಟಿನ ತೀರ್ಪಿನಿಂದ ತಿಳಿದುಬಂದಿದೆ. ದೇಶದಲ್ಲಿ ಚಳುವಳಿ ಮತ್ತು ಪ್ರತಿಭಟನೆಗಳಿಂದ ಸಾಕ್ಷಿ ನಾಶದ ನಂತರ ಸತ್ಯವನ್ನು ಎತ್ತಿ ಹಿಡಿಯುವುದು ಕಬ್ಬಿಣದ ಕಡಲೆಕಾಯಿ ಅಷ್ಟು ಕಠಿಣ ಎಂದರು.
ಕಳೆದ ಆ.೨೪ ರಂದು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಮತ್ತು ಸುಪ್ರೀಂ ಕೋರ್ಟಿಗೆ ಸ್ವಯಂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್ ಸ್ವಯಂ ಆಗಿ ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ದೃಷ್ಠಿಯಿಂದ ಸಾರ್ವಜನಿಕರಿಂದ ಬಂದ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಎಂಬುದಾಗಿ ಪರಿಗಣಿಸಿ ಸಾಕ್ಷಿ ನಾಶಪಡಿಸಿದ ಪೊಲೀಸರನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನ್ಯಾಯಾಲಯದ ಪರಿಶೀಲನೆಗೆ ಗುರಿಪಡಿಸಿ ಇವರು ಸತ್ಯ ನುಡಿಯಲು ನಿರಾಕರಿಸಿದಲ್ಲಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಹೇಳಿಕೆ ಪಡೆದು ಸೌಜನ್ಯಳ ಸಾವಿನ ಸತ್ಯವನ್ನು ಬಯಲಿಗೆ ಎಳೆಯುವಂತೆ ಆಗ್ರಹಿಸಿದರು.
ಕಾನೂನಿನ ಪರಿಮಿತಿಯಲ್ಲಿ ಸಾಧ್ಯವಾಗದಿದ್ದಲ್ಲಿ ಕಾನೂನಿನ ಅಮೆಂಡ್ಮೆಂಟ್ ತಂದು ದೇಶದ ಕಟ್ಟ ಕಡೆಯ ಮನು?ನಿಗೂ ನ್ಯಾಯ ಒದಗಿಸುವಲ್ಲಿ ನ್ಯಾಯಾಲಯವು ನ್ಯಾಯವನ್ನು ನೀಡುವುದಕ್ಕೆ ಸಾಧ್ಯವಾದಲ್ಲಿ ಮತ್ತು ಸ್ನೇಹದ ರಾಜಕೀಯ ಬೆಳೆದು ಶಾಂತಿಯು ದೇಶದ ಸಂಪತ್ತಾಗುವುದು ಎಂದು ಅಭಿಪ್ರಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ನಾಸಿರ ಬೇಗಂ, ಶ್ವೇತ, ಶೃತಿ ಉಪಸ್ಥಿತರಿದ್ದರು
Courtesy Justice should be provided to the family of the deceased