ಚಿಕ್ಕಮಗಳೂರು: ಅಮಾಯಕರು, ಅನ್ಯಾಯಕ್ಕೆ ಒಳಗಾದವರು, ಧ್ವನಿ ಇಲ್ಲದವರ ಧ್ವನಿಯಾಗಿ ಮಾಧ್ಯಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಅಭಿಪ್ರಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂ ಡರು ಶುಕ್ರವಾರ ಚಿಕ್ಕಮಗಳೂರು ಪ್ರೆಸ್ಕ್ಲಬ್ ನೂತನ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರುಗಳಿಗೆ ಹಾಗೂ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಅರಣ್ಯ ಇಲಾಖೆ ವಾಹನ ಚಾಲಕ ಅನ್ಸರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಉಂಟಾಗುತ್ತಿರುವ ಅಸಮಾನತೆ, ಸಮಸ್ಯೆ, ಸವಾಲು ಹಾಗೂ ಧ್ವನಿ ಇಲ್ಲದ ಜನಸಾಮಾನ್ಯರ ಪರವಾಗಿ ಮಾಧ್ಯಮಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತದೆ. ಆಡಳಿತ ಯಂತ್ರ, ಜನಪ್ರತಿನಿಧಿಗಳು ಎಚ್ಚರ ತಪ್ಪಿದ್ದಾಗ ಅವರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು ಮಾಧ್ಯಮಗಳು ಅಚ್ಚುಕಟ್ಟಾಗಿ ನಿರ್ವ ಹಿಸುತ್ತಿದ್ದು, ಚಿಕ್ಕಮಗಳೂರು ಪ್ರೆಸ್ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರೆಸ್ಕ್ಲಬ್ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮ ಆಯೋಜಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಭರತ್ ಮಾತನಾಡಿ, ತನ್ನ ರಾಜಕೀಯ ಜೀವನ ಆರಂಭದಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಅವರ ಸಲಹೆ, ಸಹಕಾರ ದಿಂದ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ಕೋವಿಡ್ನಂತರ ಅಂತ್ಯತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಮಾಧ್ಯಮದವರು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇಂದಿಗೂ ಅನೇಕ ಮಾಧ್ಯಮ ಪ್ರತಿನಿಧಿಗಳು ಸಂಕಷ್ಟದಲ್ಲಿದ್ದು, ಅವರಿಗೆ ಪ್ರತ್ಯೇಕ ಬಡಾವಣೆ ರೂಪಿಸುವ ನಿವೇಶನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡ ತರುವ ಮೂಲಕ ಮಾಧ್ಯಮದವರಿಗೆ ನಿವೇಶನ ನಿರ್ಮಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರೆಸ್ಕ್ಲಬ್ನಲ್ಲಿ ಕೇವಲ ಪ್ರತಿಕಾಗೋಷ್ಟಿಗಳಿಗೆ ಮಾತ್ರ ಸೀಮಿತಗೊಳಿಸದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಲಬ್ನ ಅಭಿವೃದ್ದಿಗೆ ಶ್ರಮಿಸು ವುದಾಗಿ ಹೇಳಿದರು.
ಇದೇ ವೇಳೆ ಪ್ರಸ್ಕ್ಲಬ್ ಆಡಳಿತ ಮಂಡಳಿಯ ಚಂದ್ರೇಗೌಡ, ತಾರಾನಾಥ್, ಗೋಪಿ, ಯೋಗೀಶ್ ಕಾಮೇನ ಹಳ್ಳಿ, ಅಶ್ವಿತ್, ಪುನೀತ್, ಆನಿಲ್ ಆನಂದ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜೈಭೀಮ್ ಸಂಘಟನೆಯ ಹೊನ್ನೇಶ್, ಕಾಂಗ್ರೆಸ್ ಮುಖಂಡರುಗಳಾದ ಕುಶಾಲ್, ಸೋಮಶೇಖರ್, ಮಧು, ಸುರೇಶ್, ಭರತ್, ಹುಣಸೆಮಕ್ಕಿ ಲಕ್ಷ್ಮಣ್, ವಕೀಲ ಅನಿಲ್, ಹರೀಶ್ ಮಿತ್ರ, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.
Practitioners are felicitated in the tourist temple of the city