ಚಿಕ್ಕಮಗಳೂರು: ನಗರದ ವಿಜಯಪುರ ದೊಡ್ಡಗಣಪತಿ ಸೇವಾ ಸಮಿತಿ ವತಿಯಿಂದ ಗಣಪತಿ ಪ್ರತಿಷ್ಟಾಪಿಸಿ ಮಂಗಳವಾರ ೯ನೇ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ ನಡೆಸಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಸಮಿತಿ ಮುಖಂಡರುಗಳು ನಡೆಸಿದರು.
ಈ ವೇಳೆ ಮಾತನಾಡಿದ ಸಮಿತಿಯ ಮುಖ್ಯಸ್ಥ ಧನಂಜಯಗೌಡ ಗಣಪತಿ ಪ್ರತಿಷ್ಟಾಪಿಸಿ ಒಂಭತ್ತನೇ ಪೂರ್ಣಗೊಂಡ ಅನ್ನಸಂಪರ್ತಣೆ ನಡೆಸಲಾಗಿದೆ. ಸೆ.೨೭ ರಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಮಧ್ಯಾಹ್ನ ೩ ಗಂಟೆಗೆ ಗಣಪತಿ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಇಂದಾವರ ಕೆರೆಗೆ ವಿಸರ್ಜಿ ಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಮುಖಂಡರುಗಳಾದ ಶಂಕರ್ಸಿಂಗ್, ಕೇಬಲ್ ಮಂಜು, ಆದರ್ಶ, ಉಮೇಶ್, ರಂಜಿತ್, ರೋಷನ್, ಚಂದು ಮತ್ತಿತರರು ಹಾಜರಿದ್ದರು.
Public reception by Vijayapura Ganapati Samiti