ಚಿಕ್ಕಮಗಳೂರು: ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಶಿಕ್ಷಣದ ಅರಿವಿನ ಆಂದೋಲನ ಅವಲೋಕನದ ಅಂಗವಾಗಿ ಜ್ಞಾನ ಪ್ರಸರಣ ಎಂಬ ಕಾರ್ಯಕ್ರಮವನ್ನು ಸೆ. ೧೫ರಂದು ನಗರದ ಹೊರವಲಯದಲ್ಲಿರುವ ದಿ.ಸಿಲ್ವರ್ ಸ್ಕೈ ರೆಸಾರ್ಟ್ ನಲ್ಲಿ ಮಧ್ಯಾಹ ೩.೩೦ಕ್ಕೆ ಆರಂಭವಾಗಲಿದೆ ಎಂದು ಸಂಸ್ಥೆಯ ಎ.ಜಿ.ಎಂ ಕರಿಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿ?ಯ ತಿಳಿಸಿದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಲ್ಕೋ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಡಾಕ್ಟರ್ ಹರೀಶ್ ಹಂದೆಯವರು ವಹಿಸಲಿದ್ದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಗೋಪಾಲಕೃ? ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಮೆಂಡಾ ಫೌಂಡೇಶನ್ನ ಸಲಹೆಗಾರರಾದ ಛೆತ್ರುಮೆಂಡಾ ಅವರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀಮತಿ ವಿಂಧ್ಯಾ ಭಾಗವಹಿಸುವರು ಎಂದರು.
ಜಿಲ್ಲೆಯಲ್ಲಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ಸರ್ಕಾರಿ ೨೦೦ ಶಾಲೆಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ವ್ಯವಸ್ಥೆ ನೀಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಸೌರ ವಿದ್ಯುತ್ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸೇರಿದಂತೆ ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತದೆ ಮುಖ್ಯವಾಗಿ ಅನೇಕ ರೀತಿಯ ಕರಕುಶಲ ಕಸುಬುಗಳನ್ನು ಮಾಡುವ ಜನರಿಗೆ ತಮ್ಮ ಜೀವನೋಪಾಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸೌರವಿದ್ಯುತ್ ಸಂಪರ್ಕ ಮಾತ್ರವಲ್ಲದೆ ಇತರ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಅಸಂಪ್ರಾದಾಯಿಕ ಮೂಲವಾದ ಸೌರಶಕ್ತಿಯನ್ನು ಪರಿಸರಸ್ನೇಹಿ ತಂತ್ರಜ್ಞಾನದೊಂದಿಗೆ ಬಳಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಜಾಗತಿಕ ಹವಾಮಾನದ ಸಮತೋಲನಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ ಸಾಮಾಜಿಕವಾಗಿ ಎಲ್ಲರನ್ನು ಒಳಗೊಳ್ಳುವ ಕೆಲಸ ಮಾಡುತ್ತಿರುವ ಸಂಸ್ಥೆಯು ತನ್ನ ಸಾಮಾಜಿಕ ಭಾಗವಹಿಸುವಿಕೆಯನ್ನು ಇನ್ನ? ಪರಿಣಾಮಕಾರಿಯಾಗಿ ಹೆಚ್ಚಿಸಿಕೊಳ್ಳಲು ವಿವಿಧ ವಲಯಗಳ ವಿ?ಯ ತಜ್ಞರು ಮತ್ತು ಸಂಬಂಧಿಸಿದ ಸಾಮಾಜಿಕ ವಲಯದ ಪಾಲುದಾರರೊಂದಿಗೆ ನಿರಂತರವಾಗಿ ವಿಚಾರ ವಿನಿಮಯ ಮಾಡಿಕೊಳ್ಳಲು ಆಶಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೆಲ್ಕೋ ಶಾಖಾ ವ್ಯವಸ್ಥಾಪಕ ದಯಾನಂದ್ ಉಪಸ್ಥಿತರಿದ್ದರು.
SELCO SOLAR LIGHT PRIVATE LIMITED