ಚಿಕ್ಕಮಗಳೂರು: ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ವತಿಯಿಂದ ಆಯೋಜಿಸಿದ್ದ ೫೦ನೇ ವರ್ಷದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮದ ಮೆರವಣಿಗೆ ಅದ್ಧೂರಿಯಾಗಿ ನಗರದಲ್ಲಿ ನಡೆಯಿತು.
ನಗರದ ಬೋಳರಾಮೇಶ್ವರ ದೇವಾಲದಿಂದ ಅಯ್ಯಪ್ಪ ಸ್ವಾಮಿಯವರನ್ನು ಅಲಂಕೃತವಾದ ರಥದ ಮೇಲೆ ಕುಳ್ಳಿರಿಸಿ ನಗರದ ಪ್ರಮುಖ ರಾಜಬೀದಿಗಳಲ್ಲಿ ತಾಲಿಪ್ಪೋಲಿ, ಚಂಡೆ, ನಾದಸ್ವರ ವಾದನ, ಪಾಂಡಿಮೇಳ, ತಾಯಂಬಕ, ಸಿಂಗಾರಿ ಮೇಳ, ಪಂಚವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.
ಅಯ್ಯಪ್ಪ ಸ್ವಾಮಿಯವರನ್ನು ಅಲಂಕೃತವಾದ ರಥದ ಮುಂಭಾಗ ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ತೆಂಗಿನಕಾಯಿ ಹೊಡೆದು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ದೇಶದಾದ್ಯಂತ ನಗರ ಮತ್ತು ಗ್ರಾಮಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಮಾಲೆ ಧರಿಸಿ ಕಠಿಣ ವ್ರತವನ್ನು ಆಚರಿಸಿ ಕುಟುಂಬ ಮತ್ತು ಗ್ರಾಮಕ್ಕೆ ಒಳ್ಳೆಯದಾಗಲೆಂದು ಅತ್ಯಂತ ಶ್ರದ್ದಾ ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ನೆರೆವೇರಿಸಿದರು. ನಗರದ ರಸ್ತೆಗಳಲ್ಲಿ ನೂರಾರು ಜನರು ಮೆರವಣಿಗೆಯನ್ನು ಕುತೂಹಲದಿಂದ ವೀಕ್ಷಣೆ ಮಾಡಿದರು.
ಪೂಜಾ ಸಮಿತಿಯ ಅಧ್ಯಕ್ಷರಾದ ನಾರಾಯಣಗೌಡ ಮಾತನಾಡಿ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಅಯ್ಯಪ್ಪಸ್ವಾಮಿ ಮೆರವಣಿಗೆಯನ್ನು ವಿವಿಧ ತಂಡಗಳಾದ ಚಂಡೆ ಮೇಳ, ಹುಲಿ ಕುಣಿತ, ಸಿಂಗಾರಿ ಮೇಳ, ಗೊಂಬೆ ಕುಣಿತ, ಪಾಂಡಿಮೇಳ, ತಾಯಂಬಕ, ಪಂಚವಾದ್ಯಗಳ ಮೂಲಕ ವಿಜೃಂಭಣೆಯ ಮೆರವಣಿಗೆ ನೆಡೆಸಲಾಯಿತು, ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು, ಭಕ್ತಾಧಿಗಳು ಮತ್ತು ಸಾರ್ವಜನಿಕರು ಮೆರವಣಿಗೆ ಉದ್ಧಕ್ಕೂ ಕರ್ಪೂರದ ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಸಿ.ಟಿ.ರವಿ, ನಗರಸಭೆ ಆಯುಕ್ತರಾದ ಬಸವರಾಜ್, ಸಮಿತಿ ಗೌರವಾಧ್ಯಕ್ಷ ದಿನೇಶ್ ಪೊದುವಾಳ್, ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಸಚ್ಚಿದೇವ್, ಖಜಾಂಚಿ ಜೀವನ್.ಕೆ.ಶೆಟ್ಟಿ, ಉಪಾಧ್ಯಕ್ಷರಾದ ಸಾರಥಿ ಮಂಜುನಾಥ್, ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಉಮೇಶ್, ಲಕ್ಷ್ಮೀಕಾಂತ್, ಕೋಟೆ ನಟರಾಜ್, ದಿಲೀಪ್ರಾಜ್, ಸತೀಶ್, ಸಹಕಾರ್ಯದರ್ಶಿಗಳಾದ ಚೆನ್ನಕೇಶವ, ಮನೋಹರ್, ಜವರಪ್ಪ, ಯಶ್ವಂತ್, ಎಸ್.ಡಿ.ಎಂ ಮಂಜು, ರಾಜುಶೆಟ್ಟಿ, ಚೇತನ್, ರಂಗನಾಥ್, ಪ್ರಶಾಂತ್, ಮಹಾದೇವ, ಕಿರಣ್, ಮುಖೇಶ್ಸಿಂಗ್, ಸದಾಶಿವ ಗುರುಸ್ವಾಮಿ, ಕಿರಣ್, ರಾಮಚಂದ್ರ ಉಪಸ್ಥಿತರಿದ್ದರು.
Sri Ayyappa Swami procession was held in grand style on the royal streets of the city