ಚಿಕ್ಕಮಗಳೂರು: ನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಆಜಾದ್ ಪಾರ್ಕ್ ಸಾರ್ವಜನಿಕ ಮಹಾ ಗಣಪತಿ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿ ವತಿಯಿಂದ ನೂರಾರು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದು, ಜಿಲ್ಲೆಯ ಶಾಂತಿ ಸೌಹಾರ್ಧತೆಗೆ ಸಾಕ್ಷಿ ಎಂಬಂತೆ ಎಲ್ಲಾ ಧರ್ಮದವರು ಸೇರಿ ವಿಘ್ನವಿನಾಶಕ ಗಣಪತಿ ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗಿದೆ ಎಂದರು.
ಜಿಲ್ಲೆಯಲ್ಲಿಯೇ ಇತಿಹಾಸವನ್ನು ಹೊಂದಿದ ದೊಡ್ಡ ಸಾರ್ವಜನಿಕ ಗಣಪತಿ ಇದಾಗಿದೆ, ಸೇವಾ ಸಮಿತಿ ವಿಶೇಷವೆಂದರೆ ಸಮಿತಿಯ ಅಧ್ಯಕ್ಷರಾದವರು ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ ಹಾಗೂ ನಾನು ಸಹ ಹಿಂದೆ ಅಧ್ಯಕ್ಷನಾಗಿದ್ದು, ಇಂದು ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ದೋರೆತಿರುವುದು ಈ ಬಾರಿಯ ವೈಶಿಷ್ಟ್ಯವಾಗಿದೆ ಎಂದರು.
ಗಣಪತಿ ಸೇವಾಸಮಿತಿ ಹಾಗೂ ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಇತಿಹಾಸ ಇರುವಂತ ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿ ಗಣಪತಿಯನ್ನು ಬೋಳರಾಮೇಶ್ವರ ದೇವಾಲಯದ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಗಣೇಶನನ್ನು ೨೩ ದಿನಗಳು ಪ್ರತಿಷ್ಠಾಪಿಸಿ, ಊರಿನ ಅಭಿವೃದ್ಧಿಗಾಗಿ ಮಳೆ ಬೆಳೆಯನ್ನು ನೀಡಿ ಸಮೃದ್ಧಿ ಹೆಚ್ಚಿಸುವಂತೆ ಗಣೇಶನಲ್ಲಿ ಪ್ರಾರ್ಥಿಸಲಾಗುವುದು ಎಂದರು.
ಹಲವು ವರ್ಷಗಳಿಂದ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದು, ಈ ಬಾರಿಯೂ ೨೩ ದಿನಗಳು ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಹೋಮದ ಜೊತೆಗೆ ಸಮಿತಿಯ ನಿರ್ಧಾರದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ೨೩ ದಿನಗಳು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಸದಸ್ಯರಾದ ಕುಮಾರ್, ರೂಪಕುಮಾರ್, ಪ್ರಧಾನ ಕಾರ್ಯದರ್ಶಿ ಚೇತನ್, ಖಜಾಂಚಿ ಮೋಹನ್ ಕುಮಾರ್, ಕಾರ್ಯಾಧ್ಯಕ್ಷರಾದ ಕುಬೇರ್, ಗೌರವಾಧ್ಯಕ್ಷ ಕೇಶವಮೂರ್ತಿ, ಏಕಾಂತರಾಮ್, ಕೋಟೆ ಈಶ್ವರಪ್ಪ, ದಿವಾಕರ್, ಉಪಾಧ್ಯಕ್ಷರಾದ ಮಂಜುನಾಥ್, ಕೃಷ್ಣಮೂರ್ತಿ ವಿಶ್ವನಾಥ್, ಮಾಲ್ತೇಶ್ ರಾವ್, ಕಾರ್ಯದರ್ಶಿಗಳಾದ ಅಣ್ಣಪ್ಪಶೆಟ್ಟಿ, ಶಿವಶಂಕರ್, ಸಚಿನ್, ಶ್ರೀನಿವಾಸ್, ನಾಗೇಶ್, ಕಲ್ಲೇಶ್, ಪ್ರಸಾದ್, ಕಾರ್ಯಕಾರಿ ಸಮಿತಿ ಸದಸದ್ಯರಾದ ಉಮೇಶ್ಕುಮಾರ್, ಶಿವಶಂಕರ್ ಇತರರು ಉಪಸ್ಥಿತರಿದ್ದರು.
Establishment of concussion for the construction of Azad Park Public Maha Ganapati Mantapa