ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆ ವೇಳೆ ಆಕಸ್ಮಿಕವಾಗಿ ಎತ್ತಿನ ನೊಗ ಬಡಿದು ಯುವಕನೊಬ್ಬ ಸಾವಪ್ಪಿರುವ ದಾರುಣ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಶನಿವಾರ ರಾತ್ರಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಅಜ್ಜಂಪುರ ಮೂಲದ ಯುವಕ ಭರತ್(೨೫) ಮೃತ ದುರ್ದೈವಿಯಾಗಿದ್ದಾನೆ. ಅಜ್ಜಂಪುರ ಪಟ್ಟಣದಲ್ಲಿ ಜೋಡಿ ಎತ್ತಿನಗಾಡಿ ಓಟದ ಸ್ಪರ್ದೆ ಏರ್ಪಡಿಸಲಾಗಿತ್ತು. ಸ್ಪರ್ದೆಯ ಫೈನಲ್ ಪಂದ್ಯದಲ್ಲಿ ವೇಗವಾಗಿ ಓಡಿ ಬಂದ ಜೋಡಿ ಎತ್ತುಗಳ ಗಾಡಿಯನ್ನು ಹಿಡಿದು ನಿಲ್ಲಿಸಲು ಭರತ್ ಮುಂದಾಗಿದ್ದ. ಈ ವೇಳೆ ಆಕಸ್ಮಿಕವಾಗಿ ಎತ್ತಿನಗಾಡಿಯ ನೊಗ ತಲೆಗೆ ಬಡಿದ ಪರಿಣಾಮ ಭರತ್ ತಲೆಗೆ ಗಂಭೀರವಾಗಿ ಗಾಯವಾಗಿದೆ.
ಸ್ಥಳದಲ್ಲಿದ್ದವರು ಕೂಡಲೇ ಭರತ್ನನ್ನು ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಚಿಕಿತ್ಸೆ ಫಲಕಾರಿಯಾಗದೇ ಭರತ್ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A young man died after being hit by the yoke of an ox