ಚಿಕ್ಕಮಗಳೂರು: ಶೈಕ್ಷಣಿಕ ವರ್ಷದ ಧನಸಹಾಯದ ಅರ್ಜಿಗಳನ್ನು ಖಾಸಗೀಯವರಿಗೆ ಪರಿಶೀಲಿಸಲು ನೀಡಿರುವ ಆದೇಶ ರದ್ದುಪಡಿಸಿ, ಕಾರ್ಮಿಕ ಮಂಡಳಿಯೇ ನಿಭಾಯಿಸುವ ಮೂಲಕ ಅರ್ಹ ಫಲಾ ನುಭವಿಗಳಿಗೆ ಧನಸಹಾಯದ ಮೊತ್ತವನ್ನು ಜಮಾ ಮಾಡಬೇಕು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರುಗಳು ಶೈಕ್ಷಣಿಕ ಧನಸಹಾಯವನ್ನು ಕೂಡಲೇ ಮಂಜೂರಾತಿ ಮಾಡಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್ಕುಮಾರ್ ಕಟ್ಟಡ ಕಾರ್ಮಿಕರಿಗೆ ನಿವೇಶನ ವನ್ನು ಪಡೆದುಕೊಳ್ಳಲು ಕಾರ್ಮಿಕರ ಮಂಡಳಿಯಿಂದ ಪ್ರೋತ್ಸಾಹಧನ ನೀಡಬೇಕು. ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷದವರೆಗೆ ಸಹಾಯಧನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಬೋಗಸ್ ಕಾರ್ಡ್ದಾರರು ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಸೂಕ್ತ ಕಾನೂನು ಕೈಗೊಳ್ಳುವ ಮೂಲಕ ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಮಂಡಳಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು ಎಂದರು.
ಮಂಡಳಿಯಲ್ಲಿ ಉಪಯೋಗಿಸುತ್ತಿರುವ ಹಣವನ್ನು ಕಾರ್ಮಿಕರ ಸದುಪಯೋಗಕ್ಕೆ ಬಳಸಿಕೊಳ್ಳಬೇಕು. ಎಲ್ಲಾ ನರ್ಸಿಂಗ್ ಹೋಂಗಳಲ್ಲಿ ಫಲಾನುಭವಿಗಳು ತುರ್ತು ಚಿಕಿತ್ಸೆ ಪಡೆದುಕೊಂಡರೆ ವೈದ್ಯಕೀಯ ನೀಡುವುದು. ವೈದ್ಯಕೀಯ ವೆಚ್ಚದ ಮೊತ್ತವನ್ನು ಪಡೆಯಲು ೪೮ ಗಂಟೆಯ ಮಿತಿಯನ್ನು ತೆಗೆದು ಖರ್ಚು-ವೆಚ್ಚಗಳ ಆಧಾರದ ಮೇಲೆ ವೆಚ್ಚವನ್ನು ಭರಿಸಬೇಕು. ತಪಾಸಣೆ ವೇಳೆಯಲ್ಲಿ ಪತ್ತೆಯಾಗುವ ರೋಗಗಳಿಗೆ ಉನ್ನತ ಚಿಕಿತ್ಸೆ ಪಡೆಯಲು ನಗದು ರಹಿಗ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ತಿಳಿಸಿದರು.
ನೈಜ ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ಗಳನ್ನು ಕೂಡಲೇ ಪರಿಶೀಲನೆ ನಡೆಸಿ ರದ್ದುಪಡಿಸಬೇಕು. ಹಾಗೂ ಕಾರ್ಮಿಕರ ನೊಂದಣಿಯನ್ನು ಸೇವಾಸಿಂಧುವಿಗೆ ನೀಡದೇ ಹಿಂದಿನ ರೀತಿಯಲ್ಲೇ ಕಾರ್ಮಿಕ ಇಲಾಖೆಯ ಮು ಖಾಂತರವೇ ನೊಂದಣಿ ಮಾಡಿದರೆ ಅನುಕೂಲವಾಗುವ ಜೊತೆಗೆ ಬೋಗಸ್ ಕಾರ್ಡ್ಗಳನ್ನು ತಡೆಗಟ್ಟಬಹುದು ಎಂದರು.
ಕಲ್ಯಾಣ ಮಂಡಳಿಯಲ್ಲಿ ಹಾಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಹಾಗೂ ನೌಕರರನ್ನು ಖಾಯಂಗೊಳಿಸಬೇಕು. ಮುಂದಿನ ದಿನಗಳಲ್ಲಿ ತೆರವಾಗುವ ಖಾಲಿ ಹುದ್ದೆಗೆ ಮಂಡಳಿಯಿ ಂದ ವಿದ್ಯಾರ್ಥಿ ಸಹಾಯಧನ ಪಡೆದು ಅತಿಹೆಚ್ಚು ಅಂಕಗಳಿಸಿದ ನೈಜ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಸದಸ್ಯರಾದ ಸಲೀಂ, ಗಣೇಶ್ ಹಾಜರಿದ್ದರು.
District Building Workers Union