ಚಿಕ್ಕಮಗಳೂರು: ಪೋಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪೋಲೀಸ್ ಠಾಣೆಗಳಲ್ಲಿಯೂ ಲೋಕ ಸ್ಪಂದನ ಎಂಬ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಪೋಲೀಸ್ ವರಿಷ್ಠಾಧಿಕಾರಿ ವಿಕ್ರಂಅಮಟೆ ತಿಳಿಸಿದರು.
ನಗರದ ಗ್ರಾಮಾಂತರ ಠಾಣೆಯಲ್ಲಿ ಲೋಕ ಸ್ಪಂದನ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಸಾರ್ವಜನಿಕರ ದೂರುಗಳಿಗೆ ಮತ್ತು ಅವರಿಗೆ ಬೇಕಾಗಿರುವ ಪೊಲೀಸ್ ಸೇವೆಗಳಿಗೆ ಪೊಲೀಸರು ಸ್ಪಂದಿಸಿರುವ ಕುರಿತು ಸಲಹೆ ಮತ್ತು ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಜಾರಿಗೆ ತರಲಾಗಿರುವ ವಿಭಿನ್ನ ವ್ಯವಸ್ಥೆಯೇ ಲೋಕ ಸ್ವಂದನ ಎಂದು ಹೇಳಿದರು.
ಈ ವ್ಯವಸ್ಥೆಯಡಿ ಮೊದಲ ಹಂತದಲ್ಲಿ ಠಾಣೆಗೆ ದೂರು ನೀಡಲು ಬರುವ ದೂರುದಾರರನ್ನು ಸ್ವಾಗತಿಸಿ ಅವರ ಮಾಹಿತಿಯನ್ನು ಸಂದರ್ಶಕರ ವಹಿಯಲ್ಲಿ ನಮೂದಿಸಿ ಅವರ ಭೇಟಿಯ ಉದ್ದೇಶದ ಅನುಸಾರ, ಅವರಿಗೆ ಅಗತ್ಯವಿರುವ ಅಧಿಕಾರಿಗಳ ಬಳಿ ಕಳುಹಿಸಲಾಗುವುದು. ನಂತರ ೨ನೇ ಹಂತದಲ್ಲಿ ದೂರುದಾರರಿಂದ ದೂರು ಸ್ವೀಕರಿಸಿದ ನಂತರ ಇಲಾಖೆಯ ಅಧಿಕಾರಿಗಳ ಸ್ಪಂದನೆಯ ಬಗ್ಗೆ, ಅಧಿಕಾರಿಗಳ ಬೇಡಿಕೆ ಇತ್ತೆ ಎಂಬ ತಮ್ಮ ಅಭಿಪ್ರಾಯಗಳನ್ನು ಕ್ಯೂ ಆರ್ ಕೋಡ್ಗೆ ಸ್ಕ್ಯಾನ್ ಮಾಡಿ ತಮ್ಮ ಮುಕ್ತ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.
ಪ್ರತಿ ತಿಂಗಳು ಈ ದೂರು ಮತ್ತು ಸಲಹೆಗಳನ್ನಾಧರಿಸಿ ಅಧಿಕಾರಿಗಳ ಕಾರ್ಯವೈಖರಿ, ಪ್ರತಿಕೂಲ ಅಭಿಪ್ರಾಯಗಳು ವ್ಯಕ್ತವಾಗಿದ್ದರೆ ಸಂಬಂಧಪಟ್ಟ ಠಾಣೆಯ ಮೇಲೆ ಹೆಚ್ಚಿನ ಗಮನಹರಿಸಿ ಪೋಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕರಾದ ಸತ್ಯನಾರಾಯಣ, ಸಚ್ಚಿನ್ ಸೇರಿದಂತೆ ಹಲವರಿದ್ದರು.
ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ರವರು ಇಂದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲೋಕ ಸ್ಪಂದನ ವ್ಯವಸ್ಥೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಡಿ. ತಮ್ಮಯ್ಯ ರವರು ಭಾಗವಹಿಸಿದ್ದರು.
ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಾನು ನಿಮ್ಮ ಮಿತ್ರಎಂದು ಬರೆದಿರುವ ಬ್ಯಾಡ್ಜ್ ಗಳನ್ನು ಮತ್ತು ದೈನಂದಿನ ಕರ್ತವ್ಯಗಳಿಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗಳನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ವಿತರಿಸಿದರು.
ವ್ಯವಸ್ಥೆಯನ್ನು ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಾರ್ಯಗತಗೊಳಿಸಲಾ ಗಿರುತ್ತದೆ.
Inaugural program of Lok Spandana program at rural station