ಚಿಕ್ಕಮಗಳೂರು: ಸುಮಾರು ೩೨ ವಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಗೆ ಜಮೀನು ಕಳೆದುಕೊಂಡ ಕೆಲವು ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಮೂಡಿಗೆರೆ ಶಾಸಕರು ನಿರ್ಲಕ್ಷ್ಯ ವಹಿಸುತ್ತಿದ್ದು, ೨೦೨೪ ರ ಮಾರ್ಚ್ ಒಳಗೆ ಪರಿಹಾರ ಕೊಡಿಸದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸುವುದಾಗಿ ಸಂತ್ರಸ್ತ ರೈತ ಮುಖಂಡ ಸೋಮೇಗೌಡ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ೨೦೧೩ ರಲ್ಲಿ ಕೆಲವು ರೈತ ಜಮೀನು ಸ್ವಾಧೀನಪಡಿಸಿಕೊಂಡು ಪರಿಹಾರದ ಹಣ ನೀಡದೆ ಕಾಲುವೆ ನಿರ್ಮಿಸಲಾಗಿತ್ತು. ಕಾಲುವೆ ನಿರ್ಮಿಸಿದ ಜಮೀನುದಾರರಿಗೆ ಭೂ ಪರಿಹಾರ ಹಾಗೂ ಬೆಳೆ ಪರಿಹಾರ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು ಈವರೆಗೆ ಪರಿಹಾರ ನೀಡಿಲ್ಲ ಎಂದು ಹೇಳಿದರು.
ಹಿಂದೆ ಎಂ.ಪಿ ಕುಮಾರಸ್ವಾಮಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಮಕ್ಷಮದಲ್ಲಿ ರೈತರೊಂದಿಗೆ ಸಭೆ ನಡೆಸಿ ಕಾಲುವೆ ನಿರ್ಮಾಣವಾದ ಜಮೀನಿಗೆ ಹಾಗೂ ಬೆಳೆ ಪರಿಹಾರ ಕೊಡಲು ಒಪ್ಪಿಗೆಯಾಗಿತ್ತು. ಆದರೆ ಈವರೆಗೂ ರೈತರಿಗೆ ಪರಿಹಾರ ಕೊಟ್ಟಿಲ್ಲ ಕಾಲುವೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಆಗಿನ ಶಾಸಕರು ೬.೩೮ ಕೋಟಿ ರೂ ಹಣ ಕೊಡಿಸಿದ್ದಾರೆ ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಯಾವುದೇ ಪ್ರಯತ್ನ ನಡೆಸಿಲ್ಲವೆಂದು ಆರೋಪಿಸಿದರು.
ಈ ಸಂಬಂಧವಾಗಿ ಭೂಸ್ವಾಧೀನ ಅಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿಯವರನ್ನು ಸಂಪರ್ಕಿಸಿದರೆ ಹಣ ಬಿಡುಗಡೆ ಆಗುವವರಿಗೆ ಯಾವುದೇ ಪ್ರಯತ್ನ ಮುಂದುವರಿಸುವುದಿಲ್ಲವೆಂದು ಹೇಳುತ್ತಾರೆ. ಈಗ ಆಯ್ಕೆ ಆಗಿರುವ ಶಾಸಕಿ ನಯನ ಮೋಟಮ್ಮ ಬೆಳೆಯ ಅನೇಕ ಬಾರಿ ಕೇಳಿಕೊಂಡರು ಇಲ್ಲಸಲ್ಲದ ಸಬೂಬು ಹೇಳಿಕೊಳ್ಳುತ್ತಾ ಸಂತ್ರಸ್ತ ರೈತರಿಗೆ ಪರಿಹಾರ ಕೊಡಿಸಲು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ದೂರಿದರು.
ಶಾಸಕಿ ನಯನಮೋಟಮ್ಮ ಅವರು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ರೈತರಿಗೆ ಬೆಳೆ ಪರಿಹಾರ ಹಾಗೂ ೨೦೧೩ರ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ಕೊಡಿಸುವಂತೆ ಒತ್ತಾಯಿಸಿದ ಅವರು ೨೦೨೪ ರ ಮಾರ್ಚ್ ತಿಂಗಳ ಒಳಗೆ ತಮಗೆ ಬರಬೇಕಾದ ಪರಿಹಾರ ದೊರಕಿಸಿಕೊಡದಿದ್ದರೆ ಶಾಸಕರ ಮನೆ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಇನ್ನೋರ್ವ ಸಂತ್ರಸ್ಥ ರೈತ ಎಚ್.ಡಿ ಹುಚ್ಚೇಗೌಡ ಉಪಸ್ಥಿತರಿದ್ದರು
Protest in front of Mudigere MLA’s house demanding compensation