ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರೆಸ್ಕ್ಲಬ್ನ ನೂತನ ಪದಾಧಿಕಾರಿಗಳ ಪಗ್ರಹಣ ಕಾರ್ಯಕ್ರಮ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ೨೦೨೩-೨೫ ಅವಧಿಗೆ ನೂತನ ಅಧ್ಯಕ್ಷರಾಗಿ ಅಕ್ಷರ ತೋರಣ ಪತ್ರಿಕೆ ಸಂಪಾದ ಪಿ. ರಾಜೇಶ್ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ತಾರನಾಥ್, ಖಜಾಂಚಿ ಎನ್.ಕೆ ಗೋಪಿ ಅವರುಗಳಿಗೆ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾಗೂ ಖಜಾಂಚಿ ಜಿ. ವೀರೇಶ್ ಅಧಿಕಾರ ಹಸ್ತಾಂತರ ಮಾಡಿದರು.
ಈ ವೇಳೆ ಪ್ರೆಸ್ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ, ನಿರ್ದೇಶಕ ಉಮೇಶ್ ಕುಮಾರ್ ಮಾತನಾಡಿ, ಪ್ರೆಸ್ಕ್ಲಬ್ ನಡೆದುಬಂದ ಹಾದಿಯನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಪ್ರೆಸ್ಕ್ಲಬ್ಗೆ ಸುಸಜ್ಜಿತವಾದ ಸ್ವಂತ ಕಟ್ಟಡ ಹೊಂದು ಶ್ರಮಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ೨೦೨೩-೨೫ರ ಅವಧಿಯ ಪ್ರೆಸ್ಕ್ಲಬ್ನ ನೂತನ ಉಪಾಧ್ಯಕ್ಷರುಗಳಾದ ಐಸಿರಿ ಪತ್ರಿಕೆ ವರದಿಗಾರ ಡೈಲಿ ಸಲಾರ್ ವರದಿಗಾರ ದಸ್ತಗೀರ್ ಸಾಬ್, ಸಹ ಕಾರ್ಯದರ್ಶಿಗಳಾದ ಜನಮಿತ್ರ ವರದಿಗಾರ ಯೋಗೀಶ್ ಕಾಮೇನಹಳ್ಳಿ, ಭೂಮಿಕ ಟಿವಿ ಸಂಪಾದಕ ಅನಿಲ್ ಆನಂದ್, ನಿರ್ದೇಶಕರುಗಳಾದ ಈ ಸಂಜೆ ವರದಿಗಾರ ಎಂ.ಎಸ್. ಉಮೇಶ್ ಕುಮಾರ್, ಸುದ್ದಿ ಮಾದ್ಯಮ ವರದಿಗಾರ ಶಿವಕುಮಾರ್ ಹಿರೇಗೌಜ, ಜೀ ನ್ಯೂಸ್ ವರದಿಗಾರ ಮಧುಸೂದನ್ ರಾವ್, ಪಬ್ಲಿಕ್ ಟಿವಿ ಕ್ಯಾಮೆರಾಮನ್ ಪುನೀತ್, ಚಿಕ್ಕಮಗಳೂರು ಎಕ್ಸ್ಪ್ರೆಸ್ ಪತ್ರಿಕೆ ಸಂಪಾದಕ ಕಿಶೋರ್ಕುಮಾರ್ ಅಧಿಕರ ಸ್ವೀಕಾರ ಮಾಡಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ತಿಪ್ಪೇರುದ್ರಪ್ಪ, ಕೆ.ಎನ್ ಚಂದ್ರಯ್ಯ, ಪ್ರವೀಣ್ ಸೇರಿದಂತೆ ಪ್ರೆಸ್ಕ್ಲಬ್ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
Chikkamagaluru press club’s new office bearer program