ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿ ಪೋಶನ್ ಮಾಸಾಚರಣೆ ಪೌಷ್ಟಿಕ ಆಹಾರ ಶಿಬಿರ, ಗರ್ಭಿಣಿಯರಿಗೆ ಶ್ರೀಮಂತ ಹಾಗೂ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ನಿವೃತ್ತ ಸಹಾಯಕರಿಗೆ ಉಡುಗೊರೆ ಕಾರ್ಯಕ್ರಮವನ್ನು ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂಪಾ ಮಾತನಾಡಿ ಗರ್ಭಾವಸ್ಥೆಯಿಂದ ಬಾಣಂತಿ ಮಗುವಿನ ಆರೈಕೆ ಮತ್ತು ಮಕ್ಕಳ ಲಾಲನೆ ಪಾಲನೆ ಪೋಷಣೆಯೇ ಪೋಶನ್ ಅಭಿಯಾನದ ಉದ್ದೇಶವಾಗಿದ್ದು, ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯಸಂಪತ್ತನ್ನು ಗಳಿಸಿರಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ಮಾತನಾಡಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಎರಡು ಒಂದೇ ನಾಣ್ಯದ ಮುಖಗಳ ಕೆಲಸವಿದ್ದಂತೆ, ಆರೋಗ್ಯಯುತ ಬದುಕಿಗೆ ಉತ್ತಮ ಆಹಾರ ಸೇವನೆ ಅತಿ ಮುಖ್ಯ, ಸಮತೋಲನಾ ಆಹಾರ ಆರೋಗ್ಯಕ್ಕೆ ಹಾದಿ ಕುಟುಂಬದ ನೆಮ್ಮದಿಗೆ ನಾಂದಿ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಗೀತಾ ಮಾತನಾಡಿ ರೋಗ ನಿರೋಧಕ ಹೆಚ್ಚಿಸಿ ಮಾರಕ ರೋಗವನ್ನು ದೂರವಿಟ್ಟು ಆರೋಗ್ಯ ರಕ್ಷಿಸಿಕೊಳ್ಳಲು ಹಸಿರು ಸೋಪ್ಪು ಮತ್ತು ತರಕಾರಿಗಳು ಸಹಕಾರಿ ಆಗಲಿದೆ, ಮತ್ತು ಯೋಗ ಧ್ಯಾನದಿಂದ ಆಗುವ ಅನುಕೂಲಗಳನ್ನು ತಿಳಿಸಿದರು.
ಲಕ್ಯಾ ವಲಯದ ಆಯುಷ್ ವೈದ್ಯಾಧಿಕಾರಿ ಹೇಮಲತಾ ಮಾತನಾಡಿ ಆರೋಗ್ಯವಂತ ಬದುಕಿಗೆ ಪೌಷ್ಟಿಕ ಆಹಾರ ಸೇವನೆ, ಜೀವನಶೈಲಿ ದಿನಚರಿಗಳು ಅತಿ ಮುಖ್ಯ ಮತ್ತು ಅಂಗಾಂಗ ದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಲಕ್ಯಾ ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ ಮಾತನಾಡಿ ಪೌಷ್ಟಿಕ ಆಹಾರ ಸೇವನೆ, ಕೈತೋಟ ಬೆಳಸುವಿಕೆ, ಶುದ್ಧ ನೀರು, ಸ್ವಚ್ಚ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸಿರಿ ಧಾನ್ಯಗಳ ಬಳಕೆಯ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಯಾ ವೃತ್ತದ ಮೇಲ್ವಿಚಾರಕರಾದ ಶ್ವೇತಾ, ಚಂದ್ರಮ್ಮ, ಎಯುಟಿಸಿ ತಾಲೂಕು ಅಧ್ಯಕ್ಷೆ ಶೈಲಾಬಸವರಾಜ್, ಲಕ್ಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರೇಶ್, ಗ್ರಾಪಂ ಅಧ್ಯಕ್ಷ ಹನೀಫ್, ಪ್ರಾಥಮಿಕ ಆರೋಗ್ಯ ಇಲಾಖೆ ಸಿಹೆಚ್ಓ ಪ್ರಶಾಂತ್, ಸುವರ್ಣ, ಲಕ್ಷ್ಮೀ, ಎಲ್.ಹೆಚ್.ವಿ ಸವಿತಾ, ಲಕ್ಯಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Nutritious food camp-Rich for pregnant women-Costume competition for children